ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಾಕ್ಷ್ಯ ಕೇಳೋರನ್ನು ರಾಕೆಟ್ ಗೆ ಕಟ್ಟಿ ಹಾಕಿ ಬಾಲಾಕೋಟ್ ಗೆ ಕಳುಹಿಸಬೇಕಿತ್ತು'

|
Google Oneindia Kannada News

ಮುಂಬೈ, ಏಪ್ರಿಲ್ 24: ಅನುಮಾನದಿಂದ ಪ್ರಶ್ನೆ ಮಾಡುತ್ತಿರುವ ವಿಪಕ್ಷದ ನಾಯಕರನ್ನು ರಾಕೆಟ್ ಗೆ ಕಟ್ಟಿ ಹಾಕಬೇಕಿತ್ತು. ಆಗ ಸ್ವತಃ ಅವರ ಕಣ್ಣಿನಿಂದಲೇ ದಾಳಿಯನ್ನು ನೋಡಬಹುದಿತ್ತು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ವಿರಾರ್ ನಲ್ಲಿ ಸಭೆಯಲ್ಲಿ ಹೇಳಿದ್ದಾರೆ.

ವಿಪಕ್ಷಗಳು ಸರಕಾರದ ಸಾಧನೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ ಮತ್ತು ಸಶಸ್ತ್ರ ಪಡೆಯನ್ನು ಹಾಗೂ ಅದರ ಧೈರ್ಯವನ್ನು ಪ್ರಶ್ನಿಸುತ್ತಿವೆ. ವಿರೋಧ ಪಕ್ಷಗಳ ಈ 'ಮಹಾ ಖಿಚಡಿ' ಬಗ್ಗೆ ನಾವು ಏನು ಹೇಳಲು ಸಾಧ್ಯ? ನಮ್ಮ ವಾಯು ಸೇನೆಯ ಶೌರ್ಯದ ಬಗ್ಗೆ ಹೆಮ್ಮೆ ಪಡುವುದನ್ನು ಬಿಟ್ಟು ಬಾಲಾಕೋಟ್ ದಾಳಿ ಬಗ್ಗೆ ಅನುಮಾನ ಪಡುತ್ತಿವೆ ಎಂದು ಅವರು ಹೇಳಿದ್ದಾರೆ.

ಏರ್ ಸ್ಟ್ರೈಕ್ ದಿನ ಬೆಳಿಗ್ಗೆ ಏನಾಯ್ತು? ರಕ್ಷಣಾ ಸಚಿವರೇ ಬಿಚ್ಚಿಟ್ಟ ಸತ್ಯ!ಏರ್ ಸ್ಟ್ರೈಕ್ ದಿನ ಬೆಳಿಗ್ಗೆ ಏನಾಯ್ತು? ರಕ್ಷಣಾ ಸಚಿವರೇ ಬಿಚ್ಚಿಟ್ಟ ಸತ್ಯ!

ವಿರೋಧ ಪಕ್ಷದವರು ಹೀಗೆ ಅನುಮಾನ ಪಡುತ್ತಾರೆ ಎಂದು ಗೊತ್ತಿದ್ದರೆ, ಆ ನಾಯಕರನ್ನು ರಾಕೆಟ್ ಗೆ ಕಟ್ಟಿ ಬಾಲಕೋಟ್ ಗೆ ಕಳುಹಿಸಬಹುದಿತ್ತು. ಆಗ ಅವರು ತಮ್ಮ ಕಣ್ಣುಗಳಿಂದಲೇ ದಾಳಿ ನೋಡಬಹುದಿತ್ತು ಎಂದಿದ್ದಾರೆ.

Strap them to rockets, says Devendra Fadnavis on those seeking Balakot proof

ಮಹಾರಾಷ್ಟ್ರದ ಸಚಿವೆ ಪಂಕಜಾ ಮುಂಡೆ ಸಹ ಇಂಥದೇ ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ಅವರಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಕಳುಹಿಸಬೇಕು ಎಂದಿದ್ದರು.

ರಹಸ್ಯ ಟೇಪ್ : ಏರ್ ಸ್ಟ್ರೈಕ್ ನಂತರ ಉಗ್ರರ ದೇಹ ಸುಟ್ಟು ನದಿಯಲ್ಲಿ ಎಸೆಯಲಾಯಿತೆ?ರಹಸ್ಯ ಟೇಪ್ : ಏರ್ ಸ್ಟ್ರೈಕ್ ನಂತರ ಉಗ್ರರ ದೇಹ ಸುಟ್ಟು ನದಿಯಲ್ಲಿ ಎಸೆಯಲಾಯಿತೆ?

"ವಾಯು ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವವರಿಗೆ ಹೇಳಲು ಬಯಸುತ್ತೇನೆ, ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ, ಮತ್ತೊಂದು ದೇಶದಲ್ಲಿ ಹಾಕಬೇಕು. ನನಗನಿಸುತ್ತದೆ, ಆಗ ಅವರು (ವಿರೋಧ ಪಕ್ಷಗಳು) ನಾವು ಏನು ಮಾಡಿದೆವು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ" ಎಂದು ಪಂಕಜಾ ಮುಂಡೆ ಹೇಳಿದ್ದರು.

English summary
Maharashtra CM Devendra Fadnavis has said opposition leaders seeking proof of the Balakot air strike should have been strapped to rockets so that they could have seen with their own eyes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X