• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂತ್ಯ ಸಂಸ್ಕಾರಕ್ಕೆ 20 ಜನ, ಮದ್ಯದಂಗಡಿ ಮುಂದೆ ಸಾವಿರ ಜನ: ಇದು ಓಕೆನಾ ಮಿ.ಮೋದಿ?

|

ಮುಂಬೈ, ಮೇ 9: ಲಾಕ್ ಡೌನ್ ಅವಧಿಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ ಮೋದಿ ಸರಕಾರದ ವಿರುದ್ದ ಶಿವಸೇನೆ ಕೆಂಡಾಮಂಡಲವಾಗಿದೆ.

   ದಾವಣಗೆರೆಯಲ್ಲಿ ಕೊರೊನ ನಿಯಂತ್ರಣದ ಬಗ್ಗೆ ಮಹತ್ವದ ಸಭೆ | Renukacharya | Oneindia Kannada

   "ಅಂತ್ಯ ಸಂಸ್ಕಾರಕ್ಕೆ ಇಪ್ಪತ್ತು ಜನರಿಗಷ್ಟೇ ಅನುಮತಿ ನೀಡುವ ನಿಮಗೆ, ಮದ್ಯದಂಗಡಿಯ ಮುಂದೆ ಸಾವಿರ ಜನ ನಿಂತರೆ ಓಕೆನಾ" ಎನ್ನುವ ಪ್ರಶ್ನೆಯನ್ನು ಶಿವಸೇನೆ ಮುಖಂಡ ಸಂಜಯ ರಾವತ್ ಎಸೆದಿದ್ದಾರೆ.

   ಯಡಿಯೂರಪ್ಪನವರ ಕಾರ್ಯಶೈಲಿಯನ್ನು ಮುಕ್ತಕಂಠದಿಂದ ಹೊಗಳಿದ ವಿರೋಧ ಪಕ್ಷದ ನಾಯಕರು

   ಮೋದಿ ಸರಕಾರವನ್ನು ಟೀಕಿಸುವಲ್ಲಿ ಮಂಚೂಣಿಯಲ್ಲಿರುವ ಶಿವಸೇನೆಯ ರಾಜ್ಯಸಭಾ ಸದಸ್ಯ ರಾವತ್, "ಅಂತ್ಯ ಸಂಸ್ಕಾರಕ್ಕೆ ಇಪ್ಪತ್ತು ಜನರಿಗಷ್ಟೇ ಅನುಮತಿ, ಯಾಕೆಂದರೆ ಅವರಲ್ಲಿ ಸ್ಪಿರಿಟ್ ಉಳಿದಿರುವುದಿಲ್ಲ. ಆದರೆ, ಮದ್ಯದಂಗಡಿಯ ಮುಂದೆ ಸಾವಿರಾರು ಜನರಿಗೆ ಸೇರಲು ಅವಕಾಶವಿದೆ. ಯಾಕೆಂದರೆ, ಮದ್ಯದಂಗಡಿಯಲ್ಲಿ ಸ್ಪಿರಿಟ್ ಇದೆಯಲ್ಲಾ" ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

   ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ ಮದುವೆ ಸಮಾರಂಭಕ್ಕೆ ಐವತ್ತು, ಅಂತ್ಯ ಸಂಸ್ಕಾರಕ್ಕೆ ಇಪ್ಪತ್ತು ಜನರ ಮೇಲೆ ಸೇರಲು ಅವಕಾಶವಿಲ್ಲ ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು.

   ನನ್ನ ಸಿಎಂ ಹುದ್ದೆ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ: ಮೋದಿಗೆ ಮಹಾ ಸಿಎಂ ಉದ್ಧವ್ ಠಾಕ್ರೆ ಮನವಿ

   ದೀಪ ಬೆಳಗಿಸುವ ಮೋದಿ ಕರೆಗೂ ಟೀಕಿಸಿದ್ದ ಸಂಜಯ್ ರಾವತ್, "ಕೋವಿಡ್ 19 ವೈರಾಣುವನ್ನು ಇನ್ನಷ್ಟು ಹರಡಲು ಮೋದಿ ಸರಕಾರ ಹೊರಟಿದೆಯೇ" ಎಂದು ಪ್ರಶ್ನಿಸಿದ್ದರು.

   ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದನ್ನು ಮದ್ಯಪ್ರಿಯರು ವ್ಯಾಪಕವಾಗಿ ಸ್ವಾಗತಿಸಿದ್ದರೆ, ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಗಂಭೀರ ವಿಚಾರವಾಗಿದೆ.

   English summary
   Shiv Sena leader Sanjay Raut takes dig at Centre, says only 20 people can attend funeral, but 1000 can gather at liquor shops,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X