ಟಿವಿ ಎಫ್ ಸ್ಥಾಪಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

Posted By:
Subscribe to Oneindia Kannada

ಮುಂಬೈ, ಮಾರ್ಚ್ 14: ದಿ ವೈರಲ್ ಫಿವರ್ (ಟಿವಿ ಎಫ್) ಎಂಬ ಖ್ಯಾತ ಆನ್ ಲೈನ್ ಎಂಟರ್ಟೇನ್ ಮೆಂಟ್ ನೆಟವರ್ಕ್ ಬಗ್ಗೆ ಹಲವರು ಕೇಳಿರಬಹುದು. ಭಾರತದ ಅತ್ಯಂತ ಯಶಸ್ವೀ ಆನ್ ಲೈನ್ ಸ್ಟಾರ್ಟಪ್ ಗಳಲ್ಲಿ ಟಿವಿ ಎಫ್ ಗೆ ಅಗ್ರಸ್ಥಾನವಿದೆ. ಆದರೆ ಇದರ ಸಂಸ್ಥಾಪಕ ಅರುನಬ್ ಕುಮಾರ್ ಮೇಲೆ ಕನಿಷ್ಠ ಐದು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಿರುವುದು ಟಿವಿ ಎಫ್ ನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.[ದೆಹಲಿಯಲ್ಲಿ ಮಹಿಳೆ ಮೇಲೆ ಬಿಪಿಓ ಉದ್ಯೋಗಿಗಳಿಂದ ಅತ್ಯಾಚಾರ]

ದಿ ಇಂಡಿಯನ್ ಫಾಲ್ವರ್ ಎಂಬ ಹೆಸರಿನಲ್ಲಿ ಅನಾಮಿಕ ಮಹಿಳೆಯೊಬ್ಬರು ಬರೆಯುತ್ತಿರುವ ಬ್ಲಾಗ್ ಬರಹವೊಂದರಲ್ಲಿ ಅರುನಬ್ ಕುಮಾರ್ ತಮಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ. ಆ ಮಹಿಳೆ ಯಾರು ಎಂಬುದು ತಿಳಿದುಬಂದಿಲ್ಲ. ಆದರೆ ಆಕೆಯ ಬರಹವನ್ನು ಬೆಂಬಲಿಸಿ, ಟಿವಿ ಎಫ್ ನ ಹಲವು ಮಾಜಿ ಮಹಿಳಾ ಉದ್ಯೋಗಿಗಳು ಪ್ರತಿಕ್ರಿಯಿಸಿದ್ದಾರೆ.[ಮಹಿಳಾ ಪೇದೆ ಮೇಲೆ ಕಸ್ಟಮ್ಸ್ ಅಧಿಕಾರಿಯಿಂದ ಅತ್ಯಾಚಾರ!]

TVF founder Arunab Kumar accused of molestation

ಆಯುಶಿ ಅಗರ್ವಾಲ್, ರೀಮಾ ಸೇನ್ ಗುಪ್ತಾ ಎಂಬ ಇಬ್ಬರು ಮಹಿಳೆಯರು, ಟಿವಿ ಎಫ್ ನಲ್ಲಿ ಕೆಲಸ ಮಾಡುವಾಗ ಎದುರಿಸಿದ ಸಂಕಷ್ಟಗಳನ್ನು ನಿರ್ಭಯವಾಗಿ ಹೇಳಿಕೊಂಡಿದ್ದರೆ ಮತ್ತಷ್ಟು ಮಂದಿ ಅನಾಮಿಕವಾಗಿಯೇ ಉಳಿದು ತಮ್ಮ ರೋಷ ಹೊರಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The founder of The Viral Fever, an online enetertainment start up Arunab Kumar facing molestation case. Atleast five women accused him.
Please Wait while comments are loading...