ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸಿಜನ್ ಖಾಲಿನಾ? ಮೋದಿಗೆ ಶಿವಸೇನೆ ತಪರಾಕಿ!

|
Google Oneindia Kannada News

ಮುಂಬೈ, ಡಿಸೆಂಬರ್ 26: ಬಿಜೆಪಿ ಜೊತೆ ಮುನಿಸಿಕೊಂಡಿರುವ ಶಿವಸೇನೆ ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇದೆ.

ಮೋದಿಯವರೇ ಮಾಡಿದ್ದ ಭಾಷಣವನ್ನು ಮತ್ತೊಮ್ಮೆ ನೆನಪಿಸಿ, ಅವರನ್ನು ಅಣಕಿಸುವ ಮೂಲಕ ಮತ್ತೊಮ್ಮೆ ಬಿಜೆಪಿಗೆ ಶಿವಸೇನೆ ತಪರಾಕಿ ನೀಡಿದೆ.

ಅಧಿಕಾರದಲ್ಲೇ ಇದ್ದೀರಿ, ಆದರೂ ರಾಮನಿಗೇಕೆ ವನವಾಸ?: ಬಿಜೆಪಿಗೆ ಶಿವಸೇನಾ ಪ್ರಶ್ನೆಅಧಿಕಾರದಲ್ಲೇ ಇದ್ದೀರಿ, ಆದರೂ ರಾಮನಿಗೇಕೆ ವನವಾಸ?: ಬಿಜೆಪಿಗೆ ಶಿವಸೇನಾ ಪ್ರಶ್ನೆ

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದ ಮೋದಿ, 'ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿ ಅವರಿಗೆ ಅಧಿಕಾರ ಎಂಬುದು ಆಕ್ಸಿಜನ್ ಇದ್ದ ಹಾಗಾಗಿತ್ತು' ಎಂದಿದ್ದರು.

Shiv Sena mocks PM Narendra Modi

ಇದೇ ಮಾತನ್ನು ಪುನರುಚ್ಚರಿಸಿದ ಶಿವಸೇನೆ, 'ಮೋದಿ ನೀವು ಚೆನ್ನಾಗಿ ಭಾಷಣ ಮಾಡುತ್ತೀರಿ. ಆದರೆ ಈಗ ನಿಮ್ಮ 'ಆಕ್ಸಿಜನ್' ಖಾಲಿಯಾಗುತ್ತಿದೆಯಾ?' ಎಂದು ಶಿವಸೇನೆ ಪ್ರಶ್ನಿಸಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಲೇಖನವೊಂದರಲ್ಲಿ ಅದು ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!

"ಅಧಿಕಾರಕ್ಕಾಗಿ ಗೂಂಡಾಗಳಿಗೂ ಸ್ಥಾನ ನೀಡುತ್ತಿದೆ ಬಿಜೆಪಿ. ಅಲ್ಲದೆ ಪ್ರತಿಯೊಬ್ಬರ ಕಂಪ್ಯೂಟರ್ ಡೆಟಾ ಮೇಲೂ ಕಣ್ಣಿಡುವಂತೆ ಕೇಂದ್ರದ ಹತ್ತು ಏಜೆನ್ಸಿಗಳಿಗೆ ಹೇಳಿರುವುದು ಸ್ವೀಕಾರಾರ್ಹ ಕ್ರಮವಲ್ಲ" ಎಂದು ಶಿವಸೇನೆ ದೂರಿದೆ.

ಜನರ ಕಂಪ್ಯೂಟರ್ ಮತ್ತು ಫೋನಿನೊಳಗೆ ಇಣುಕುವುದು ಬಿಜೆಪಿ ಅಧಿಕಾರಕ್ಕಾಗಿ ಎಷ್ಟು ದುರಾಸೆ ಹೊಂದಿದೆ ಎಂಬುದಕ್ಕೆ ಸಾಕ್ಷಿ. ಅಧಿಕಾರಕ್ಕಾಗಿ ಗೂಂಡಾಗಳನ್ನು ನಾಯಕರನ್ನಾಗಿ ಮಾಡುತ್ತಿದೆ ಬಿಜೆಪಿ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಜಾಪ್ರಭುತ್ವಕ್ಕೆ ಸಾಕಷ್ಟು ಬೆಲೆ ಕೊಡುತ್ತಿದ್ದರು. ಆದ್ದರಿಂದಲೇ ಅವರ ಹೆಸರು ಎಂದಿಗೂ ಎಲ್ಲರ ಮನಸ್ಸಿನಲ್ಲಿಯೂ ಇರುತ್ತದೆ. ಆದರೆ ಇದೀಗ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಎರಡನ್ನೂ ಕಸಿಯಲಾಗುತ್ತಿದೆ ಎಂದು ಲೇಖನದಲ್ಲಿ ದೂರಲಾಗಿದೆ.

English summary
In an edition of its mouthpiece Saamana, Shiv Sena mocks PM Narendra Modi, and tells PM is ready to do anything for power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X