ಶರದ್ ಪವಾರ್ ಭದ್ರತೆ ವಾಪಸ್ ಪಡೆದ ಕೇಂದ್ರ ಸರ್ಕಾರ

ಮುಂಬೈ, ಜನವರಿ 24 : ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿ ನಿವಾಸಕ್ಕೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಕೇಂದ್ರದ ನಡೆ ರಾಜಕೀಯ ಆರೋಪ ಪ್ರತ್ಯಾರೋಗಳಿಗೆ ಕಾರಣವಾಗಿದ್ದು, ಎನ್‌ಪಿಬಿ ಬಿಜೆಪಿ ವಿರುದ್ಧ ರಾಜಕೀಯ ದ್ವೇಷದ ಆರೋಪ ಮಾಡಿದೆ.

ಎನ್‌ಸಿಪಿ ವಕ್ತಾರ ನವಾಬ್ ಮಲ್ಲಿಕ್ ಈ ಕುರಿತು ಹೇಳಿಕೆ ನೀಡಿದ್ದು, "ಕೇಂದ್ರ ಸರ್ಕಾರದ ನಡೆಯಿಂದ ಎನ್‌ಸಿಪಿ ಆತಂಕಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧದ ನಮ್ಮ ಹೋರಾಟ ನಿಲ್ಲಿಸುವುದಿಲ್ಲ" ಎಂದು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಶರದ್ ಪವಾರ್‌ಗೆ 'ವೈ' ಶ್ರೇಣಿಯ ಭದ್ರತೆಯನ್ನು ನೀಡಲಾಗಿತ್ತು. 6ನೇ ಜನಪಥ್‌ನಲ್ಲಿನ ನಿವಾಸಕ್ಕೆ ನೀಡಲಾದ ಭದ್ರತೆಯನ್ನು ಜನವರಿ 20ರಿಂದ ಯಾವುದೇ ಸೂಚನೆ ನೀಡದೆ ವಾಪಸ್ ಪಡೆಯಲಾಗಿದೆ.

Sharad Pawar Security Cover Withdrawn NCP Upset With BJP

ಕೇಂದ್ರ ಸರ್ಕಾರದ ನಡೆ ರಾಜಕೀಯ ದ್ವೇಷದಿಂದ ಕೂಡಿದೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿ, ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಎನ್‌ಸಿಪಿ ಕಿಡಿಕಾರಿದೆ.

79 ವರ್ಷದ ಶರದ್ ಪವಾರ್‌ಗೆ ಮಹಾರಾಷ್ಟ್ರದಲ್ಲಿ 'ಝೆಡ್ ಪ್ಲಸ್' ಭದ್ರತೆ ಇದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ. ಆದ್ದರಿಂದ, ಹೆಚ್ಚಿ ಭದ್ರತೆ ಇದೆ. ದೆಹಲಿಯ ಅವರ ನಿವಾಸಕ್ಕೆ 'ವೈ' ಶ್ರೇಣಿ ಭದ್ರತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+