ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆಗೂ ಮುನ್ನ ಮರುನಾಮಕರಣ: ಉದ್ಧವ್ ಠಾಕ್ರೆ ರಾಜಕೀಯ ಲೆಕ್ಕಾಚಾರ

|
Google Oneindia Kannada News

ಮುಂಬೈ, ಜೂನ್ 30: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟವು ಔರಂಗಾಬಾದ್ ನಗರವನ್ನು ಸಂಭಾಜಿನಗರ ಎಂದು ಮತ್ತು ಉಸ್ಮಾನಾಬಾದ್ ನಗರವನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಲು ಒಪ್ಪಿಗೆ ನೀಡಿದೆ, ಜೊತೆಗೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈತ ನಾಯಕ ದಿವಂಗತ ಡಿಬಿ ಪಾಟೀಲ್ ಹೆಸರು ನಾಮಕರಣದ ಹಿಂದೆ ರಾಜಕೀಯದ ಲಾಭದ ಉದ್ದೇಶ ಇದೆ ಎನ್ನಲಾಗಿದೆ.

ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಮೊದಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ತಾನು ಹಿಂದೂ ಪರವಾಗಿದ್ದೇನೆ ಎನ್ನುವ ಸಂದೇಶ ನೀಡುವುದು ಶಿವಸೇನೆ ಉದ್ದೇಶವಾಗಿದೆ ಎನ್ನಲಾಗಿದೆ.

ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ, ಸಂಜಯ್ ರಾವತ್ ಮೊದಲ ಪ್ರತಿಕ್ರಿಯೆ!ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ, ಸಂಜಯ್ ರಾವತ್ ಮೊದಲ ಪ್ರತಿಕ್ರಿಯೆ!

ಗುರುವಾರ ಗುರುವಾರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ವಿಶ್ವಾಸಮತ ಪರೀಕ್ಷೆಗೆ ನೀಡಿದ ಆದೇಶವನ್ನು ಶಿವಸೇನೆ ಪ್ರಶ್ನಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಮನವಿಯನ್ನು ತಿರಸ್ಕರಿಸಿ ಗುರುವಾರವೇ ಬಹುಮತ ಸಾಬೀತಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆಯೇ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರೊಂದಿಗೆ 2.5 ವರ್ಷ ಆಡಳಿತ ನಡೆಸಿದ ಮಹಾ ವಿಕಾಸ ಅಘಾಡಿ ಸರ್ಕಾರ ಬಿದ್ದಹೋಗಿದೆ.

ಹೆಸರು ಬದಲಾಯಿಸಲು ಒತ್ತಾಯಿಸುತ್ತಿದ್ದ ಬಿಜೆಪಿ

ಹೆಸರು ಬದಲಾಯಿಸಲು ಒತ್ತಾಯಿಸುತ್ತಿದ್ದ ಬಿಜೆಪಿ

ಶಿವಸೇನೆಯು ಬಿಜೆಪಿಯೊಂದಿಗಿನ ತನ್ನ ದಶಕಗಳ ಹಳೆಯ ಸಂಬಂಧವನ್ನು ಕಡಿದುಕೊಂಡ ನಂತರ ಮತ್ತು ಎಂವಿಎ ಸರ್ಕಾರವನ್ನು ರಚಿಸಲು ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಕೈಜೋಡಿಸಿದ ನಂತರ, ಮೊಘಲ್ ಚಕ್ರವರ್ತಿ ಔರಂಗಜೇಬ್‌ನಿಂದ ತನ್ನ ಹೆಸರನ್ನು ಪಡೆದಿರುವ ಔರಂಗಾಬಾದ್ ಅನ್ನು ಮರುನಾಮಕರಣ ಮಾಡುವ ತನ್ನ ಹಳೆಯ ಬೇಡಿಕೆಯನ್ನು ಬಿಜೆಪಿ ಆಗಾಗ್ಗೆ ಶಿವಸೇನೆಗೆ ಪ್ರಸ್ತಾಪಿಸುತ್ತಿತ್ತು.

ಉದ್ಧವ್‌ ಠಾಕ್ರೆ ರಾಜೀನಾಮೆ; ಯಾರು ಏನು ಹೇಳಿದರು?ಉದ್ಧವ್‌ ಠಾಕ್ರೆ ರಾಜೀನಾಮೆ; ಯಾರು ಏನು ಹೇಳಿದರು?

ಹೆಸರು ಬದಲಾವಣೆ ಮತ್ತು ರಾಜಕೀಯ ಲೆಕ್ಕಾಚಾರ

ಹೆಸರು ಬದಲಾವಣೆ ಮತ್ತು ರಾಜಕೀಯ ಲೆಕ್ಕಾಚಾರ

ಹೆಸರು ಬದಲಾವಣೆ ಹಿಂದೆ ಉದ್ಧವ್ ಠಾಕ್ರೆ ರಾಜಕೀಯ ಲೆಕ್ಕಾಚಾರ ಇದೆ. ಔರಂಗಾಬಾದ್ ಹೆಸರು ಬದಲಾವಣೆಗೆ ಬಿಜೆಪಿ ಮೊದಲಿನಿಂದ ಒತ್ತಾಯ ಮಾಡಿತ್ತು ಆದರೆ ಇಷ್ಟು ದಿನ ಸುಮ್ಮನಿದ್ದ ಉದ್ದವ್ ರಾಜೀನಾಮೆ ನೀಡುವ ಮೊದಲು ಹೆಸರು ಬದಲಾವಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ತಾನು ಹಿಂದೂ ಪರ ಎನ್ನುವ ಸಂದೇಶ ನೀಡುವುದು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೆಸರು ಬದಲಾವಣೆ ಮಾಡಿ ರಾಜಕೀಯ ಲಾಭ ಪಡೆದರೆ ಎನ್ನುವ ದೂರಾಲೋಚನೆಯಿಂದ ಈ ನಿರ್ಧಾರ ಮಾಡಿದ್ದಾರೆ.

ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಉದ್ಧವ್ ಠಾಕ್ರೆ

ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಉದ್ಧವ್ ಠಾಕ್ರೆ

ನಾವು ಅವರಿಗೆ ಸಹಕಾರ ನೀಡಿದ್ದೇವೆ ಮತ್ತು ಮುಂದೆಯೂ ನಮ್ಮಿಂದ ಇದೇ ರೀತಿಯ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಸಿಎಂ ಠಾಕ್ರೆ ಹೇಳಿದರು. ಇನ್ನುಮುಂದೆಯೂ ಠಾಕ್ರೆ ನಮ್ಮೊಂದಿಗೆ ಅದೇ ರೀತಿ ವರ್ತಿಸುತ್ತಾರೆ ಎಂದು ಮುಂಬೈನಲ್ಲಿ ನಡೆದ ಸಂಪುಟ ಸಭೆಯ ನಂತರ ಮಹಾರಾಷ್ಟ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಸುನಿಲ್ ಕೇದಾರ್ ಹೇಳಿದ್ದಾರೆ.

ಎರಡೂವರೆ ವರ್ಷದಲ್ಲಿ ಮೂರೂ ಪಕ್ಷಗಳು ಒಗ್ಗೂಡಿ ಉತ್ತಮ ಕೆಲಸ ಮಾಡಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ ಎಂದು ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಹೇಳಿದ್ದಾರೆ.

ಪುಣೆ ಮರುನಾಮಕರಣಕ್ಕೆ ಒತ್ತಾಯಿಸಿದ ಕಾಂಗ್ರೆಸ್

ಪುಣೆ ಮರುನಾಮಕರಣಕ್ಕೆ ಒತ್ತಾಯಿಸಿದ ಕಾಂಗ್ರೆಸ್

ಪುಣೆ ನಗರವನ್ನು ಛತ್ರಪತಿ ಶಿವಾಜಿ ಮಹಾರಾಜರ ತಾಯಿಯ ಹೆಸರಿನಲ್ಲಿ ಜಿಜಾವು ನಗರ ಎಂದು ಹೆಸರಿಸಬೇಕೆಂದು ಮತ್ತು ನವಿ ಮುಂಬೈನ ಸೆವ್ರಿ ಮತ್ತು ನ್ಹವಾ ಶೇವಾ ನಡುವಿನ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ಗೆ ಮಾಜಿ ಮುಖ್ಯಮಂತ್ರಿ ದಿವಂಗತ ಎಆರ್ ಅಂತುಲೆ ಹೆಸರಿಡಲು ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಒತ್ತಾಯಿಸಿತ್ತು.

ಆದರೆ ಈ ಬೇಡಿಕೆಗಳನ್ನು ಸ್ಪಷ್ಟವಾಗಿ ಪರಿಗಣಿಸಲಾಗಿಲ್ಲ. ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಡಿಬಿ ಪಾಟೀಲ್ ಹೆಸರಿಡಬೇಕೆಂಬ ಬೇಡಿಕೆಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ರಾಜ್ಯ ಯೋಜನಾ ಸಂಸ್ಥೆ ಸಿಐಸಿಸಿಒ (CIDCO) ಈ ಹಿಂದೆ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಹೆಸರಿಸಲು ಪ್ರಸ್ತಾಪಿಸಿತ್ತು.

English summary
Maharashtra's Uddhav Thackeray-led cabinet has approved the renaming of Aurangabad city as Sambhajinagar and Osmanabad city as Dharashiv, along with naming the upcoming Navi Mumbai International Airport after farmer leader late DB Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X