ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತೇನೆ: ಮಾಯಾವತಿ ಬದುಕಲ್ಲಿ ಹೊಸ ಟ್ವಿಸ್ಟ್
ನಾಗ್ಪುರ, ಅಕ್ಟೋಬರ್ 14: "ನಾನು ಬಾಬಾಸಾಹೇಬ್ ಅಂಬೇಡ್ಕರ್ ಅವರಂತೆಯೇ ನನ್ನ ಮತವನ್ನು ಬದಲಾಯಿಸಿಕೊಳ್ಳುತ್ತೇನೆ. ಅವರು ಸಾಯುವ ಮುನ್ನ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು. ನಾನೂ ಹಾಗೆಯೇ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ. ಆದರೆ ಅದಕ್ಕೆ ಸರಿಯಾದ ಸಮಯ ಬರಬೇಕು" ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದರು.
ಮಹಾರಾಷ್ಟ್ರದಲ್ಲಿ ಇದೇ ಅಕ್ಟೋಬರ್ 21 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಸಲುವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ ಮಾಯಾವತಿ ಈ ವಿಷಯ ತಿಳಿಸಿದರು.

"ಬೆಹನ್ ಜೀ, ಬಾಬಾ ಸಾಹೇಬ್ ಅವರ ಹಾದಿಯಲ್ಲಿ ನಡೆಯುವುದಾದರೆ ಅವರಂತೆಯೇ ಮತಾಂತರಗೊಳ್ಳುತ್ತೀರಾ ಎಂದು ನೀವು ಕೇಳಬಹುದು. ಅದಕ್ಕೆ ನನ್ನ ಉತ್ತರ... ನಾನು ಬೌದ್ಧ ಧರ್ಮದ ಧೀಕ್ಷೆ ತೆಗೆದುಕೊಳ್ಳುತ್ತೇನೆ. ಆದರೆ ಸರಿಯಾದ ಸಮಯ ಬರಬೇಕು. ನಾನು ಬೌದ್ಧ ಮತಕ್ಕೆ ಮತಾಂತರವಾಗುವುದಾದರೆ ಭಾರೀ ಸಂಖ್ಯೆಯ ಜನರೂ ನನ್ನೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಾರೆ" ಎಂದು ಮಾಯಾವತಿ ಹೇಳಿದರು.











Click it and Unblock the Notifications