ಗುದ್ದೋಡು ಪ್ರಕರಣ: ಸಲ್ಮಾನ್ ಗೆ ಸ್ವಲ್ಪ ರಿಲೀಫ್
ಮುಂಬೈ,ಜೂ.25: ಸುಮಾರು 11 ವರ್ಷಗಳಷ್ಟು ಹಳೆಯದಾದ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಒಬ್ಬರ ನಂತರ ಒಬ್ಬರು ತನ್ನ ವಿರುದ್ಧ ಸಾಕ್ಷಿ ಹೇಳುವುದನ್ನು ಕಂಡು ಸಲ್ಲೂ ಕಂಗಾಲಾಗಿದ್ದರು. ಆದರೆ, ಈ ಹಿಂದೆ ಸಲ್ಮಾನ್ ವಿರುದ್ಧ ಸಾಕ್ಷಿ ಹೇಳಿದ್ದ ಸಚಿನ್ ಎಂಬುವರು ಈಗ ಉಲ್ಟಾ ಹೊಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸೀದಂತೆ ಸಲ್ಮಾನ್ ಖಾನ್ ಮೇಲೆ ಈಗಾಗಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಲವಾರು ಬಾರಿ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಸಲ್ಮಾನ್ ಗೆ ಬಂಧನ, ಶಿಕ್ಷೆ ಭೀತಿ ಕಾಡುತ್ತಿದೆ ಎನ್ನುವಷ್ಟರಲ್ಲೇ ಸಾಕ್ಷಿ ಹೇಳಿಕೆ ಬದಲಾಯಿಸಿದ ಪ್ರಸಂಗ ಹೊಸ ತಿರುವು ನೀಡಿದೆ.
2002ರಲ್ಲಿ ಬಾಂದ್ರಾದಲ್ಲಿ ನಡೆದ ಅಪಘಾತದ ಬಳಿಕ ತನ್ನ ವಾಹನದ ಚಾಲಕನ ಸೀಟ್‌ನಿಂದ ಸಲ್ಮಾನ್ ಇಳಿದು ಓಡಿ ಹೋಗಿದ್ದರು ಎಂದು ನಾನು ಪೊಲೀಸರಲ್ಲಿ ಹೇಳಿರಲಿಲ್ಲ ಎಂದು ಸಾಕ್ಷಿದಾರ ಸಚಿನ್ ಕದಮ್ ಅವರು ಕೋರ್ಟ್‌ಗೆ ತಿಳಿಸಿದ್ದಾರೆ.[ಸಲ್ಮಾನ್ ಖಾನಿಗೆ ಜೈಲಾದರೆ, ಲಾಭ ನಷ್ಟ ಯಾರಿಗೆ?]
ಬಾಲಿವುಡ್ ನಟ ಸಲ್ಮಾನ್‌ಖಾನ್ ಆರೋಪಿಯಾಗಿರುವ 2002ರ ಹಿಟ್ ಅಂಡ್ ರನ್ ಪ್ರಕರಣದ ಸಾಕ್ಷಿ ಇಂದು ತನ್ನ ವರಸೆ ಬದಲಿಸಿದ್ದಾರೆೆ. ಉಪನಗರ ಬಾಂದ್ರಾದಲ್ಲಿ ನಡೆದ ಅಪಘಾತದ ಬಳಿಕ ತನ್ನ ವಾಹನದ ಚಾಲಕನ ಸೀಟ್‌ನಿಂದ ಸಲ್ಮಾನ್ ಇಳಿದು ಓಡಿ ಹೋಗಿದ್ದರು ಎಂದು ನಾನು ಪೊಲೀಸರಲ್ಲಿ ಹೇಳಿರಲಿಲ್ಲ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.

ವರಸೆ ಬದಲಾಯಿಸಿದ ಸಾಕ್ಷಿದಾರ ಸಚಿನ್
ಬಾಲಿವುಡ್ ನಟ ಸಲ್ಮಾನ್‌ಖಾನ್ ಆರೋಪಿಯಾಗಿರುವ 2002ರ ಹಿಟ್ ಆ್ಯಂಡ್ ರನ್ ಪ್ರಕರಣದ ಸಾಕ್ಷಿ ಇಂದು ತನ್ನ ವರಸೆ ಬದಲಿಸಿದ್ದಾರೆೆ. ಉಪನಗರ ಬಾಂದ್ರಾದಲ್ಲಿ ನಡೆದ ಅಪಘಾತದ ಬಳಿಕ ತನ್ನ ವಾಹನದ ಚಾಲಕನ ಸೀಟ್‌ನಿಂದ ಸಲ್ಮಾನ್ ಇಳಿದು ಓಡಿ ಹೋಗಿದ್ದರು ಎಂದು ನಾನು ಪೊಲೀಸರಲ್ಲಿ ಹೇಳಿರಲಿಲ್ಲ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.
ಚಾಲಕನ ಸೀಟ್‌ನಿಂದ ಸಲ್ಮಾನ್ ಇಳಿಯುವುದನ್ನು ನಾನು ನೋಡಿದ್ದೇನೆ ಹಾಗೂ ಘಟನಾ ಸ್ಥಳದಿಂದ ಅವರು ಕಾಲ್ಕಿತ್ತಿರುವುದನ್ನು ಕಂಡಿದ್ದೇನೆ ಎಂಬ ಪೊಲೀಸರು ದಾಖಲಿಸಿರುವ ನನ್ನ ಹೇಳಿಕೆ ಸರಿಯಲ್ಲ ಎಂದು ಪ್ರಕರಣದ ಸಾಕ್ಷಿಯಾಗಿರುವ ನೀಲ್ ಸಾಗರ್ ಹೊಟೇಲ್‌ನ ಭದ್ರತಾ ಸಿಬ್ಬಂದಿ ಸಚಿನ್ ಕದಮ್ ನ್ಯಾ.ಡಿ.ಡಬ್ಲೂ. ದೇಶಪಾಂಡೆಯವರಿಗೆ ತಿಳಿಸಿದ್ದಾರೆ.

ಪೊಲೀಸರು ತಪ್ಪಾಗಿ ದಾಖಲಿಸಿದ್ದಾರೆ
ಕಾರೊಂದು ಅಂಗಡಿಯ ಶಟರ್‌ನೊಳಗೆ ನುಗ್ಗಿದ್ದಾಗಿ ಮಾತ್ರವೇ ತಾನು ಪೊಲೀಸರಿಗೆ ಹೇಳಿಕೆ ಕೊಟ್ಟಿರುವುದಾಗಿ ಅವರು ನುಡಿದಿದ್ದಾರೆ. ಹೇಳಿಕೆಗಳನ್ನು ಪೊಲೀಸರು ತಪ್ಪಾಗಿ ದಾಖಲಿಸಿರುವುದು ಯಾಕೆ ಎಂಬ ಬಗ್ಗೆ ಮಾತ್ರ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ
ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ಕ್ರೂಸರ್ ವಾಹನ ಸೆಪ್ಟೆಂಬರ್ 28, 2002ರಲ್ಲಿ ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಹರಿದಿತ್ತು. ಓರ್ವನ ಸಾವು, ನಾಲ್ವರು ಗಾಯಗೊಂಡಿದ್ದರು. ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮರ್ಡರ್ ಚಾರ್ಚ್ ಹಾಕಿ ಸಲ್ಮಾನ್ ವಿರುದ್ಧ ತೀರ್ಪು ಬಂದಿತ್ತು.
2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ಆರಂಭವಾಗಿದ್ದು, ಮುಂಬೈ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 304,337 ಸೇರಿದಂತೆ ಹಲವಾರು ಸೆಕ್ಷನ್ ಗಳಡಿಯಲ್ಲಿ ಆರೋಪ ಹೊರೆಸಲಾಗಿದೆ. ಆರೋಪಗಳು ಸಾಬೀತಾದರೆ 10 ವರ್ಷ ಜೈಲುಶಿಕ್ಷೆ ಗ್ಯಾರಂಟಿ.
ಮತ್ತೊಂದು ಪ್ರಕರಣ ಕೂಡಾ ಜಾರಿಯಲ್ಲಿದೆ
ಇದರ ಜೊತೆಗೆ ಹದಿನಾಲ್ಕು ವರ್ಷಗಳ ಹಿಂದೆ ರಾಜಸ್ತಾನದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದ ವಿಚಾರಣೆ ಜೋಧ್ ಪುರ ಕೋರ್ಟ್ ನಲ್ಲಿ ನಡೆದಿದೆ. 1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣ ವೇಳೆ ಜೋಧಪುರ ಸಮೀಪದ ಹಳ್ಳಿಯೊಂದರ ಬಳಿ ಕೃಷ್ಣಮೃಗ ಭೇಟಿಯಾಡಿದ್ದ ಆರೋಪ ಸಲ್ಮಾನ್ ಸೇರಿದಂತೆ ಸೈಫ್ ಆಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ವಿರುದ್ಧ ಇದೆ.

ಕಿಕ್ ಚಿತ್ರಕ್ಕಾಗಿ ಸಲ್ಮಾನ್ ರೆಡಿ
ಈ ಹಿಂದೆ ಕೋರ್ಟಿಗೆ ಖುದ್ದು ಹಾಜರಾಗಿ ವಿನಾಯತಿ ಪಡೆದಿದ್ದ ಸಲ್ಮಾನ್ 'ಕಿಕ್' ಚಿತ್ರದ ಚಿತ್ರೀಕರಣಕ್ಕಾಗಿ ಲಂಡನ್ ಗೆ ತೆರಳಿದ್ದರು. ಈಗ ಕಿಕ್ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಪ್ರಚಾರದಲ್ಲಿ ಸಲ್ಮಾನ್ ನಿರತರಾಗಿದ್ದಾರೆ. ಚಿತ್ರದ ಟ್ರೇಲರ್ ಭರ್ಜರಿ ಹಿಟ್ ಕೂಡಾ ಆಗಿದೆ.[ವಿವರ ಇಲ್ಲಿ ಓದಿ]












Click it and Unblock the Notifications