ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆ ಕ್ಯಾತೆ ಇಲ್ಲದೆಯೇ ATMನಿಂದ ಹಣ ಡ್ರಾ ಸಾಧ್ಯ

By Srinath
|
Google Oneindia Kannada News

Without bank account or card can anybody withdraw cash from atm - RBI
ಮುಂಬೈ, ಫೆ. 17- ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಉಳ್ಳವರಿಗೆ ಮಾತ್ರ ATM ಪ್ರವೇಶ ಭಾಗ್ಯ ಎಂಬ ಷರತ್ತು ಸಡಿಲವಾಗಿ ಹಣ ಡ್ರಾ ಮಾಡಲು ಇತರರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಕಾರ್ಯೋನ್ಮುಖವಾಗುತ್ತಿವೆ. ಎಟಿಎಂಗಳ ಬಗ್ಗೆ ನಾನಾ ಕಾರಣಗಳಿಂದ ಆತಂಕಕ್ಕೊಳಗಾಗಿ, ಭ್ರಮನಿರಸನಗೊಳ್ಳುತ್ತಿರುವ ಸಂದರ್ಭದಲ್ಲಿ ಈ value-addition ಸೇವೆಯು ಗ್ರಾಹಕರನ್ನು ಹೆಚ್ಚು ಹೆಚ್ಚು ಎಟಿಎಂಗಳತ್ತ ಸೆಳೆಯುವ ಆಶಾಭಾವ ವ್ಯಕ್ತವಾಗಿದೆ.

ಆದರೆ ಇಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳು ದೊರೆತಿಲ್ಲ. ಮುಖ್ಯವಾಗಿ ಎಷ್ಟು ಹಣ ಕಳುಹಿಸಬಹುದು? ಕಡಿಮೆ ಮೊತ್ತವನ್ನೂ ಕಳುಹಿಸಬಹುದಾ? ಅಥವಾ ಭಾರಿ ಮೊತ್ತವನ್ನು ಕಳುಹಿಸಬಹುದಾ? ಲಿಮಿಟ್ ಇದೆಯಾ? ದಿನಕ್ಕೆ ಎಷ್ಟು ಬಾರಿ ಬೇಕಾದರೂ ಕಳುಹಿಸುತ್ತಿರಬಹುದಾ?

ಸೇವೆ ಸದುದ್ದೇಶದ್ದೇ ಆಗಿದೆ. ಸಕಲರಿಗೂ ಬ್ಯಾಂಕ್ ಸೇವೆ ಪ್ರಾಪ್ತಿಯಾಗಲಿ ಎಂಬ ಸೇರ್ಪಡೆ ನೀತಿ ಆಶಯಕ್ಕೆ ಇದು ಪೂರಕವಾಗಿದೆ. ಆದರೂ ಇದು ಹವಾಲಾಗೆ ದಾರಿ ಮಾಡಿಕೊಡುವುದಿಲ್ಲವೇ? ಇನ್ನು, ಶುಲ್ಕ ನಿಗದಿ ಹೇಗೆ? ಉದಾಹರಣೆಗೆ ಐದು ಸಾವಿರ ರೂ ಕಳುಹಿಸಬೇಕು ಅಂದರೆ ಅದಕ್ಕೆ ಎಷ್ಟು ಶುಲ್ಕ ಕಟ್ಟಬೇಕು?

ಕಾರ್ಡ್/ ಖಾತೆ ಇಲ್ಲದೆಯೂ ಎಟಿಎಂನಲ್ಲಿ ವ್ಯವಹರಿಸುವುದಕ್ಕೆ step by step ಮಾರ್ಗದರ್ಶನ ಹೀಗಿದೆ: ಮುಖ್ಯವಾಗಿ ಉದ್ಯೋಗವನ್ನರಸಿ ದೇಶದ ನಾನಾ ಭಾಗಗಳಲ್ಲಿ ಜನ ಹಂಚಿಹೋಗಿದ್ದಾರೆ. ಅಂತಹವರು ತಮ್ಮ ಮೂಲಸ್ಥಳಗಳಲ್ಲಿ ವಾಸವಾಗಿರುವ ಸಂಬಂಧಿಗಳಿಗೆ ತಮ್ಮ ದುಡಿಮೆಯ ಹಣವನ್ನು ಕಳುಹಿಸುವ ಜರೂರತ್ತು ಇರುತ್ತದೆ. ಅಂತಹವರನ್ನು ಈ ಸೇವೆ ಕೈಹಿಡಿಯುತ್ತದೆ. ಅಥವಾ ಬೇರೆ ಮತ್ಯಾವುದೋ ಸಂದರ್ಭದಲ್ಲಿ ವ್ಯಾಪಾರ/ವಹಿವಾಟಿಗೆಂದು ಉದ್ಯಮಿಗಳು ಹಣ ಕಳುಹಿಸಬೇಕಾದ ಅಗತ್ಯಬಿದ್ದರೆ ಈ ಸೇವೆಯನ್ನು ಬಳಸಿಕೊಳ್ಳಬಹುದು.

ಕಳೆದ ವಾರವಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಈ ಪ್ರಸ್ತಾವಿತ ಸೇವೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಎಟಿಎಂ ಯಂತ್ರಗಳಲ್ಲಿ ಒಂದಷ್ಟು ಸಾಫ್ಟ್ ವೇರ್ ಬದಲಾಯಿಸಿಕೊಂಡರೆ ಆಯಿತು. ಗಮನಾರ್ಹವೆಂದರೆ ಒಂದೆರಡು ಬ್ಯಾಂಕುಗಳು ಈ ಸೇವೆಯನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿವೆಯಾದರೂ ಅದು ಹೆಚ್ಚು ಗಮನಕ್ಕೆ ಬಂದಿಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಣ ಪಡೆಯುವವರು ಕಾರ್ಡ್/ ಖಾತೆ ಹೊಂದಿಲ್ಲದಿದ್ದರೂ ಪರವಾಗಿಲ್ಲ, ಆದರೆ ಹಣ ಕಳುಹಿಸುವವರು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯ. ಆ ಖಾತೆಯ ಮೂಲಕವಷ್ಟೇ ಈ ಹಣ ವರ್ಗಾವಣೆಗೆ ಅವಕಾಶವಿರುತ್ತದೆ. ಇಂತಿಷ್ಟು ಹಣವನ್ನು ಇಂತಹವರಿಗೆ ಕಳುಹಿಸಿಕೊಡಿ ಎಂದು ಖಾತೆದಾರರು ಸೂಚಿಸಿದರೆ ಅಂತಹವರಿಗೆ ಮೊಬೈಲಿನಲ್ಲಿ ಒಂದು ಕೋಡ್ ಬರುತ್ತದೆ. ಆ ಗುಪ್ತ ಸಂಖ್ಯೆಯೇ ಇಡೀ ವರ್ಗಾವಣೆಯ ಸೂತ್ರಧಾರ.

ಮುಂದೆ, ಹಣ ಕಳುಹಿಸುವವರು ತಾವು ಯಾರಿಗೆ ಹಣ ಕಳುಹಿಸಬೇಕು ಅಂದುಕೊಂಡಿರುತ್ತಾರೋ ಅವರಿಗೆ ಆ ಗುಪ್ತ ಸಂಖ್ಯೆಯನ್ನು (code) ತಿಳಿಸಬೇಕು. ಹಣ ಸ್ವೀಕರಿಸುವ ವ್ಯಕ್ತಿ ಆ ಗುಪ್ತ ಸಂಖ್ಯೆಯನ್ನು ಬಳಸಿ, ತಮ್ಮ ಸಮೀಪದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಹಣ ಪಡೆಯುವವರು ಇದಕ್ಕೆ ಶುಲ್ಕವನ್ನು ಕಟ್ಟುವ ಅಗತ್ಯ ಇರುವುದಿಲ್ಲ.

English summary
Without bank account or card can anybody withdraw cash from atm? Reserve Bank of India Governor Raghuram Rajan has a positive answer for this. The RBI has approved the in-principle setting up of a payment system that will facilitate the funds transfer from bank account holders to those without accounts or debit/ credit cards through ATMs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X