ಪ್ರತ್ಯೂಷಾ ಬಾಯ್ ಫ್ರೆಂಡ್ ಗೆ ಜಾಮೀನು ಮಂಜೂರು!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 26: ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬಾಲಿಕಾ ವಧು' ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ಆಕೆ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಗೆ ಮಂಗಳವಾರ (ಏಪ್ರಿಲ್ 26) ನಿರೀಕ್ಷಣಾ ಜಾಮೀನು ದೊರೆತಿದೆ.

24 ವರ್ಷ ವಯಸ್ಸಿನ ನಟಿ ಪ್ರತ್ಯೂಷಾ ಅವರು ಗರ್ಭಿಣಿಯಾಗಿದ್ದರು ಎಂಬ ಅನುಮಾನ ಈಗ ನಿಜವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಜಸ್ಟೀಸ್ ಮೃದುಲಾ ಭಟ್ಕರ್ ಅವರು ಪ್ರಕರಣದ ವಿಚಾರಣೆ ನಡೆಸಿ, ಜಾಮೀನು ನೀಡಿದ್ದಾರೆ. ['ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?]

Suicide or murder? Rahul Raj Singh gets anticipatory bail in Pratyusha Banerjee case

ಪ್ರತ್ಯೂಷಾ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಫೋನ್ ಮಾಡಿ ಮಾತನಾಡಿದ ಕರೆ ಪಟ್ಟಿ ವಿವರ, ಆಡಿಯೋ ಕ್ಲಿಪ್ಪಿಂಗ್ ಆಲಿಸಿದ ನ್ಯಾಯಾಲಯ, ಆರೋಪಿ ರಾಹುಲ್ ವಿರುದ್ಧ ಸರಿಯಾದ ಸಾಕ್ಷಿ ಸಿಗದ ಕಾರಣ ನಿರೀಕ್ಷಣಾ ಜಾಮೀನು ನೀಡಿದೆ.

ಬಂಗೂರು ಪೊಲೀಸ್ ಠಾಣೆಗೆ ವಾರಕ್ಕೆ ಮೂರು ಬಾರಿ ಭೇಟಿ ನೀಡಬೇಕು. ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರಧಾರಿ ಪ್ರತ್ಯೂಷಾಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ನ ಫ್ಲಾಟ್ ನಲ್ಲಿ ನೇಣು ಬಿಗಿದುಕೊಂಡು ಶುಕ್ರವಾರ(ಏಪ್ರಿಲ್ 01) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೂಷಾ ಅವರ ಗೆಳೆಯ ರಾಹುಲ್ ಸಿಂಗ್ ರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಮನೆ ಮಾತಾಗಿದ್ದ ಪ್ರತ್ಯೂಷಾ ಅವರು ಕೆಲಕಾಲದಿಂದ ಮಾನಸಿಕ ಖಿನ್ನತ ಅನುಭವಿಸುತ್ತಿದ್ದರು. ಇದಲ್ಲದೆ ಆಕೆಯ ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆ ಮನಸ್ತಾಪ ಮಾಡಿಕೊಂಡಿದ್ದರು

ವೈದ್ಯಕೀಯ ವರದಿಯ ಅನ್ವಯ ಆಕೆಯ ಗುಪ್ತಾಂಗದಲ್ಲಿ ಬಿಳಿದ್ರವ ಪತ್ತೆಯಾಗಿದ್ದು, ಆಕೆ ಸಾಯುವುದಕ್ಕೂ ಮುನ್ನ ಗರ್ಭಿಣಿಯಾಗಿದ್ದರೆ? ಎಂಬ ಪ್ರಶ್ನೆಗೆ histopathology ಪರೀಕ್ಷೆಯಿಂದ ಉತ್ತರ ಸಿಕ್ಕಿತ್ತು. ಆದರೆ, ಆಕೆ ಸಾವಿಗೆ ರಾಹುಲ್ ಕಾರಣ ಎನ್ನುವುದಕ್ಕೆ ಯಾವುದೇ ಪುರಾವೆ ಇನ್ನೂ ಸಿಕ್ಕಿಲ್ಲ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After so many twists and turns relating to the suicide of famed TV actress Pratyusha Banerjee the Bombay High Court on Monday, Apr 26 granted anticipatory bail to her boyfriend Rahul Raj Singh, accused of abetting the suicide of Pratyusha.
Please Wait while comments are loading...