ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ರಾಜ್ ಠಾಕ್ರೆ ಪಕ್ಷದ ಕಾರ್ಯಕರ್ತರಿಂದ ಮಹಿಳೆಗೆ ಕಪಾಳಮೋಕ್ಷ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 01: ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತ ಮಹಿಳೆಯೊಬ್ಬರನ್ನು ತಳ್ಳಿ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಗಸ್ಟ್ 28 ರಂದು ವಿನೋದ್ ಅರ್ಗಿಲೆ ನೇತೃತ್ವದ ಎಂಎನ್‌ಎಸ್ ಕಾರ್ಯಕರ್ತರು ಕಂಬಕ್ಕೆ ಹಾಕಿದ ಪ್ರಚಾರ ಫಲಕಗಳಿಗೆ ಪ್ರಕಾಶ್ ದೇವಿ ಆಕ್ಷೇಪಿಸಿದ್ದರು.

ವಿಡಿಯೋದಲ್ಲಿ ಕೆಲವರು ಪ್ರಕಾಶ್ ದೇವಿ ಅವರನ್ನು ಎಳೆದಾಡಿರುವುದು ಕಂಡುಬಂದಿದೆ. ಮಾತ್ರವಲ್ಲದೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರಿಗೆ ಹೊಡೆಯುವುದು ತಳ್ಳುವುದು ವಿಡಿಯೋದಲ್ಲಿ ಕಂಡುಬಂದಿದೆ. ದಾರಿಹೋಕರು ಮಧ್ಯಪ್ರವೇಶಿಸಿ ಅವರನ್ನು ಬಿಡಿಸಿದ್ದಾರೆ. ಈ ಎಲ್ಲಾ ದೃಶ್ಯಗಳು 80 ಸೆಕೆಂಡುಗಳ ಕ್ಲಿಪ್ ನಲ್ಲಿ ಸರೆಯಾಗಿದೆ.

Woman slapped by Raj Thackeray Party workers in Mumbai: video viral

ಪಕ್ಷದ ಕಾರ್ಯಕರ್ತರು ಮುಂಬಾ ದೇವಿ ಪ್ರದೇಶದಲ್ಲಿ ಬಿದಿರಿನ ಕಂಬಗಳನ್ನು ಸ್ಥಾಪಿಸುತ್ತಿದ್ದರು. ಅದು ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಆದರೆ, ಪ್ರಕಾಶ್ ದೇವಿ ಅವರ ಔಷಧಿ ಅಂಗಡಿಯ ಮುಂದೆ ಅದನ್ನು ಸ್ಥಾಪಿಸಬೇಡಿ ಎಂದು ಹೇಳಿದರು. ಈ ವೇಳೆ ಕೋಪಗೊಂಡ ಎಂಎನ್‌ಎಸ್ ಕಾರ್ಯಕರ್ತರು ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ದೌರ್ಜನ್ಯ ಎಸೆಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹಲ್ಲೆ ನಡೆದ ಮೂರು ದಿನಗಳ ನಂತರ ಆಗಸ್ಟ್ 31 ರಂದು ದೂರು ನೀಡಲಾಗಿದೆ. ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ತಮ್ಮ ಚಿಕ್ಕಪ್ಪ ಬಾಳ ಠಾಕ್ರೆ ಅವರ ಶಿವಸೇನೆಯನ್ನು ತೊರೆದ ನಂತರ ರಾಜ್ ಠಾಕ್ರೆ ಅವರು ಸ್ಥಾಪಿಸಿದ ಪಕ್ಷವಾದ ಎಂಎನ್‌ಎಸ್‌ನಿಂದ ಈ ಘಟನೆ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಲಾಗಿಲ್ಲ.

English summary
A video of Raj Thackeray's Maharashtra Navnirman Sena (MNS) worker pushing and slapping a woman in Mumbai has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X