ಮೈಸೂರು ದಸರಾ: ವಿಜಯ್ ಪ್ರಕಾಶ್ ಹಾಡು, ಸ್ವರ್ಗ ಧರೆಗಿಳಿಸಿದ ರಾಗಿಣಿ
ಮೈಸೂರು, ಅಕ್ಟೋಬರ್ 13: ವರ್ಣರಂಜಿತ ವಿದ್ಯುತ್ ಬೆಳಕಿನಾಟದ ಸಂಗೀತದ ಅಬ್ಬರಕ್ಕೆ ಯುವ ಮನಸ್ಸುಗಳು ಹುಚ್ಚೆದ್ದು ಕುಣಿದು ಕುಪ್ಪಳಿಸುವ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಕಾರ್ಯಕಮಗಳ ಪ್ರೋತ್ಸಾಹಕ್ಕೆ ಎಂದೂ ಕೊರತೆ ಇಲ್ಲ ಎಂಬುದನ್ನು ಸಾಬೀತು ಮಾಡಿದವು.
'ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜ ಕುಮಾರ..' ಎಂದು ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಹಾಡುತ್ತಿದ್ದಂತೆ, ಮಹಾರಾಜ ಕಾಲೇಜು ಮೈದಾನದ ಸುತ್ತ ಯುವಪಡೆ ಹಾಡಿಗೆ ಧ್ವನಿಗೂಡಿಸಿದರು.
ತಂತಮ್ಮ ಮೊಬೈಲ್ ಗಳ ಟಾರ್ಚ್ ಹೊತ್ತಿಸಿ ಹಾಡಿನ ಲಯಕ್ಕೆ ಕೈಮೇಲೆತ್ತಿ ತೂಗುದ್ದಿ ಹಾಡಿನ ಮಾಧುರ್ಯಕ್ಕೆ, ಮೈಸೂರು ಯುವಕರ ಸಂಗೀತ ಪ್ರೀತಿಗೆ ಸಾಕ್ಷಿಯಂತೆ ಕಂಡಿತು. ಸಂಗೀತದ ಕಿನ್ನರ ಲೋಕ ಮೈಸೂರಿನಲ್ಲಿ ನಿನ್ನೆ ತೆರೆದುಕೊಂಡಿತ್ತು.
ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ ವೇದಿಕೆ ಏರಿದ ವಿಜಯಪ್ರಕಾಶ್ , ಆರಂಭದಲ್ಲಿ ಅವರ ತಂದೆ ಎಲ್.ರಾಮಶೇಷು ರಚಿಸಿರುವ ಚಾಮುಂಡೇಶ್ವರಿ ಓಂ ಮಾತಾ ತಾಯಿ' ಎನ್ನುವ ಭಕ್ತಿಗೀತೆಯೊಂದಿಗೆ ಸಂಗೀತದ ರಸದೌತಣ ಆರಂಭಿಸಿದರು.

ಗೊಂಬೆ ಹೇಳುತೈತೆ ಹಾಡು ಸೂಪರ್ ಹಿಟ್
ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ' ಸಿನಿಮಾದ ಗೊಂಬೆ ಹೇಳುತೈತೆ ನೀನೇ ರಾಜಕುಮಾರ' ಹಾಡನ್ನು ಹಾಡುತ್ತಿದ್ದಂತೆ ಮಹಾರಾಜ ಕಾಲೇಜು ಮೈದಾನದಲ್ಲಿದ್ದ ಯುವಸ್ತೋಮ ಹೆಜ್ಜೆ ಹಾಕಿತು.

ಮೋಡಿ ಮಾಡಿದ ರಕ್ಷಿತ್-ರಶ್ಮಿಕಾ ಜೋಡಿ
ನಂತರ ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ, ಎಂಬ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಹಾಡಿಗೆ ಯುವಜನಸ್ತೋಮದ ಮಧ್ಯದಿಂದ ಧ್ವನಿಗೂಡಿಸಲು ಹೇಳುತ್ತಿದ್ದಂತೆ ಸಂಭಮದಿಂದ ಧ್ವನಿಗೂಡಿಸಿದರು. ಶಿಳ್ಳೆ ಹೊಡೆಯುತ್ತ ಕುಣಿದು ಕುಪ್ಪಳಿಸಿದರು.

ಯುವಕರ ಎದೆ ಝಲ್ ಎನಿಸಿದ ರಾಗಿಣಿ ಕುಣಿತ
ಹಲವು ಚಲನಚಿತ ಗೀತೆಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಹುಟ್ಟೂರಾದ ಮೈಸೂರಿನ ಅಪಾರ ಕಾಳಜಿ ಮೆರೆದರು. ನಟಿ ರಾಗಿಣಿ ದ್ವಿವೇದಿ ಹಾಗೂ ತಂಡದವರು ತರ ತರ ಅನ್ನಿಸುತ್ತಿದೆ ನನ್ನಲಿ ಏಕೋ' ಸೇರಿದಂತೆ ಹಾಡಿದ ಕನ್ನಡ ಹಾಗೂ ಹಿಂದಿ ಗೀತೆಗಳ ಮಿಶ್ರಣಕ್ಕೆ ಸಭಿಕರು ಹೆಜ್ಜೆ ಹಾಕಿದರು.

ಸಿಎಂ, ಸುಧಾ ಮೂರ್ತಿ ಚಾಲನೆ
ಯುವದಸರಾ ಕಾರ್ಯಕಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಚಾಲನೆ ನೀಡಿ ಶುಭಕೋರಿದರು. ಇನ್‍ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಶಿವಶಂಕರರೆಡ್ಡಿ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications