Get Updates
Get notified of breaking news, exclusive insights, and must-see stories!

ಸೇನೆಗೆ ಸೇರುವ ಮೂಲಕ ಪತಿಗೆ ಗೌರವ ಸಲ್ಲಿಸುತ್ತಿರುವ ಪತ್ನಿ ಗೌರಿ ಮಹದಿಕ್

ಮುಂಬೈ, ಫೆಬ್ರವರಿ 25: ಭಾರತ- ಚೀನಾ ಗಡಿಯಲ್ಲಿ 2017ರಲ್ಲಿ ನಡೆದ ಅಗ್ನಿ ಅವಘಡದಲ್ಲಿ ತಮ್ಮ ಪತಿ ಮೇಜರ್ ಪ್ರಸಾದ್ ಗಣೇಶ್ ಅವರನ್ನು ಕಳೆದುಕೊಂಡಾಗ ಗೌರಿ ಅವರ ಪ್ರಪಂಚವೇ ಅಲ್ಲೋಲಕಲ್ಲೋಲ ಆದಂತಾಗಿತ್ತು. ಆದರೆ ಆ ಕ್ಷಣಕ್ಕೇ ಅವರು ನಿರ್ಧಾರ ತೆಗೆದುಕೊಂಡರು. ತಾವು ಮಾಡುತ್ತಿದ್ದ ಕೆಲಸ ಬಿಟ್ಟು, ಸೇನೆ ಸೇರುವ ತೀರ್ಮಾನ ಮಾಡಿದರು.

ಒಂದು ವರ್ಷದ ನಂತರ ಇದೀಗ ಅಧಿಕಾರಿಗಳ ತರಬೇತಿ ಸಂಸ್ಥೆಗೆ ಸೇರಲು ಎಲ್ಲ ಸಿದ್ಧತೆ ನಡೆಸಿದ್ದಾರೆ. "ನಾನು ವಕೀಲೆ ಹಾಗೂ ಕಂಪನಿ ಸೆಕ್ರೆಟರಿ. ಉದ್ಯೋಗ ಮಾಡಿಕೊಂಡಿದ್ದೆ. ನನ್ನ ಪತಿಯ ಮರಣದ ನಂತರ ಉದ್ಯೋಗವನ್ನು ಬಿಟ್ಟೆ. ಸೇನೆಗೆ ಸೇರಲು ತಯಾರಿ ನಡೆಸಿದೆ. ಆ ಮೂಲಕ ನನ್ನ ಪತಿಗೆ ಗೌರವ ಸಲ್ಲಿಸಬೇಕು ಅಂದುಕೊಂಡೆ. ಆ ನಂತರ ಧರಿಸುವ ಸಮವಸ್ತ್ರ ನಮ್ಮದು (ನಾನು ಹಾಗೂ ನನ್ನ ಪತಿಯದು)" ಎಂದು ಗೌರಿ ಮಹದಿಕ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

2015ರಲ್ಲಿ ಗೌರಿ ಅವರು ಮೇಜರ್ ಪ್ರಸಾದ್ ರನ್ನು ವಿವಾಹ ಆದರು. ಆ ನಂತರ ಮುಂಬೈನ ವಿರಾರ್ ಪ್ರದೇಶದಲ್ಲಿ ತನ್ನ ಮಾವನ ಮನೆಯಲ್ಲಿ ಇದ್ದರು. ಎರಡನೇ ಪ್ರಯತ್ನದಲ್ಲಿ ಸರ್ವೀಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಇತರ ಹದಿನಾರು ಅಭ್ಯರ್ಥಿಗಳ ಜತೆಗೆ ಸೆಣೆಸಿ, ಅತ್ಯುತ್ತಮ ಅಂಕ ಪಡೆದಿದ್ದಾರೆ.

Wife of Major killed in fire set to join army, Its her tribute

ಇದೀಗ ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಸಂಸ್ಥೆ ಸೇರಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಈ ಏಪ್ರಿಲ್ ನಲ್ಲಿ ಸೇರ್ಪಡೆ ಆಗಲಿದ್ದು, 49 ವಾರಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ವರ್ಷದ ಈ ಕಡ್ಡಾಯ ತರಬೇತಿಯನ್ನು ಅಕಾಡೆಮಿಯಲ್ಲಿ ಪೂರ್ಣ ಮಾಡಿದ ಬಳಿಕ ಮೂವತ್ತೊಂದು ವರ್ಷದ ಗೌರಿ ಮಹದಿಕ್ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರ್ಪಡೆ ಆಗಲಿದ್ದಾರೆ.

ಕೆಲಸ ಬಿಡುವ ಅವರ ನಿರ್ಧಾರದ ಬಗ್ಗೆ ಪ್ರಶ್ನೆ ಮಾಡಿದರೆ, ನಾನು ಸುಮ್ಮನೆ ಕೂತು, ಅಳುವುದು ಇಷ್ಟವಿರಲಿಲ್ಲ. ನನ್ನ ಪತಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು ಅಂದುಕೊಂಡೆ. ನಾನು ಯಾವಾಗಲೂ ನಗುತ್ತಾ ಸಂತೋಷದಿಂದ ಇರಬೇಕು ಅನ್ನೋದು ಅವರ ಆಸೆಯಾಗಿತ್ತು. ಸೇನೆ ಸೇರಿಕೊಳ್ಳಬೇಕು ಎಂದು ನಿರ್ಧರಿಸಿದೆ. ಅವರ ಸಮವಸ್ತ್ರ ಧರಿಸುತ್ತೇನೆ, ಅವರ ಸ್ಟಾರ್ ಅನ್ನು ನಮ್ಮ ಸಮವಸ್ತ್ರದಲ್ಲಿ ಹಾಕಿಕೊಳ್ಳುತ್ತೇನೆ. ನಮ್ಮ ಸಮವಸ್ತ್ರ ಏಕೆಂದರೆ, ಅದು ಅವರದು ಹಾಗೂ ನನ್ನದು ಇಬ್ಬರದೂ ಸಮವಸ್ತ್ರ ಎಂದಿದ್ದಾರೆ ಗೌರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+