ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ದಿನದಲ್ಲೇ ಎರಡು ದಶಕಗಳ ಗರಿಷ್ಠ ಮಳೆ ಕಂಡ ಮುಂಬೈ

By ಅನಿಲ್ ಆಚಾರ್
|
Google Oneindia Kannada News

ಮುಂಬೈ, ಜುಲೈ 1: ಎರಡು ದಿನಗಳ ವ್ಯಾಪ್ತಿಯಲ್ಲಿ ಮುಂಬೈನಲ್ಲಿ ದಶಕದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಇದರಿಂದ ರೈಲು, ವಿಮಾನ ಸಂಚಾರಕ್ಕೆ ತೊಂದರೆ ಆಗಿದ್ದು, ಭಾರೀ ಸಂಚಾರ ದಟ್ಟಣೆ ಏರ್ಪಟ್ಟಿದೆ. ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ. ಭಾನುವಾರ ರಾತ್ರಿಯಿಂದ ಈಚೆಗೆ ಒಟ್ಟು 540 ಮಿಲಿ ಮೀಟರ್ ಮಳೆಯಾಗಿದೆ.

ಈ ಎರಡು ದಿನಗಳಲ್ಲಿ ಆದ ಮಳೆ ಎರಡು ದಶಕದಲ್ಲೇ ಆದ ಅತಿ ಹೆಚ್ಚು ಮಳೆಯ ಪ್ರಮಾಣವಾಗಿದೆ ಎಂದು ಮುಂಬೈ ಮುನ್ಸಿಪಲ್ ಕಮಿಷನರ್ ಪ್ರವೀಣ್ ಪರ್ದೇಶಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಜೂನ್ ನಲ್ಲಿ ಸರಾಸರಿ ಮಳೆ ಪ್ರಮಾಣ 515 ಮಿಲಿ ಮೀಟರ್. ಆದರೆ ಕೇವಲ ಎರಡು ದಿನದಲ್ಲಿ 540 ಮಿ.ಮೀ. ಮಳೆ ಆಗಿದೆ ಎಂದು ಅವರು ಹೇಳಿದ್ದಾರೆ.

Two decades record broke in Mumbai two days rainfall

ಇಪ್ಪತ್ನಾಲ್ಕು ಗಂಟೆಯಲ್ಲಿ ಮುಂಬೈ ನಗರ ಹಾಗೂ ಉಪನಗರದಲ್ಲಿ ಭಾರೀ ಮಳೆಯಿಂದ ಅತ್ಯಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ 200 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಮಳೆಯು ಜುಲೈ 3ರಿಂದ 5ರ ಮಧ್ಯೆ ಆಗಲಿದೆ. ಇದರಿಂದ ಮಾಮೂಲಿ ಜನಜೀವನಕ್ಕೆ ಹೊಡೆತ ಬೀಳಲಿದೆ ಎನ್ನಲಾಗಿದೆ.

ಮುಂಬೈನಲ್ಲಿ ಭಾರಿ ಮಳೆ, ರೈಲು ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್ಮುಂಬೈನಲ್ಲಿ ಭಾರಿ ಮಳೆ, ರೈಲು ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್

ಕೆಲವು ರೈಲುಗಳ ಸಂಚಾರ ರದ್ದಾಗಿದೆ ಹಾಗೂ ಕೆಲವು ತಡವಾಗಿವೆ. ಸಿಯೋನ್, ದಾದರ್ ಹಾಗೂ ಮಲದ್ ನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ಹೊರಡಬೇಕಾದ ವಿಮಾನಗಳು ಮೂವತ್ತು ನಿಮಿಷ ತಡವಾಗಿವೆ. ಸಂಚಾರ ದಟ್ಟಣೆ ಸರಿಪಡಿಸುವ ಸಲುವಾಗಿ ಐನೂರು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

Two decades record broke in Mumbai two days rainfall

30 ವರ್ಷದ ಮೊಹ್ಮದ್ ಅಯೂಬ್ ಖಾಜಿ ಮುಂಬೈನ ಈಶಾನ್ಯ ಭಾಗದ ಶಿವಾಜಿ ನಗರದಲ್ಲಿ ವಿದ್ಯುತ್ ಶಾಕ್ ನಿಂದ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ರಸ್ತೆಯಲ್ಲಿ ನಿಂತಿದ್ದ ಮಳೆ ನೀರಿನ ಚಿತ್ರ ಹಾಗೂ ವಿಡಿಯೋಗಳನ್ನು ಹಲವರು ಟ್ವೀಟ್ ಮಾಡಿದ್ದಾರೆ.

English summary
Two decades record broke in Mumbai two days rainfall. Here is the complete details of Mumbai rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X