ನಾಗ್ಪುರ ಜೈಲಿನಲ್ಲಿ ಯಾಕೂಬ್ ಮೆಮನ್‌ಗೆ ಗಲ್ಲು

ಮುಂಬೈ, ಜುಲೈ 30 : ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆಯ ನಂತರ ಕುಟುಂಬದವರಿಗೆ ಶವವನ್ನು ಹಸ್ತಾಂತರ ಮಾಡಲಾಗಿದ್ದು, ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮಾಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ಗುರುವಾರ ಮುಂಜಾನೆ 6.40ಕ್ಕೆ ಯಾಕೂಬ್‌ನನ್ನು ಗಲ್ಲಿಗೇರಿಸಲಾಗಿದೆ. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು, ತನಗೆ ಕ್ಷಮಾದಾನ ನೀಡಬೇಕು ಎಂದು ಯಾಕೂಬ್ ಮೆಮನ್ ನಡೆಸಿದ ಎಲ್ಲಾ ಹೋರಾಟಗಳು ಅಂತ್ಯಗೊಂಡಿದ್ದವು. [ದಶಕದಲ್ಲಿ ಗಲ್ಲಿಗೇರುತ್ತಿರುವ 3ನೇ ಭಾರತೀಯ ಯಾಕೂಬ್]

yakub memon

ಯಾಕೂಬ್ ಮೆಮನ್ ಮೃತಪಟ್ಟಿದ್ದಾನೆ ಎಂದು ವೈದ್ಯರು 7 ಗಂಟೆಗೆ ಖಚಿತ ಪಡಿಸಿದ್ದು, ನಂತರ ಮೃತದೇಹವನ್ನು ನೇಣು ಕಂಬದಿಂದ ಇಳಿಸಲಾಗಿದೆ. ದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಯಾಕೂಬ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಹಿನ್ನಲೆಯಲ್ಲಿ ನಾಗ್ಪುರ ಜೈಲು, ಮುಂಬೈ ನಗರ ಮತ್ತು ಮೆಮನ್ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. [ಜುಲೈ 30: ಯಾಕೂಬ್ ಮೆಮನ್ ಗೆ ಶಾಪವಾದ '2' ಸಂಖ್ಯೆ]

ಮಧ್ಯರಾತ್ರಿ ಹೈಡ್ರಾಮ : ಯಾಕೂಬ್ ಮೆಮನ್ ಗಲ್ಲು ಶಿಕ್ಷೆ ತಡೆಯಲು ಬುಧವಾರ ಮಧ್ಯರಾತ್ರಿ ಹೈಡ್ರಾಮ ನಡೆದಿದೆ. ಯಾಕೂಬ್ 2ನೇ ಬಾರಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 10.45ಕ್ಕೆ ತಿರಸ್ಕರಿಸಿದರು. ಇದರಿಂದ ಯಾಕೂಬ್ ಗಲ್ಲು ಶಿಕ್ಷೆ ತಡೆಗೆ ಇದ್ದ ಎಲ್ಲಾ ಹಾದಿಗಳು ಮುಚ್ಚಿದಂತಾಯಿತು. [1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು-timeline]

ಆದರೆ, ತಡರಾತ್ರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಮೂವರು ವಕೀಲರು ಗಲ್ಲು ಶಿಕ್ಷೆಗೆ ತಡೆ ಕೋರಿ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸಕ್ಕೆ ಆಗಮಿಸಿದರು. ಈ ಅರ್ಜಿಯ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಕೋರಿದರು. 12.45ಕ್ಕೆ ವಿಚಾರಣೆಗೆ ಎಚ್.ಎಲ್.ದತ್ತು ಅವರು ಅನುಮತಿ ಕೊಟ್ಟರು.

ಎಚ್.ಎಲ್.ದತ್ತು ಅವರು ರಚನೆ ಮಾಡಿದ್ದ ತ್ರಿಸದಸ್ಯ ಪೀಠದ ಎಲ್ಲಾ ನ್ಯಾಯಮೂರ್ತಿಗಳನ್ನು ಎಬ್ಬಿಸಲಾಯಿತು. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಪ್ರಫುಲ್ಲಾ ಸಿ ಪಂತ್ ಹಾಗೂ ಅಮಿತಾವ್ ರಾಯ್ ಅವರು ಮೆಮನ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನಿಡುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಹಾಲ್‌ ನಂ 4ರಲ್ಲಿ 1.30ಕ್ಕೆ ಆರಂಭಿಸಿದರು. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಯಿತು.

ಈ ತೀರ್ಪು ಪ್ರಕಟಗೊಂಡ 90 ನಿಮಿಷಗಳ ಬಳಿಕ ಯಾಕೂಬ್‌ನನ್ನು ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇಂದು ಬೆಳಗ್ಗೆ 10.30ಕ್ಕೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಯಾಕೂಬ್ ಗಲ್ಲು ಶಿಕ್ಷೆ ಕುರಿತು ಅಧಿಕೃತ ಹೇಳಿಕೆ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+