ಎಲ್ಲಿ ಶೂಟ್ ಮಾಡ್ತೀರ ಹೇಳಿ ಅಲ್ಲಿಗೆ ಬರ್ತೀನಿ: ಅಸಾದುದ್ದೀನ್ ಓವೈಸಿ
ಮುಂಬೈ, ಜನವರಿ 29: 'ಎಲ್ಲಿ ಶೂಟ್ ಮಾಡುತ್ತೀರ ಎಂದು ಹೇಳಿ, ಅಲ್ಲಿಗೆ ಬರುತ್ತೇನೆ' ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಹ್ವಾನ ನೀಡಿದ್ದಾರೆ.
ಕೇಂದ್ರ ಸಚಿವ ದೆಹಲಿಯಲ್ಲಿ ದೇಶದ್ರೋಹಿಗಳನ್ನು ಶೂಟ್ ಮಾಡಬೇಕು ಎಂದು ಹೇಳಿದ್ದರು, ಅದಕ್ಕೆ ಪ್ರತಿಕ್ರಿಯೆ ನೀಡಿರುವ ಓವೈಸಿ ನಾನು ತಯಾರಿದ್ದೇನೆ, ಎಲ್ಲಿ ಶೂಟ್ ಮಾಡುತ್ತೀರ ಎಂದು ಹೇಳಿ, ಅಲ್ಲಿಗೆ ಬರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಅವರು ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ್ದರು. ನಿಮ್ಮ ಹೇಳಿಕೆಯಿಂದ ನಮಗೇನು ಭಯವಿಲ್ಲ, ನಮ್ಮ ತಾಯಿ, ಅಕ್ಕ ತಂಗಿಯರು ಪ್ರತಿಭಟನೆಗೆಂದು ಬೀದಿಗಿಳಿದಿದ್ದಾರೆ, ತಮ್ಮ ದೇಶವನ್ನು ಕಾಪಾಡಿಕೊಳ್ಳಬೇಕು ಎಂದು ದೃಢ ನಿರ್ಧಾರ ಮಾಡಿದ್ದಾರೆ.

ಭಾರತೀಯ ಚುನಾವಣಾ ಆಯೋಗವು ಅನುರಾಗ್ ಠಾಕೂರ್ ಅವರ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಜನವರಿ 30ರೊಳಗೆ ಉತ್ತರ ನೀಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications