ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಟ್ ಅಂಡ್ ರನ್ ಕೇಸ್ : ಸಲ್ಮಾನ್ 10 ವರ್ಷ ಜೈಲು ಶಿಕ್ಷೆ ಭೀತಿ

By Mahesh
|
Google Oneindia Kannada News

ಮುಂಬೈ, ಏ.21: ಸಲ್ಮಾನ್ ಖಾನ್ ಆರೋಪಿಯಾಗಿರುವ ಹಿಟ್ ಅಂಡ್ ರನ್ ಪ್ರಕರಣದ ಅಂತಿಮ ತೀರ್ಪು ನೀಡುವ ದಿನ ನಿಗದಿಯಾಗಿದೆ. ಅನೇಕ ಬಾರಿ ತಿರುವು ಪಡೆದ ಈ ಪ್ರಕರಣ ವಿಚಾರಣೆ ಮುಕ್ತಾಯವಾಗಿದೆ. ಮೇ. 6ರಂದು ಸಲ್ಮಾನ್ ಖಾನ್ ಗೆ ಜೈಲಾ? ಖುಲಾಸೆಯಾಗುತ್ತದೆಯೆ? ಎಂಬುದು ತಿಳಿದು ಬರಲಿದೆ.

ಸುಮಾರು 13 ವರ್ಷಗಳ ನಂತರ ಸಲ್ಮಾನ್ ಖಾನ್ ಆರೋಪಿಯಾಗಿರುವ ಹಿಟ್ ಅಂಡ್ ರನ್ ಕೇಸಿನ ಅಂತಿಮ ತೀರ್ಪು ನೀಡುವ ದಿನವನ್ನು ಏ.21ರಂದು ನಿರ್ಧರಿಸಿದೆ. ಪ್ರಮುಖ ಆರೋಪಿಯಾಗಿರುವ ಸಲ್ಮಾನ್ ಅವರು 10 ವರ್ಷ ಜೈಲು ಶಿಕ್ಷೆ ಭೀತಿ ಎದುರಿಸುತ್ತಿದ್ದಾರೆ. [ಸಲ್ಲೂ ಪರ ಸಾಕ್ಷಿ ಹೇಳಿದ ಡ್ರೈವರ್]

Hit-and-Run case: Salman Khan tense, verdict date finalised; actor faces 10 year jail

ಸಲ್ಮಾನ್ ಖಾನ್ ಅವರ ಕಾರು ಚಾಲಕ ಅಶೋಕ್ ಸಿಂಗ್ ಸೇರಿದಂತೆ ಸುಮಾರು 27 ಜನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿತ್ತು. ಏ.20ಕ್ಕೆ ಎರಡು ಕಡೆ ವಾದ ಪ್ರತಿವಾದವನ್ನು ಆಲಿಸಿದ ಜಡ್ಜ್ ಡಿಡಬ್ಲ್ಯೂ ದೇಶಪಾಂಡೆ ಅವರು ಮೇ.6ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಹೇಳಿದರು. [ಸಲ್ಲೂ ಕೃಷ್ಣ ಮೃಗ ಬೇಟೆ ಕೇಸ್ ಅಪ್ಡೇಟ್ಸ್]

ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಫುಟ್ ಪಾತ್ ನಲ್ಲಿದ್ದ ಒಬ್ಬ ವ್ಯಕ್ತಿ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರ ಗಾಯಗೊಂಡಿದ್ದರು.

English summary
A Mumbai court on Tuesday, April 21 said that the final verdict of the infamous hit-and-run case involving Salman Khan will be announced on May 6. The actor may go to jail for 10 years if the court convicts him in the case. The Bollywood actor has been accused of killing one person and injured three others in 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X