ಕಾರ್ಮಿಕ ನಾಯಕ, ತಲಪಾಡಿ-ಕಣ್ಣೂರಿನ ಶರದ್ ರಾವ್ ನಿಧನ
ಮುಂಬೈ, ಸೆಪ್ಟೆಂಬರ್ 2: ಕಾರ್ಮಿಕ ನಾಯಕ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ-ಕಣ್ಣೂರಿನ ಶರದ್ ರಾವ್ (76) ಸೆಪ್ಟೆಂಬರ್ 1ರಂದು ನಿಧನ ಹೊಂದಿದರು. ಮುಂಬೈನ ಬಿಇಎಸ್ ಟಿ, ಟ್ಯಾಕ್ಸಿ, ಆಟೋ ಸೇರಿದಂತೆ ಅನೇಕ ಕಾರ್ಮಿಕ ಯೂನಿಯನ್ ಗಳ ನಾಯಕರಾಗಿದ್ದರು.
1957ರಿಂದ 1967ರ ತನಕ ಹಿಂದೂಸ್ತಾನ್ ಲಿವರ್ ಲಿಮಿಟೆಡ್ ನಲ್ಲಿ ಯೂನಿಯನ್, ನಂತರ ಟ್ರೇಡ್ ಯೂನಿಯನ್ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. 1970ರಲ್ಲಿ ಬಾಂಬೆ ಗುಮಾಸ್ತ ಯೂನಿಯನ್, ಸೇವ್ ಅಕ್ಟ್ರಾಯ್ ಚಳವಳಿಯ ಮುಂಚೂಣಿಯಲ್ಲಿದ್ದರು. ಹತ್ತು-ಹಲವು ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.[ಮುಂಬೈ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ]

ಎರಡು ಸಲ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗಾಗಿ ಶರದ್ ರಾವ್ ಸ್ಪರ್ಧಿಸಿದ್ದರು. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.












Click it and Unblock the Notifications