ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಎಷ್ಟು ದಿನ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮುಂದುವರೆಯುತ್ತೆ?"

|
Google Oneindia Kannada News

ಮುಂಬೈ, ಮಾರ್ಚ್ 26: ಕಳೆದ ಎರಡು ದಿನಗಳಿಂದ ದೇಶದ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿರುವ ಕಾರಣ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೊಂಚ ಇಳಿಸಿರುವುದಾಗಿ ಕೇಂದ್ರ ತಿಳಿಸಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಐದು ರಾಜ್ಯಗಳಲ್ಲಿನ ಚುನಾವಣೆ ಮೇಲೆ ಬೆಲೆ ಏರಿಕೆ ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಈ ತಂತ್ರವಷ್ಟೆ ಎಂದು ಟೀಕಿಸಿದೆ.

ಪಕ್ಷದ "ಸಾಮ್ನಾ" ಪತ್ರಿಕೆ ಸಂಪಾದಕೀಯದಲ್ಲಿ ಈ ಹೇಳಿಕೆ ನೀಡಿದ್ದು, "ತೈಲ ಬೆಲೆಯಲ್ಲಿ ಕೆಲವೇ ಪೈಸೆಗಳನ್ನು ಕಡಿಮೆ ಮಾಡುವ ಬದಲು ಕಳೆದ ಒಂದು ವರ್ಷದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಗಳಿಸಿದ ಹೆಚ್ಚುವರಿ ಆದಾಯದ ಕೆಲ ಭಾಗವನ್ನು ಜನರೊಂದಿಗೆ ಹಂಚಿಕೊಳ್ಳಬಹುದಿತ್ತಲ್ಲವೇ" ಎಂದು ಉಲ್ಲೇಖಿಸಿದೆ.

ಪ್ರಜಾಪ್ರಭುತ್ವವನ್ನು ಕೊಲ್ಲಲೂ ಮೋದಿ ಸರ್ಕಾರ ಹಿಂಜರಿಯುವುದಿಲ್ಲ; ಶಿವಸೇನೆಪ್ರಜಾಪ್ರಭುತ್ವವನ್ನು ಕೊಲ್ಲಲೂ ಮೋದಿ ಸರ್ಕಾರ ಹಿಂಜರಿಯುವುದಿಲ್ಲ; ಶಿವಸೇನೆ

ಗುರುವಾರ ತೈಲ ಬೆಲೆ ಕೊಂಚ ಕಡಿಮೆಯಾಗಿದೆ. ಗುರುವಾರ ಲೀಟರ್ ಪೆಟ್ರೋಲಿಗೆ 21 ಪೈಸೆ ತಗ್ಗಿಸಿದ್ದು, ಡೀಸೆಲ್ ಬೆಲೆಯನ್ನು ಲೀಟರಿಗೆ 20 ಪೈಸೆ ತಗ್ಗಿಸಿದೆ. ಬುಧವಾರ ಲೀಟರ್ ಪೆಟ್ರೋಲಿಗೆ 18 ಪೈಸೆ ಇಳಿಸಿದ್ದು, ಡೀಸೆಲ್ ‌ಗೆ 17 ಪೈಸೆ ಇಳಿಸಿದೆ. ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿ ತೈಲ ಬೆಲೆ ಕಡಿತಗೊಂಡಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದ್ದು, ಈ ಕಾರಣಕ್ಕೆ ತೈಲ ಬೆಲೆ ಇಳಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

Shiv Sena Comment On Centre Reducing Petrol Diesel Price

ಚುನಾವಣೆಯನ್ನು ಉದ್ದೇಶವಾಗಿಟ್ಟುಕೊಂಡು ಬಿಜೆಪಿ ಈ ನಿರ್ಧಾರ ಕೈಗೊಂಡಿದೆಯಷ್ಟೆ. ಈ ಇಳಿಕೆಗೊಂಡಿರುವ ಬೆಲೆ ಎಷ್ಟು ದಿನ ಮುಂದುವರೆಯುತ್ತದೆ ನೋಡೋಣ. ಅಂತರರಾಷ್ಟ್ರೀಯ ಕಚ್ಚಾ ತೈಲದಲ್ಲಿ ಬೆಲೆ ತಗ್ಗಿದ ಕಾರಣ ತೈಲ ಬೆಲೆ ಇಳಿಕೆಯಾಗಿದೆ ಎಂದು ಕೇಂದ್ರ ಹೇಳಿದೆ. ಆದರೆ ನಾಳೆಯೇ ಈ ಬೆಲೆ ಮತ್ತೆ ಏರಿಕೆಯಾಗಬಹುದಲ್ಲವೇ ಎಂದು ಶಿವಸೇನೆ ಪ್ರಶ್ನಿಸಿದೆ.

English summary
The Centre slashed the fuel rates so that the BJP does not suffer on the issue of price rise in the five poll-bound states, alleges Shiv Sena
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X