ಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳು
ಮೈಸೂರು, ಅಕ್ಟೋಬರ್. 15: ಭಾನುವಾರ ನಿಲ್ಲದ ಮಳೆ ಅಬ್ಬರಕ್ಕೆ ಯುವ ಸಮೂಹ ಜಗ್ಗಲಿಲ್ಲ. ಬದಲಾಗಿ ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು.ಹೌದು, ಯುವ ದಸರಾದ ಮೂರನೇ ದಿನ ಎಲ್ಲೆಲ್ಲೂ ಸಂಗೀತದ ಝೇಂಕಾರ.
ಮಹಾರಾಜ ಕಾಲೇಜು ಮೈದಾನದಲ್ಲಿ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಅವರ ಗಾಯನ ಹಾಗೂ ನೃತ್ಯದ ಮೋಡಿಗೆ ಫಿದಾ ಆದವರೇ ಇಲ್ಲ. ಯುವ ದಸರಾ ವೇದಿಕೆ ಏರಿದ ಅರ್ಮಾನ್ ಮಲ್ಲಿಕ್ 'ನಮ್ಮ ಮೈಸೂರು, ಹೇಗಿದ್ದೀರಾ'?...ಎಂದು ಹುಮ್ಮಸ್ಸಿನಲ್ಲಿ ಸಂಗೀತ ಆರಂಭಿಸಿದರು.
ಮೊದಲಿಗೆ ಜಾ ಹೋ ಮುಷ್ಕರನಾ ಹೈ' ಗೀತೆ ಹಾಡಿದರು. ಬಸು ತೇರಾ, ಬಸು ಬನ್ಜೂ ತೇರಾ ಸಬ್ ತೇರಾ' ಗೀತೆಯನ್ನು ಹಾಡುತ್ತ ಯುವಕರತ್ತ ಮೈಕ್ ತೋರಿಸಿ ಹಾಡಿಗೆ ಧ್ವನಿ ಗೂಡಿಸುವಂತೆ ಹೇಳುತ್ತಿದ್ದಂತೆ ಮಳೆಯ ಅಬ್ಬರಕ್ಕೂ ಸೆಡ್ಡು ಹೊಡೆಯುವಂತೆ ಯುವಕರಿಂದ ಗಾಯನ ಕೇಳಿ ಬಂತು.

ಕನ್ನಡದ ಚೌಕ ಬಾರ' ಸಿನಿಮಾದ ಅಪ್ಪ.. ಐ ಲವ್ ಯೂ ಪ...ಎಂದು ಹಾಡಿದ ಅನುರಾಧ ಭಟ್ ಹಾಡಿಗೆ ಮನಸೋಲದವರಿಲ್ಲ. ನಿಂತಲ್ಲಿಯೇ ಹಾಡಿನ ಸಾಲಿಗಳಿಗೆ ಗುನುಗಿದರು. ಅರ್ಮಾನ್ ಮಲ್ಲಿಕ್ ಹಾಗೂ ಅನುರಾಧ ಭಟ್ ಜೊತೆಗೂಡಿ ಹಾಡಿದ ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ....ಹಾಡುವ ಮೂಲಕ ವೇದಿಕೆಯಲ್ಲಿ ಸಂಗೀತದ ಮಳೆಯನ್ನೇ ಸುರಿದರು.
'ನೋಡವಳಂದಾವ.. ಮುದ್ದಿನ ಮಾಲೆ ಚಂದಾವ..', ಮೆನ್ ಹೂನ್ ಹೀರೊ ತೆರಾ..', 'ಕುಚ್ ಬಿ ನಹಿ ಏ ಜಹಾ..' 'ಸಬ್ ತೆರಾ.. ಬೋಲ್ ದೊ ನ ಝರಾ' ಹಾಡುಗಳಿಗೆ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು. ಯುವ ಸ್ಕೂಲ್ ಆಫ್ ಡಾನ್ಸ್ ತಂಡದವರು ಹೂವಿನ ಲೋಕವೇ ಇಲ್ಲಿ ಗೆಳತಿಯರಲ್ಲಿವೇ', 'ಹಾಡು ಸಂತೋಷಕ್ಕೆ...' ಗಾಯನಕ್ಕೆ ನೃತ್ಯ ಮಾಡಿದರು.

ಯುಎಸ್‍ಎ ತಂಡ ವಾರೆ ನೋಟ ನೋಡ್ತಯ್ತೆ...ಕೆಜ್ ಡ್ಯಾನ್ಸ್ ಅಕಾಡೆಮಿಯಿಂದ ರಿದ್ದಿ ಸಿದ್ದಿ ವೃದ್ಧಿ ಹೋತಿ' ಹಾಡಿನ ಮೂಲಕ ಭಕ್ತಿಯ ಸುಧೆ ಹರಿಸಿದರು. ಕೆಎಸ್ ಐಸಿ ಮೈಸೂರು ಪ್ರಾಯೋಜಿತದಿಂದ ಮೈಸೂರು ಸಿಲ್ಕ್ ದಿರಿಸಿನಲ್ಲಿ ಮಾರ್ಜಲದ ನಡಿಗೆ ಮೂಲಕ 22ಕ್ಕೂ ಹೆಚ್ಚು ಮಾಡೆಲ್ ಗಳು ವಯ್ಯಾರ ಪ್ರದರ್ಶಿಸಿದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications