ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಪ್ರಕರಣ; ರಮ್ಮಿ ಆಡುತ್ತಿದ್ದವರಿಗೆ ಜೈಲು ಶಿಕ್ಷೆ!

|
Google Oneindia Kannada News

ಮುಂಬೈ, ಜೂನ್ 6: ಐಷಾರಾಮಿ ಹೋಟೆಲ್‌ನಲ್ಲಿ ರಮ್ಮಿಆಡಿದ ಕಾರಣಕ್ಕೆ ಮುಂಬೈ ನಗರದ ಒಂಬತ್ತು ಉದ್ಯಮಿಗಳಿಗೆ ಮೆಟ್ರೋಪಾಲಿಟನ್ ಕೋರ್ಟ್‌ ಮಹಾರಾಷ್ಟ್ರ ಜೂಜು ತಡೆ ಕಾಯ್ದೆಯಡಿ 6 ತಿಂಗಳು ಜೈಲುವಾಸ ವಿಧಿಸಿ ಆದೇಶ ನೀಡಿದೆ.

2011ರಲ್ಲಿ ತಾಜ್ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಹಣಕ್ಕಾಗಿ ರಮ್ಮಿ ಆಡುತ್ತಿದ್ದ ಉದ್ಯಮಿಗಳನ್ನು ಬಂಧಿಸಲಾಗಿತ್ತು. ಪೊಲೀಸರ ದಾಳಿ ವೇಳೆ ಆರೋಪಿಗಳು ಪಣಕ್ಕಿಟ್ಟಿದ್ದ 3.25 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು, ಇದೇ ಪ್ರಕರಣದ ವಿಚಾರಣೆ ಮುಕ್ತಾಯವಾಗಿದ್ದು, ಅಪರೂಪ ಎಂಬಂತೆ ಕೋರ್ಟ್ ಶಿಕ್ಷೆ ವಿಧಿಸಿದೆ.

ಡ್ರೀಮ್ 11 ಸಹಸ್ಥಾಪಕರ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್ ಡ್ರೀಮ್ 11 ಸಹಸ್ಥಾಪಕರ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎ. ವಿ. ಕುಲಕರ್ಣಿ ಆರೋಪಿಗಳನ್ನು ಉತ್ತಮ ನಡವಳಿಕೆಯ ಆಧಾರದ ಮೇಲೆ ಬಿಡಲು ನಿರಾಕರಿಸಿದರು, ಆರೋಪಿಗಳಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದರು.

Sentenced to Six Months Imprisonment For Playing Rummy In Hotel

ಖಚಿತ ಮಾಹಿತಿ ಮೇರೆಗೆ ಎಸಿಪಿ ವಸಂತ್ ಧೋಬ್ಲೆ ಜೂಜು ನಡೆಯುತ್ತಿದ್ದ ಕೊಠಡಿ ಮೇಲೆ ದಾಳಿ ನಡೆಸಿದ್ದರು. ನಗರದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುವ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಕಾರ್ಯಾಚರಣೆಗಾಗಿ ವಸಂತ್ ಧೋಬಾಲೆ ಜನಪ್ರಿಯರಾಗಿದ್ದರು ನಡೆಸುತ್ತಿದ್ದಾರೆ. 2015 ರಲ್ಲಿ ಅವರು ನಿವೃತ್ತರಾಗಿದ್ದಾರೆ.

ಆನ್‌ಲೈನ್ ಗೇಮ್ಸ್ , ಬೆಟ್ಟಿಂಗ್ ನಿಷೇಧ ರದ್ದು: ಸುಪ್ರೀಂ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ ಆನ್‌ಲೈನ್ ಗೇಮ್ಸ್ , ಬೆಟ್ಟಿಂಗ್ ನಿಷೇಧ ರದ್ದು: ಸುಪ್ರೀಂ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ

ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಆರೋಪಿಗಳಾದ ಅಶ್ವಿನ್ ಬನ್ಸಾಲಿ ಮತ್ತು ಸಂದೀಪ್ ಚಲ್ಕೆ 2011 ಆಗಸ್ಟ್ 27 ರಂದು ಹೋಟೆಲ್‌ನ ಆರನೇ ಮಹಡಿಯ ಕೋಣೆಯಲ್ಲಿ ತಂಗಿದ್ದರು, ಹೋಟೆಲ್‌ನ ಈ ಕೋಣೆಯನ್ನು "ಕಾಮನ್ ಗೇಮಿಂಗ್ ಹೌಸ್‌" ಆಗಿ ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈಗ ತಪ್ಪಿತಸ್ಥರೆಂದು ಸಾಬೀತಾಗಿರುವ ಏಳು ಮಂದಿ ಜೂಜು ನಡೆಯುವ ವೇಳೆ ಅಲ್ಲಿದ್ದರು ಎಂದು ಆರೋಪಿಸಲಾಗಿದೆ.

6 ತಿಂಗಳು ಜೈಲು, 2000 ರೂಪಾಯಿ ದಂಡ; "ಕೆಲವೇ ಕೆಲವು ವಿಷಯಗಳು ಪ್ರಾಸಿಕ್ಯೂಷನ್ ಪರವಾಗಿ ತೀರ್ಮಾನವನ್ನು ತಲುಪುತ್ತವೆ ಎಂಬುದು ಸತ್ಯ. ಆರೋಪಿಗಳು ಜೂಜಾಟದ ಉದ್ದೇಶದಿಂದ ಪಂಚತಾರಾ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. 2011ರಲ್ಲಿ ಆರೋಪಿಗಳಿಂದ ಭಾರೀ ಮೊತ್ತ ವಸೂಲಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ 6 ತಿಂಗಳ ಜೈಲು ಶಿಕ್ಷೆ ಜತೆಗೆ 2000 ರೂಪಾಯಿ ದಂಡ ವಿಧಿಸಿದರೆ ಸಾಕು ಎಂಬ ಅಭಿಪ್ರಾಯ ನನ್ನದು," ಎಂದು ಮ್ಯಾಜಿಸ್ಟ್ರೇಟ್ ಹೇಳಿದರು.

Sentenced to Six Months Imprisonment For Playing Rummy In Hotel

ಆರೋಪಿಗಳ ಪರ ವಕೀಲರು, ಪೊಲೀಸರು ಕೇವಲ ಆರೋಪಪಟ್ಟಿ ಸಲ್ಲಿಸಿದ್ದಾರೆ ಮತ್ತು ಹೋಟೆಲ್ ವ್ಯವಸ್ಥಾಪಕರ ಹೇಳಿಕೆಯನ್ನು ದಾಖಲಿಸಿಲ್ಲ ಎಂದು ಹೇಳಿದರು. ಯಾವುದೇ ಸ್ವತಂತ್ರ ಸಾಕ್ಷಿಗಳು ಇರಲಿಲ್ಲ ಎಂದು ಪ್ರತಿವಾದ ಹೇಳಿದೆ.

ದಾಳಿಯ ಉಸ್ತುವಾರಿ ವಹಿಸಿದ್ದ ಎಸಿಪಿ ಕಿಶೋರ್ ನಾಥು ಘಾರ್ಟೆ ಅವರನ್ನು ಪ್ರಮುಖ ಸಾಕ್ಷಿ ಎಂದು ನ್ಯಾಯಾಲಯ ಪರಿಗಣಿಸಿದೆ. ಈ ವೇಳೆ ಕಿಶೋರ್ ಜೊತೆ ಎಸಿಪಿ ದೋಬ್ಲೆ ಕೂಡ ಹಾಜರಿದ್ದರು.

Recommended Video

ಪಾಕಿಸ್ತಾನದ ದಿಗ್ಗಜ ಫಾಸ್ಟ್ ಬೌಲರ್ ದಾಖಲೆ ಮೇಲೆ ಕಣ್ಣಿಟ್ಟ Umran Malik | #Cricket | Oneindia Kannada

"ದಾಳಿ ಮಾಡುವ ತಂಡದಲ್ಲಿ ಮೂವರು ಎಸಿಪಿ ಅಧಿಕಾರಿಗಳು ಇದ್ದರು. ನಿಜವಾದ ಜೂಜಾಟವನ್ನು ದೃಢಪಡಿಸಲು ವ್ಯವಸ್ಥಿತವಾಗಿ ದಾಳಿ ಮಾಡಲಾಗಿದೆ. ಪ್ರಾಸಿಕ್ಯೂಷನ್ ಕೂಡ ಅಲ್ಲು ಜೂಜಾಟ ನಡೆದಿದೆ ಎಂಬುದನ್ನು ಸಾಬೀತು ಮಾಡಿದೆ," ಎಂದು ನ್ಯಾಯಾಲಯ ಹೇಳಿದೆ.

English summary
The Mumbai's nine businessmen have been sentenced to six months' imprisonment under the Maharashtra Gambling Act for allegedly riding in a luxury hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X