ವೈರಲ್ ವಿಡಿಯೋ: ಚಲಿಸುತ್ತಿರುವ ರೈಲಿನಿಂದ ಹಾರಿದರು.. ಆಮೇಲೆ?
ಮುಂಬೈ, ಡಿಸೆಂಬರ್ 06: ಚಲಿಸುತ್ತಿರುವ ರೈಲಿನಿಂದ ಇಬ್ಬರು ಮಹಿಳೆಯರು ಹಾರಿ, ಇನ್ನೇನು ಹಳಿಯ ಮೇಲೆ ಬೀಳಬೇಕು... ಅಷ್ಟರಲ್ಲಿ... ಏನಾಯ್ತು? ಅದನ್ನು ತಿಳಿಯೋಕೆ ನೀವೊಂದು ವಿಡಿಯೋ ನೋಡಬೇಕು!
ಮುಂಬೈಯ ದಾದರ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲೊಂದರಿಂದ ಹಾರಿದ ಇಬ್ಬರು ಮಹಿಳೆಯರನ್ನು ರೈಲ್ವೇ ಪೊಲೀಸ್ ಸಿಬ್ಬಂದಿಯೊಬ್ಬರು ಕಾಪಾಡಿದ ಘಟನೆ ನಡೆದಿದೆ.
#WATCH: Government Railway Police (GRP) personnel rescue two women passengers from being run over by a train at Dadar Railway Station in Mumbai. #Mahasrashtra (5/12/2018) pic.twitter.com/hzEFRxMDVc
— ANI (@ANI) December 6, 2018
ಈ ನಿಲ್ದಾಣದಲ್ಲಿ ರೈಲು ನಿಲ್ಲದಿದ್ದರೂ, ರೈಲಿನಿಂದ ಹಾರಿ ಇಳಿದುಕೊಳ್ಳಲು ಮಹಿಳೆಯೊಬ್ಬರು ಯತ್ನಿಸಿದ್ದಾರೆ. ಅವರನ್ನು ಕಾಪಾಡಲು ಜನರು ಓಡಿಬರುತ್ತಿದ್ದಂತೆಯೇ, ಅದರ ಪಕ್ಕದ ಬೋಗಿಯಿಂದ ಮತ್ತೊಬ್ಬರು ಮಹಿಳೆ ರೈಲಿನಿಂದ ಹಾರಿದ್ದಾರೆ. ಈ ಇಬ್ಬರೂ ಕಂಬಿಯ ಮೇಲೆ ಬೀಳದಂತೆ ರೈಲ್ವೇ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ.
ಚಲಿಸುತ್ತಿರುವ ರೈಲಿನಿಂದ ಹಾರುವ ಅಪಾಯಕಾರಿ ನಡವಳಿಕೆಯಿಂದ ಎಷ್ಟೆಲ್ಲ ಸಾವುಗಳ ಸಂಭವಿಸಿದ್ದರೂ ಜನರು ಮತ್ತದೇ ಕೆಲಸ ಮಾಡುತ್ತಿರುವುದು ನಿಜಕ್ಕೂ ಶೋಚನೀಯ ಎನ್ನಿಸಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮಥುರಾದ ರೈಲ್ವೇ ನಿಲ್ದಾಣವೊಂದರಲ್ಲಿ ಇದೇ ರೀತಿ, ಮಗುವೊಂದು ಹಳಿಯ ಪಕ್ಕದಲ್ಲೇ ಬಿದ್ದಿತ್ತು. ಅದೇ ಹಳಿಯ ಮೇಲೆ ರೈಲು ಚಲಿಸಿದರೂ ಅದೃಷ್ಟವಶಾತ್ ಆ ಮಗುವಿಗೆ ಯಾವುದೇ ತೊಂದರೆಯಾಗದ ಪವಾಡ ಸದೃಶವಾಗಿ ಬದುಕಿತ್ತು.












Click it and Unblock the Notifications