ಡ್ರಮ್‌ನಲ್ಲಿತ್ತು ಮಹಿಳೆಯ ಶವ ಆದರೆ ರುಂಡ, ಕಾಲುಗಳು, ಬಲಗೈ ಮಿಸ್ಸಿಂಗ್
ಮುಂಬೈ,ಏ.17: ಡ್ರಮ್‌ನಲ್ಲಿ ಶವವೊಂದು ಪತ್ತೆಯಾಗಿದ್ದು ಆದರೆ ರುಂಡ, ಕಾಲುಗಳು ಹಾಗೂ ಬಲಗೈ ಇಲ್ಲದಿರುವ ವಿಚಿತ್ರ ಘಟನೆ ಮುಂಬೈನ ಭೀವಂಡಿಯ ಸೊನಲೆ ಗ್ರಾಮದಲ್ಲಿ ನಡೆದಿದೆ.
ಮಹಿಳೆ ಭೀವಂಡಿಯ ನಿವಾಸಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಣೆಯಾಗಿರುವ ಕುರಿತು ಯಾವ್ಯಾವ ದೂರುಗಳು ಬಂದಿದೆ ಅವುಗಳನ್ನು ಪರಿಶೀಲಿಸುತ್ತಿದ್ದಾರೆ.
ಭೀವಂಡಿ ಪೊಲೀಸರಿಗೆ ಕರೆಯೊಂದು ಬಂದಿತ್ತು. ಡ್ರಮ್‌ನಲ್ಲಿ ಮಹಿಳೆಯ ಶವ ಸಿಕ್ಕಿದೆ ಆದರೆ ತಲೆ, ಕೈಕಾಲು ಇಲ್ಲ ಎನ್ನುವ ಮಾಹಿತಿ ನೀಡಿದ್ದರು ಕೂಡಲೇ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೇಹವನ್ನು ಮೂರು ಭಾಗ ಮಾಡಲಾಗಿತ್ತು.
ಶವ ದೊರೆತ ಪ್ರದೇಶದ ಆಸುಪಾಸಿನಲ್ಲಿ ಉಳಿದ ಭಾಗಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜವಾಗಿಲ್ಲ, ಈಗ ಮೂರು ಪೊಲೀಸ್ ತಂಡಗಳನ್ನು ನಿಯೋಜಿಸಿ ಕೊಲೆಗಾಗರರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.