ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು

|
Google Oneindia Kannada News

ಮುಂಬೈ, ಜನವರಿ 25: ಲೈಂಗಿಕ ದೌರ್ಜನ್ಯದ ಕುರಿತು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ತೀರ್ಪು ಭಾರಿ ವಿವಾದ ಸೃಷ್ಟಿಸಿದೆ. ಚರ್ಮದಿಂದ ಚರ್ಮಕ್ಕೆ ನೇರ ದೈಹಿಕ ಸಂಪರ್ಕವಿಲ್ಲದ ಕ್ರಿಯೆಯು ಪೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಂದಾಗುವುದಿಲ್ಲ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕವಾಗದೆ, ಮಗುವಿನ ಎದೆಯನ್ನು ಆಕೆಯ ಉಡುಪಿನ ಮೇಲಿನಿಂದ ಒತ್ತಿರುವುದು ಲೈಂಗಿಕ ಅಪರಾಧವಾಗುವುದಿಲ್ಲ ಎಂದು ತೀರ್ಪು ನೀಡುವ ಮೂಲಕ ವ್ಯಕ್ತಿಯೊಬ್ಬನನ್ನು ಆರೋಪದಿಂದ ಖುಲಾಸೆಗೊಳಿಸಿದೆ.

ಸತೀಶ್ ಬಂಡು ರಗ್ಡೆ ಎಂಬ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಸೆಕ್ಷನ್ 8ರ ಅಡಿ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ವಿ. ಗಣೇಡಿವಾಲಾ ಜ. 19ರಂದು ವಜಾಗೊಳಿಸಿದ್ದಾರೆ.

ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್

ಪೋಕ್ಸೋ ಕಾಯ್ದೆಯ ಸೆಕ್ಷನ್ 8ರ ನಿಯಮವು ಲೈಂಗಿಕ ದೌರ್ಜನ್ಯ ಅಪರಾಧಗಳಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆಯನ್ನು ನೀಡುತ್ತದೆ. ಹಾಗಾಗಿ ಇದಕ್ಕೆ ಅಷ್ಟೇ ಪ್ರಬಲವಾದ ಸಾಕ್ಷ್ಯ ಹಾಗೂ ಗಂಭೀರ ಆರೋಪಗಳು ಅಗತ್ಯವಾಗುತ್ತದೆ ಎಂದು ಹೈಕೋರ್ಟ್ ಪೀಠ ಹೇಳಿದೆ. ಮುಂದೆ ಓದಿ.

ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕ

ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕ

'ಮಹಿಳೆಯ ಎದೆಯನ್ನು ಒತ್ತುವುದು ಆಕೆಯ ವಿನಮ್ರತೆಗೆ ಧಕ್ಕೆ ತರುವ ಉದ್ದೇಶದ ಬಲವಂತದ ಅಪರಾಧವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಬಲವಂತವಿಲ್ಲದೆ ಲೈಂಗಿಕ ಬಯಕೆಯಿಂದ ದೈಹಿಕವಾದ ಚರ್ಮದಿಂದ ಚರ್ಮದ ನೇರ ಸಂಪರ್ಕವಿಲ್ಲ' ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಸೀಬೆ ಹಣ್ಣು ನೀಡುವ ನೆಪ

ಸೀಬೆ ಹಣ್ಣು ನೀಡುವ ನೆಪ

ಮುಂಬೈ ಮೂಲದ ಆರೋಪಿ ಸತೀಶ್ ರಗ್ಡೆ 2016ರಲ್ಲಿ 12 ವರ್ಷದ ಬಾಲಕಿಗೆ ಸೀಬೆ ಹಣ್ಣು ನೀಡುವ ನೆಪದಲ್ಲಿ ಮನೆಗೆ ಕರೆದೊಯ್ದು ಆಕೆಯ ಎದೆಯನ್ನು ಒತ್ತುವುದು ಮತ್ತು ಸಲ್ವಾರ್ ಕಳಚುವ ಪ್ರಯತ್ನ ಮಾಡುತ್ತಿದ್ದ. ಇದೇ ಸಮಯಕ್ಕೆ ಅಲ್ಲಿಗೆ ಧಾವಿಸಿದ್ದ ಬಾಲಕಿಯ ತಾಯಿ ಮಗಳನ್ನು ಗಮನಿಸಿದ್ದರು. ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಐವರು ಸಾಕ್ಷಿಗಳು ಮತ್ತು ಪೊಲೀಸರ ಹೇಳಿಕೆ ಪರಿಗಣಿಸಿ ಕೆಳ ನ್ಯಾಯಾಲಯವು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿತ್ತು.

15 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಜಾತಕ15 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಜಾತಕ

ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ!

ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ!

ಆದರೆ, ಇದನ್ನು ಆತ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354ರ ಅಡಿ ಲೈಂಗಿಕ ದೌರ್ಜನ್ಯದ ಶಿಕ್ಷೆ ಎಂದು ಪರಿಗಣಿಸಲು, ಲೈಂಗಿಕ ಉದ್ದೇಶದೊಂದಿಗೆ ಕೃತ್ಯ ಎಸಗಿರಬೇಕು. ಇದರಲ್ಲಿ ಪರಸ್ಪರ ಗುಪ್ತಾಂಗಗಳ ಸ್ಪರ್ಶ, ಮಗುವಿನ ಎದೆ ಸ್ಪರ್ಶದಂತಹ ಬಲತ್ಕಾರದ ಚಟುವಟಿಕೆಗಳು ನಡೆದಿರಬೇಕು. ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದ ಪ್ರಕಾರ ಲೈಂಗಿಕ ಬಯಕೆ ಉದ್ದೇಶದೊಂದಿಗೆ ನಡೆಸುವ ದೈಹಿಕ ಸಂಪರ್ಕ ಇರಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಸೆಷನ್ಸ್ ನ್ಯಾಯಾಧೀಶರು ವಿಧಿಸಿದ್ದ ಶಿಕ್ಷೆ

ಸೆಷನ್ಸ್ ನ್ಯಾಯಾಧೀಶರು ವಿಧಿಸಿದ್ದ ಶಿಕ್ಷೆ

39 ವರ್ಷದ ಆರೋಪಿಗೆ ಹೆಚ್ಚುವರಿ ಜಂಟಿ ಸೆಷನ್ಸ್ ನ್ಯಾಯಾಧೀಶರು, 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಪೋಕ್ಸೊ ಕಾಯ್ದೆ, ಐಪಿಸಿ ಸೆಕ್ಷನ್ 354 (ಮಹಿಳೆಯ ವಿನಮ್ರತೆಗೆ ಧಕ್ಕೆ ತರುವ ಉದ್ದೇಶದ ಬಲವಂತದ ಅಪರಾಧ ಅಥವಾ ದೌರ್ಜನ್ಯ) 363 (ಅಪಹರಣಕ್ಕಾಗಿ ಶಿಕ್ಷೆ) ಮತ್ತು 342ರ (ತಪ್ಪು ಬಂಧನಕ್ಕಾಗಿ ಶಿಕ್ಷೆ) ಅಡಿ ಕಠಿಣ ಶಿಕ್ಷೆ ವಿಧಿಸಿದ್ದರು. ಆದರೆ ಅದನ್ನು ವಜಾಗೊಳಿಸಿದ ಹೈಕೋರ್ಟ್, ಪೋಕ್ಸೊ ಕಾಯ್ದೆಯ ಕಠಿಣ ನಿಯಮವನ್ನು ಪರಿಗಣಿಸದೆ ಸಾಧಾರಣ ಶಿಕ್ಷೆ ವಿಧಿಸಿದೆ.

English summary
In a controversial order, Bombay High Court said, without direct skin to skin physical contact does not constitute sexual assault under the POCSO act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X