ಪ್ರವಾಸಿಗರ ವಾಹನ ಬೆನ್ನಟ್ಟಿ ಬಂದ ಹುಲಿ ವಿಡಿಯೋ ಈಗ ವೈರಲ್

ಮುಂಬೈ, ನವೆಂಬರ್ 13: ಮಹಾರಾಷ್ಟ್ರದ ತಡೋಬಾ-ಅಂಧೇರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರ ವಾಹನವನ್ನು ಬೆನ್ನಟ್ಟಿ ಹೋಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆರ್ ಎಫ್ ಒ ರಾಘವೇಂದ್ರ ಮೂನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಘಟನೆಯು ಭಾನುವಾರ ಚಂದ್ರಾಪುರ ಜಿಲ್ಲೆ ವ್ಯಾಪ್ತಿಗೆ ಬರುವ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿ ನಡೆದಿದೆ. ಮೂರೂವರೆ ವರ್ಷದ ಹೆಣ್ಣು ಹುಲಿ ಚೋಟಿ ಮಧಿ ಬಳಿಯಲ್ಲಿ ಪ್ರವಾಸಿಗರ ವಾಹನ ಹೋಗಿದ್ದರಿಂದ ಅದಕ್ಕೆ ಸಿಟ್ಟು ಬಂದಿರಬಹುದು ಎಂದು ರಾಘವೇಂದ್ರ ಮೂನ್ ಹೇಳಿದ್ದಾರೆ.

ಈ ಘಟನೆ ನಂತರ ಕಾಡಿನ ರಸ್ತೆಯನ್ನು ವಾರದ ಮಟ್ಟಿಗೆ ಪ್ರವಾಸಿಗರಿಗಾಗಿ ಮುಚ್ಚಲಾಗಿದೆ. ಪ್ರವಾಸಿಗರ ಗೈಡ್ ಗಳು, ಚಾಲಕರ ಜತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಕಾಡಿನಲ್ಲಿ ಇರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ವನ್ಯಜೀವಿಗಳ ಆವಾಸ ಸ್ಥಾನವನ್ನು ಪ್ರವೇಶಿಸುವಾಗ ಪ್ರವಾಸಿಗರು ಕಡ್ಡಾಯವಾಗಿ ಅರಣ್ಯ ಇಲಾಖೆ ನಿಬಂಧನೆಗಳಿಗೆ ಒಳಪಟ್ಟಿರಬೇಕು ಎಂದು ತಿಳಿಸಲಾಗಿದೆ.

Video viral: Tigress chases tourist SUV in Maharashtra

ಮಹಾರಾಷ್ಟ್ರದಲ್ಲಿ ಒಟ್ಟು ಆರು ಹುಲಿ ಸಂರಕ್ಷಿತ ಪ್ರದೇಶ ಇದೆ. ಪೆಂ, ಮೇಲ್ಘಾಟ್, ಸಹ್ಯಾದ್ರಿ ಮತ್ತು ತಡೋಬಾ-ಅಂಧೇರಿ ಆ ಪೈಕಿ ಬಹಳ ಜನಪ್ರಿಯವಾದದ್ದು. ಪ್ರತಿ ವರ್ಷ ಇಲ್ಲಿಗೆ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿವೆ. ಅಂದಾಜು 165 ಹುಲಿಗಳು ಇದ್ದು, ಪರಿಸರ ಪ್ರವಾಸೋದ್ಯಮದಿಂದ 2017-18ರಲ್ಲಿ 11.76 ಕೋಟಿ ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+