ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ಭೇಟಿಗೆ ಹೋಗಿದ್ದ ಸೋನು ಸೂದ್‌ರನ್ನು ತಡೆದ ಪೊಲೀಸರು

|
Google Oneindia Kannada News

ಮುಂಬೈ, ಜೂನ್ 9: ವಲಸೆ ಕಾರ್ಮಿಕರ ಭೇಟಿಗೆಂದು ನಟ ಸೋನು ಸೂದ್ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದಾಗ, ಪೊಲೀಸರು ಅವರನ್ನು ತಡೆದು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.

ಲಾಕ್‌ಡೌನ್‌ನಿಂದಾಗಿ ಊರಿಗೆ ತೆರಳಲಾರದೆ ಸಿಲುಕಿಕೊಂಡಿರುವ ಸಾವಿರಾರು ಮಂದಿ ವಲಸೆ ಕಾರ್ಮಿಕರನ್ನು ಊರಿಗಳಿಗೆ ಕಳುಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಶಿವಸೇನೆ ಮಾತ್ರ ಈ ಕಾರ್ಯದ ಹಿಂದೆ ಬಿಜೆಪಿ ನಿಂತಿದೆ ಎಂದು ಆರೋಪಿಸಿತ್ತು.

ನಟ ಸೋನು ಸೂದ್ ಮಹತ್ಕಾರ್ಯದಲ್ಲಿ ಹುಳುಕು ಹುಡುಕಿದ ಶಿವಸೇನೆ ನಟ ಸೋನು ಸೂದ್ ಮಹತ್ಕಾರ್ಯದಲ್ಲಿ ಹುಳುಕು ಹುಡುಕಿದ ಶಿವಸೇನೆ

ಈ ಕುರಿತು ಸೋನು ಸೂದ್ ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿ ನಾವೆಲ್ಲರೂ ಒಂದುಗೂಡಿ ಕೆಲಸ ಮಾಡಿದರೆ ಸಾಕಷ್ಟು ವಲಸೆ ಕಾರ್ಮಿರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಇದಾದ ಬಳಿಕ ಸಂಜಯ್ ರೌತ್ ತಮ್ಮ ಟ್ವೀಟ್ ಡಿಲೀಟ್ ಮಾಡಿ ಜಯ್ ಮಹಾರಾಷ್ಟ್ರ ಎಂದು ಬರೆದುಕೊಂಡಿದ್ದರು.

ಬಾಂದ್ರಾ ಟರ್ಮಿನಲ್‌ನಲ್ಲಿ ಸೋನು ತಡೆದ ಪೊಲೀಸರು

ಬಾಂದ್ರಾ ಟರ್ಮಿನಲ್‌ನಲ್ಲಿ ಸೋನು ತಡೆದ ಪೊಲೀಸರು

ಮುಂಬಯಿಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟು ಅವರನ್ನು ಅವರ ಊರುಗಳಿಗೆ ಕಳಿಸಿ ಮಾನವೀಯತೆ ಮೆರೆದಿದ್ದ ಬಾಲಿವುಡ್ ನಟ ಸೋನು ಸೂದ್ ಅವರನ್ನು ಕಾರ್ಮಿಕರನ್ನು ಭೇಟಿಯಾಗದಂತೆ ಬಾಂದ್ರಾ ಟರ್ಮಿನಸ್ ಹೊರಗೆ ಪೋಲೀಸರು ತಡೆದಿದ್ದಾರೆ. ನಟ ಸೂದ್ ಬಿಜೆಪಿ ರಾಜಕೀಯ ಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದ ಶಿವಸೇನೆ ಆರೋಪದ ಬಳಿಕ ಪೋಲೀಸರು ಈ ಕ್ರಮ ಜರುಗಿಸಿದ್ದಾರೆ.

ಶ್ರಮಿಕ್ ರೈಲಿನಲ್ಲಿ ಕಾರ್ಮಿಕರು ಪ್ರಯಾಣಿಸಬೇಕಿತ್ತು

ಶ್ರಮಿಕ್ ರೈಲಿನಲ್ಲಿ ಕಾರ್ಮಿಕರು ಪ್ರಯಾಣಿಸಬೇಕಿತ್ತು

ವಲಸೆ ಕಾರ್ಮಿಕರು ಬಾಂದ್ರಾ ಟರ್ಮಿನಸ್‌ನಿಂದ ಉತ್ತರ ಪ್ರದೇಶಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸಬೇಕಿತ್ತು.ನಿರ್ಮಲ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಶಶಿಕಾಂತ್ ಭಂಡಾರೆ, ಹೇಳಿದಂತೆ "ನಟನನ್ನು ಆರ್‌ಪಿಎಫ್ ತಡೆದಿದೆ. ನಟ ತಮ್ಮ ತಮ್ಮ ಊರಿಗೆ ಹೊರಟಿದ್ದ ಕಾರ್ಮಿಕರನ್ನು ಭೇಟಿಯಾಗಲು ಬಯಸಿದ್ದರು. ಈ ಬಗ್ಗೆ ನಮಗೆ ಈವರೆಗೆ ಯಾವುದೇ ದೂರು ಬಂದಿಲ್ಲ" ಎಂದು ಹೇಳಿದರು.ಲಾಕ್ ಡೌನ್ ಮಧ್ಯೆ ಮಹಾರಾಷ್ಟ್ರದಲ್ಲಿ ಸಿಲುಕಿರುವ ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ ಸಹಾಯ ನೀಡಲು ಬಿಜೆಪಿ ಸೂದ್ ಅವರನ್ನು ಮುಂದು ಬಿಟ್ಟಿದೆಯೆ ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಭಾನುವಾರ ಪ್ರಶ್ನಿಸಿದ್ದರು.

ಕಾರ್ಮಿಕರನ್ನು ಭೇಟಿಯಾಗಲು ತೆರಳಿದ್ದ ಸೋನು ಸೂದ್

ಕಾರ್ಮಿಕರನ್ನು ಭೇಟಿಯಾಗಲು ತೆರಳಿದ್ದ ಸೋನು ಸೂದ್

ಕಾರ್ಮಿಕರನ್ನು ಭೇಟಿಯಾಗಲು ಸೋಮವಾರ ರಾತ್ರಿ ನಿಲ್ದಾಣಕ್ಕೆ ತಲುಪಿದಾಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನಟನಿಗೆ ಒಳಪ್ರವೇಶಿಸಲು ಅನುಮತಿ ನೀಡಿಲ್ಲವೆಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಆದರೆ ಈ ಸಂಬಂಧ ಅವರಿಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ.

ಸಂಜಯ್ ರೌತ್ ಹೇಳಿದ್ದೇನು?

ಸಂಜಯ್ ರೌತ್ ಹೇಳಿದ್ದೇನು?

ಸೇನಾ ಮುಖವಾಣಿ ಸಾಮ್ನಾದಲ್ಲಿ ತನ್ನ ಸಾಪ್ತಾಹಿಕ ಅಂಕಣ' ರೋಖೋಕ್ 'ನಲ್ಲಿ, ಲಾಕ್ ಡೌನ್ ಸಮಯದಲ್ಲಿ ಮಹಾರಾಷ್ಟ್ರದ ಸಾಮಾಜಿಕ ವಲಯದಲ್ಲಿ ಹಠಾತ್ತನೆ ಸೂದ್ ಮಹಾತ್ಮನಾಗಿ ಅವತರಿಸಿದ್ದಾರೆ, ಇದರ ಹಿಂದಿನ ಕಾರಣವೇನು ಎಂದು ರೌತ್ ಪ್ರಶ್ನಿಸಿದ್ದಾರೆ.2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸೂದ್ ವಿರುದ್ಧದ "ಕುಟುಕು ಕಾರ್ಯಾಚರಣೆ" ಯನ್ನು ರೌತ್ ಉಲ್ಲೇಖಿಸಿದ್ದು, ಬಿಜೆಪಿ ನೇತೃತ್ವದ ಸರ್ಕಾರವನ್ನು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ವಿವಿಧ ವೇದಿಕೆಗಳಲ್ಲಿ ಉತ್ತೇಜಿಸಲುಸೂದ್ ಒಪ್ಪಿಗೆ ಸೂಚಿಸಿದ್ದರೆಂದು ಅವರು ಹೇಳಿದರು
ಆದರೆ ಇನ್ನೊಂದೆಡೆ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಅತಂತ್ರರಾಗಿರುವ ವಲಸೆ ಕಾರ್ಮಿಕರಿಗೆ ಬಸ್ಸುಗಳನ್ನು ವ್ಯವಸ್ಥೆ ಮಾಡುವ ಸೂದ್ ಅವರ ಉಪಕ್ರಮವನ್ನು ಶ್ಲಾಘಿಸಿದರು.

English summary
Actor Sonu Sood, who has been arranging transport for migrant workers stranded in Mumbai and has faced criticism from the Shiv Sena for "enacting a political script written by BJP", was stopped outside the Bandra Terminus in Mumbai by police from meeting labourers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X