ಅಪನಗದೀಕರಣದ ವೇಳೆ 1.6ರಿಂದ 1.7 ಲಕ್ಷ ಕೋಟಿ ರುಪಾಯಿ ಅಸಹಜ ಜಮೆ
ಮುಂಬೈ, ಆಗಸ್ಟ್ 11: 1.6ರಿಂದ 1.7 ಲಕ್ಷ ಕೋಟಿ ರುಪಾಯಿಯಷ್ಟು ಹಣ ಅಪನಗದೀಕರಣದ ವೇಳೆಯಲ್ಲಿ ಅಸಹಜವಾಗಿ ಜಮೆ ಆಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ ಸೈಟ್ ನಲ್ಲಿ ಸಂಶೋಧನಾ ಪತ್ರವೊಂದರಲ್ಲಿ ಉಲ್ಲೇಖ ಮಾಡಲಾಗಿದೆ.
ಅಪನಗದೀಕರಣದ ಕಾರಣಕ್ಕೆ ಅಂದಾಜು 2.8 ರಿಂದ 4.3 ಲಕ್ಷ ಕೋಟಿ ರುಪಾಯಿ ಹೆಚ್ಚುವರಿಯಾಗಿ ಜಮೆ ಆಗಿದೆ ಎಂದು ಅಂದಾಜಿಸಲಾಗಿದೆ. "ಇಂಥ ಅಸಹಜ ನಗದು ಜಮೆಯು ನಿರ್ದಿಷ್ಟ ಮಾದರಿ ಖಾತೆಗಳಲ್ಲಿ ಆಗಿದ್ದು, ಅವುಗಳಲ್ಲಿ ಸಾಮಾನ್ಯವಾಗಿ ವ್ಯವಹಾರಗಳೇ ಆಗುತ್ತಿರಲಿಲ್ಲ ಎಂಬುದು ಕಂಡು ಬಂದಿದೆ. ಅಂಥ ಖಾತೆಗೆಳಿಗೆ 1.6ರಿಂದ 1.7 ಲಕ್ಷ ಕೋಟಿ ರುಪಾಯಿ ಜಮೆ ಆಗಿದೆ" ಎಂದು ಹೇಳಲಾಗಿದೆ.

ಕಳೆದ ವರ್ಷ ನವೆಂಬರ್ ಎಂಟರಂದು ಐನೂರು, ಸಾವಿರ ರುಪಾಯಿಯ ನೋಟು ನಿಷೇಧದ ಘೋಷಣೆ ಮಾಡಿದ್ದರು ಪ್ರಧಾನಿ ನರೇಂದ್ರ ಮೋದಿ. ಇದರಿಂದ ಚಲಾವಣೆಯಲ್ಲಿದ್ದ ಶೇ 86.9ರಷ್ಟು ಅಂದರೆ 15.4 ಲಕ್ಷ ಕೋಟಿ ರುಪಾಯಿ ಹಿಂಪಡೆಯಲಾಗಿತ್ತು. ಇದರಿಂದ ಕಪ್ಪು ಹಣ, ಖೋಟಾ ನೋಟು ಹಾಗೂ ಭ್ರಷ್ಟಾಚಾರದ ಮೇಲೆ ಪ್ರಮುಖ ದಾಳಿ ನಡೆದಂತಾಗಿತ್ತು.
ಅಪನಗದೀಕರಣದ ಅವಧಿಯಲ್ಲಿ ಅಸಹಜ ಎನಿಸುವಂಥ ಶೇ ನಾಲ್ಕರಿಂದ ಐದರಷ್ಟು ಹೆಚ್ಚುವರಿ ಮೊತ್ತವು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿದೆ ಎಂದು ಹೇಳಲಾಗಿದೆ.












Click it and Unblock the Notifications