ಗುತ್ತಿಗೆದಾರನ ಮೇಲೆ ಕಸ ಸುರಿಸಿದ ಶಿವಸೇನೆಯ ಶಾಸಕ: ವಿಡಿಯೋ ವೈರಲ್‌

ಮುಂಬೈ, ಜೂ.13: ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಸಿಲ್ಲ ಎಂಬ ಆರೋಪದ ಮೇಲೆ ಶಿವಸೇನೆ ಶಾಸಕರೊಬ್ಬರು ಗುತ್ತಿಗೆದಾರನನ್ನು ಮುಂಬೈನ ನೀರಿನಿಂದ ತುಂಬಿದ ರಸ್ತೆಯಲ್ಲಿ ಕುಳ್ಳಿರಿಸಿ ಶಿಕ್ಷೆಯಾಗಿ ಗುತ್ತಿಗೆದಾರನ ಮೇಲೆ ಜನರಿಂದ ಕಸವನ್ನು ಸುರಿಸಿದ್ದಾರೆ.

ವೈರಲ್ ಆದ ಘಟನೆಯ ದೃಶ್ಯದಲ್ಲಿ ಉತ್ತರ ಮುಂಬೈನ ಕಂಡಿವಲಿ ಕ್ಷೇತ್ರದ ಶಾಸಕ ದಿಲೀಪ್​ ಲಾಂಡೆ ಮತ್ತು ಇನ್ನೂ ಅನೇಕರು ಗುತ್ತಿಗೆದಾರನನ್ನು ನೀರಿನಿಂದ ತುಂಬಿದ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಬಳಿಕ ಗುತ್ತಿಗೆದಾರ ಕುಳಿತುಕೊಳ್ಳುತ್ತಿದ್ದಂತೆ, ಓರ್ವ ವ್ಯಕ್ತಿ ಗುತಿಗೆದಾರನನ್ನು ತಳ್ಳಿದ್ದಾರೆ. ಹಾಗೆಯೇ ಬಳಿಕ ಶಾಸಕರು ಇಬ್ಬರಿಂದ ಕಸದ ರಾಶಿಯನ್ನು ಗುತ್ತಿಗೆದಾರರ ಮೇಲೆ ಸುರಿಯಲು ಸೂಚಿಸಿದ್ದಾರೆ.

ಚರಂಡಿಗಳನ್ನು ಈ ಗುತ್ತಿಗೆದಾರ ಸರಿಯಾಗಿ ಸ್ವಚ್ಛ ಮಾಡಿಸಿಲ್ಲ. ಆದ್ದರಿಂದ ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರೀ ಮಾನ್ಸೂನ್ ಮಳೆಯಾಗುತ್ತಿದ್ದಂತೆ, ಚರಂಡಿಗಳು ತುಂಬಿ ಹರಿದಿದೆ ಎಂದು ಆರೋಪಿಸಲಾಗಿದೆ.

Shiv sena MLA Poured garbage on contractor in mumbai: video goes viral

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ದಿಲೀಪ್​ ಲಾಂಡೆ, "ಈ ಪ್ರದೇಶದಲ್ಲಿ ಜಲಾವೃತವನ್ನು ತಡೆಗಟ್ಟುವ ಜವಾಬ್ದಾರಿಯನ್ನು ಹೊಂದಿರುವವರು ಈ ಗುತ್ತಿಗೆದಾರರು. ಆದರೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ" ಎಂದು ಆರೋಪಿಸಿದ್ದಾರೆ.

"ಜನರು ನಮ್ಮ ಮೇಲೆ ನಂಬಿಕೆ ಇರಿಸಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದ್ದರಿಂದ ನನ್ನ ಕರ್ತವ್ಯವನ್ನು ಪೂರೈಸಲು ನಾನು ಸ್ಥಳೀಯ ಪಕ್ಷದ ಮುಖ್ಯಸ್ಥ ಮತ್ತು ಶಿವಸೇನೆ ಸೈನಿಕರೊಂದಿಗೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ್ದಾರೆ.

"ಇಲ್ಲಿ ಸ್ವಚ್ಛ ಮಾಡುವ ಕೆಲಸವನ್ನು ಗುತ್ತಿಗೆದಾರನಿಗೆ ವಹಿಸಲಾಗಿತ್ತು. ಆದರೆ ಆತ ಅದನ್ನು ಮಾಡಿಲ್ಲ. ಅದಕ್ಕಾಗಿಯೇ ನಾನು ಚರಂಡಿಯನ್ನು ಸ್ವಚ್ಛಗೊಳಿಸಲು ಬೀದಿಗೆ ಇಳಿದಿದ್ದೇನೆ. ಗುತ್ತಿಗೆದಾರ ತನ್ನ ಕೆಲಸ ಮಾಡದ ಕಾರಣ ನಾವು ಇಲ್ಲಿಗೆ ಕರೆತಂದಿದ್ದೇವೆ" ಎಂದಿದ್ದಾರೆ.

ಶಿವಸೇನೆ ಕಳೆದ 25 ವರ್ಷಗಳಿಂದ ಬೃಹನ್‌ಮುಂಬೈ ಮಹಾನಗರ ಪಾಲಿಕೆಯಲ್ಲಿ ಆಡಳಿತ ವಹಿಸಿಕೊಂಡಿದೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+