ಇಂದು ಮುಂಬೈಗೆ ತಲುಪಲಿರುವ ಶ್ರೀದೇವಿ ಪಾರ್ಥಿವ ಶರೀರ
ಮುಂಬೈ, ಫೆಬ್ರವರಿ 26: ಬಾಲಿವುಡ್ ನಟಿ ಶ್ರೀದೇವಿ(54) ಅವರ ಪಾರ್ಥಿವ ಶರೀರವನ್ನು ದುಬೈನಿಂದ ಇಂದು(ಫೆ.26) ಮುಂಬೈಗೆ ತರಲಾಗುತ್ತಿದ್ದು, ಸಂಜೆ ಸುಮಾರು 7 ಗಂಟೆ ಸುಮಾರಿಗೆ ಮೃತದೇಹ ಮುಂಬೈ ತಲುಪಲಿದೆ.
ಅನಿಲ್ ಅಂಬಾನಿಯರಿಗೆ ಸೇರಿದ ಖಾಸಗಿ ವಿಮಾನವೊಂದರಲ್ಲಿ ಶ್ರಿದೇವಿಯವರ ದೇಹವನ್ನು ಮುಂಬೈಗೆ ತರಲಾಗುತ್ತಿದೆ. ಈಗಾಗಲೇ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ದುಬೈನಲ್ಲೇ ನಡೆಸಲಾಗಿದೆ.
ಶ್ರೀದೇವಿ ಅವರ ಅಂತ್ಯ ಸಂಸ್ಕಾರ ಮುಂಬೈನ ಪವಾಸ್ ಹಾನ್ಸ್ ರುದ್ರಭೂಮಿಯಲ್ಲಿ ನಡೆಯಲಿದೆ. ಅಂತ್ಯಸಂಸ್ಕಾರದ ಸಮಯದ ಕುರಿತು ನಿಖರ ಮಾಹಿತಿ ಲಭ್ಯವಿಲ್ಲ.

ಫೆ.24 ರಂದು ಶನಿವಾರ ದುಬೈನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಶ್ರೀದೇವಿ ತೀವ್ರ ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿದ್ದರು. ಅವರ ಅನಿರೀಕ್ಷಿತ ಸಾವಿಗೆ ಇಡೀ ದೇಶವೂ ತೀವ್ರ ಸಂತಾಪ ವ್ಯಕ್ತಪಡಿಸಿದೆ.
Mumbai: Latest visuals from outside the residence of #Sridevi; her mortal remains will be brought to India from Dubai today. pic.twitter.com/pAz2Xav4lG
— ANI (@ANI) February 26, 2018












Click it and Unblock the Notifications