Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರ: ಆಟೋರಿಕ್ಷಾ ಲೈಸನ್ಸ್ ವಿವಾದಕ್ಕೆ ವಿಧ ವಿಧ ಪ್ರತಿಕ್ರಿಯೆ

ಮುಂಬೈ, ಸೆ. 16: ಜೈನರ ಓಲೈಕೆಗಾಗಿ ಮಾಂಸ ಮಾರಾಟ ನಿಷೇಧ ಹೇರಿದ್ದ ಮಹಾರಾಷ್ಟ್ರ ಸರ್ಕಾರ ಈಗ ಮತ್ತೊಂದು ವಿವಾದಿತ ಅದೇಶ ಹೊರಡಿಸಿದೆ. ನವೆಂಬರ್ 1 ರಿಂದ ಮರಾಠಿ ಮಾತನಾಡುವ ಜನರಿಗೆ ಮಾತ್ರ ಆಟೋರಿಕ್ಷಾಗಳ ಪರವಾನಿಗೆಗಳನ್ನು ನೀಡುವುದಾಗಿ ಮಂಗಳವಾರ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಧವಿಧವಾದ ಪ್ರತಿಕ್ರಿಯೆಗಳು ಬಂದಿವೆ.

ಮಹಾರಾಷ್ಟ್ರದ ಸಾರಿಗೆ ಸಚಿವ ದಿವಾಕರ ರಾವೊತೆ ಅವರು, ಮುಂಬೈ ಮಹಾನಗರ ಪ್ರದೇಶಕ್ಕೆ ಒಂದು ಲಕ್ಷ ನೂತನ ಆಟೋರಿಕ್ಷಾ ಪರವಾನಿಗೆಗಳನ್ನು ಪ್ರಕಟಿಸಿದ್ದಾರೆ. [ಮಾಂಸ ಮಾರಾಟ ನಿಷೇಧ: ಮುಂಬೈ ಈಗ 'ಬ್ಯಾನ್- ಇಸ್ತಾನ್']

ಜೊತೆಗೆ ಈ ಪರವಾನಿಗೆಗಳನ್ನು ಮರಾಠಿ ಮಾತನಾಡುವವರಿಗೆ ಮಾತ್ರ ನೀಡಲಾಗುವುದು. ಅರ್ಜಿದಾರರು ಕಳೆದ 15 ವರ್ಷಗಳಿಂದಲೂ ಮಹಾರಾಷ್ಟ್ರದ ನಿವಾಸವಾಗಿರುವ ಬಗ್ಗೆ ವಸತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಮರಾಠಿ ಗೊತ್ತಿಲ್ಲದವರಿಗೆ ಪರವಾನಿಗೆಗಳನ್ನು ನೀಡಲಾಗುವುದಿಲ್ಲ ಎಂದು ಷರತ್ತುಗಳನ್ನು ವಿಧಿಸಿದ್ದಾರೆ.

ಪರವಾನಿಗೆ ಪಡೆಯುವವರಿಗೆ ಸ್ಥಳೀಯ ಭಾಷೆ ತಿಳಿದಿರಬೇಕು ಎಂಬ ನಿಯಮ ಹಿಂದಿನಿಂದಲೂ ಇದೆ. ಆದರೆ ಅದು ಪಾಲನೆಯಾಗುವುದು ಮಾತ್ರ ಅಪರೂಪವಾಗಿತ್ತು. ಮಹಾರಾಷ್ಟ್ರ ಸರ್ಕಾರ ಇದು ಮರಾಠಿಗರಿಗೆ ನೀಡುತ್ತಿರುವ ದೀಪವಾಳಿ ಕೊಡುಗೆ ಎಂದು ಪ್ರಚಾರ ಆರಂಭಿಸಿದೆ.

ಆದೇಶಕ್ಕೆ ಬೆಲೆ ಇಲ್ಲ: ಇದೆಲ್ಲ ಕೆಲ ದಿನಗಳ ಆಟ ಅಷ್ಟೇ 2017ರ ಮುಂಬೈ ಪಾಲಿಕೆ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಈ ತಂತ್ರ ಹೂಡುತ್ತಿದೆ. ಮರಾಠಿ ಮಾನೂಸ್ ಗಳು ಈಗ ಇವರ ಕಣ್ಣಿಗೆ ಬಿದ್ದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಂಜಯ ನಿರುಪಮ್ ಪ್ರತಿಕ್ರಿಯಿಸಿದ್ದಾರೆ.

ಅರ್ಜಿದಾರರಿಗೆ ಸ್ಥಳೀಯ ಭಾಷೆ ತಿಳಿದಿರಬೇಕು ಎನ್ನುವುದು ನಿಜ. ಆದರೆ ಮರಾಠಿ ಭಾಷೆ ಗೊತ್ತಿಲ್ಲವೆಂದ ಮಾತ್ರಕ್ಕೆ ಸರಕಾರವು ಪರವಾನಿಗೆಗಳನ್ನು ನಿರಾಕರಿಸುವಂತಿಲ್ಲ ಎಂದು ಎನ್ ಸಿಪಿ ನಾಯಕ ಸಚಿನ್ ಆಹಿರ್ ಟೀಕಿಸಿದ್ದಾರೆ. (ಪಿಟಿಐ)

 ಗೋಮಾಂಸದ ಮೇಲಿನ ನಿಷೇಧವಿದ್ದಂತೆ

ಗೋಮಾಂಸದ ಮೇಲಿನ ನಿಷೇಧವಿದ್ದಂತೆ

ಸರ್ಕಾರದ ಈ ಆದೇಶ ಹೆಚ್ಚು ಕಡಿಮೆ ಗೋಮಾಂಸದ ಮೇಲಿನ ನಿಷೇಧವಿದ್ದಂತೆ. ನಿಯಮವೇನೋ ಇರುತ್ತದೆ, ಆದರೆ ಅದು ಪಾಲನೆಯಾಗುವುದಿಲ್ಲ ಎಂದು ಸಾರಿಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದು ಐತಿಹಾಸಿಕ ನಿರ್ಣಯ, ಮರಾಠಿಗರಿಗೆ ಜೈ

ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಣಯ, ಮರಾಠಿಗರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ಬೆಳಗ್ಗೇನೆ ಎಂಥಾ ಸುದ್ದಿಗಳು ಕಣ್ಣಿಗೆ ಬಿದ್ದವು

ಬೆಳಗ್ಗೇನೆ ಎಂಥಾ ಸುದ್ದಿಗಳು ಕಣ್ಣಿಗೆ ಬಿದ್ದವು, ಫೇಸ್ ಬುಕ್ ಡಿಸ್ ಲೈಕ್ ಬಟನ್ ನಂತೆ, ಮರಾಠಿಗರಿಗೆ ಮಾತ್ರ ಲೈಸನ್ಸ್ ಅಂತೆ

ಯುಪಿಎಸ್ ಸಿ ಪರೀಕ್ಷೆ ಮಾತ್ರ ಬರೆಯಬಹುದು ಆದ್ರೆ

ಯುಪಿಎಸ್ ಸಿ ಪರೀಕ್ಷೆ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮಾತ್ರ ಬರೆಯಬಹುದು ಆದ್ರೆ ಲೈಸನ್ಸ್ ಮಾತ್ರ ಮರಾಠಿಗರಿಗೆ ಎಂದರೆ ಹೇಗೆ?

ಪ್ರಜಾಪ್ರಭುತ್ವ ನಮ್ಮ ಮುಂಬೈನಲ್ಲಿ ಮಾತ್ರ ಇದೆ

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ? ಮಾಂಸ ನಿಷೇಧ, ಗೋಹತ್ಯೆ ನಿಷೇಧ, ಲೈಸನ್ಸ್ ವಿವಾದ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+