ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುದ್ದೋಡು ಪ್ರಕರಣದಲ್ಲಿ ಟ್ವಿಸ್ಟ್: ಸಲ್ಲೂ ಪರ ಸಾಕ್ಷಿ ಹೇಳಿದ ಡ್ರೈವರ್

By Mahesh
|
Google Oneindia Kannada News

ಮುಂಬೈ, ಮಾ.30: ನಟ ಸಲ್ಮಾನ್ ಖಾನ್ ಆರೋಪಿಯಾಗಿರುವ 2002ರ ಹಿಟ್ ಅಂಡ ರನ್ ಪ್ರಕರಣ ಮತ್ತೊಮ್ಮೆ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಹೇಳಿಕೆ ದಾಖಲಿಸಿದ್ದು, ಸೋಮವಾರ ಸಲ್ಮಾನ್ ಖಾನ್ ಅವರ ಕಾರು ಚಾಲಕ ನೀಡಿದ ಹೇಳಿಕೆ ಸಲ್ಮಾನ್ ಖಾನ್ ಗೆ ವರವಾಗಿ ಪರಿಣಮಿಸುವ ಸಾಧ್ಯತೆ ಕಂಡು ಬಂದಿದೆ.

ಸಲ್ಮಾನ್ ಖಾನ್ ಅವರ ಕಾರು ಚಾಲಕ ಅಶೋಕ್ ಸಿಂಗ್ ನೀಡಿದ ಹೇಳಿಕೆ ಪ್ರಕಾರ ಘಟನೆ ನಡೆದ ದಿನ 2002ರ ಸೆಪ್ಟೆಂಬರ್ 28ರಂದು ಸಲ್ಮಾನ್ ಖಾನ್ ಅವರು ಕಾರು ಚಲಾಯಿಸುತ್ತಿರಲಿಲ್ಲ ಎಂದಿದ್ದಾರೆ. ಮಾ.27ರಂದು 49ವರ್ಷ ವಯಸ್ಸಿನ ಸಲ್ಮಾನ್ ಖಾನ್ ಅವರು ಕೋರ್ಟಿಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. [ಸಲ್ಲೂ ಕೃಷ್ಣ ಮೃಗ ಬೇಟೆ ಕೇಸ್ ಅಪ್ಡೇಟ್ಸ್]

Twist in Hit-and-run Case: Salman Khan's driver says he was driving the car

ಅಪಘಾತ ನಡೆದ ಸಂದರ್ಭದಲ್ಲಿ ತಮ್ಮ ಕಾರಿನ ಚಾಲಕ ಅಶೋಕ್ ಅವರು ವಾಹನ ಚಲಾಯಿಸುತ್ತಿದ್ದರು. ನಾನು ಕಾರು ಚಲಾಯಿಸುತ್ತಿರಲಿಲ್ಲ ಎಂದು ಸಲ್ಮಾನ್ ಹೇಳಿಕೆ ನೀಡಿದ್ದರು. ಜೊತೆಗೆ ಅಪಘಾತವಾದ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸಿದ ಆರೋಪವನ್ನು ತಳ್ಳಿ ಹಾಕಿದರು. ನಾನು ಅಂದು ಮದ್ಯಪಾನ ಮಾಡಿರಲಿಲ್ಲ ಎಂದು ಕೋರ್ಟಿನ ಮುಂದೆ ಹೇಳಿದರು. ಇಲ್ಲಿ ತನಕ ನನ್ನ ವಿರುದ್ಧ ಸಲ್ಲಿಸಿರುವ ಸಾಕ್ಷಿಗಳೆಲ್ಲ ಸುಳ್ಳು ಎಂದು ಸಲ್ಲೂ ಸ್ಪಷ್ಟಪಡಿಸಿದ್ದರು.

ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಫುಟ್ ಪಾತ್ ನಲ್ಲಿದ್ದ ಒಬ್ಬ ವ್ಯಕ್ತಿ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರ ಗಾಯಗೊಂಡಿದ್ದರು.[ಖಾನ್ ಗಳ ಚಿತ್ರಗಳನ್ನು ನಿಷೇಧಿಸಿ: ಸಾಧ್ವಿ ಪ್ರಾಚಿ ಕರೆ]

2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಕಾರು ಚಾಲನೆ ಮಾಡಿದ ವೇಳೆ ಸಲ್ಮಾನ್ ಅವರು ಕುಡಿದಿರಲಿಲ್ಲ. ಘಟನೆ ನಂತರ ನಾನು ಅವರನ್ನು ಭೇಟಿ ಮಾಡಿದ್ದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಪ್ರಕರಣಕ್ಕೆ ತಿರುವು ಸಿಕ್ಕಿತ್ತು.

ಆದರೆ, ಘಟನೆ ನಡೆದ ದಿನ ಸಲ್ಮಾನ್ ಖಾನ್ ಅವರ ದೇಹದ ರಕ್ತದಲ್ಲಿ ಮದ್ಯದ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿತ್ತು ಎಂದು ತಿಳಿದು ಬಂದಿದೆ. ತಜ್ಞರ ಹೇಳಿಕೆ ಪ್ರಕಾರ ರಕ್ತದಲ್ಲಿ ಆಲ್ಕೋಹಾಲ್ ಅಂಶ 30 ಮಿಲಿ ಗ್ರಾಮ್ ನಷ್ಟಿರಬಹುದು. ಸಲ್ಮಾನ್ ಅವರ ರಕ್ತದಲ್ಲಿ 62 ಮಿಲಿಗ್ರಾಂನಷ್ಟಿದೆ. ಹೀಗಾಗಿ ಸಲ್ಮಾನ್ ಖಾನ್ ಅವರು ಘಟನೆ ನಡೆದ ವೇಳೆ ಕಾರಿನಲ್ಲಿದ್ದರು ಹಾಗೂ ವಾಹನ ಚಲಾಯಿಸುವಾಗ ಕುಡಿದಿದ್ದರು ಎಂದು ಸಲ್ಮಾನ್ ವಿರುದ್ಧ ದಾಖಲೆ ಸಲ್ಲಿಸಲಾಗಿತ್ತು.

ಆದರೆ, ಈಗ ಸ್ವತಃ ಸಲ್ಮಾನ್ ಅವರು ಮೊದಲ ಬಾರಿಗೆ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಅವರ ಕಾರಿನ ಚಾಲಕ ನೀಡಿರುವ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕಾರು ಚಾಲಕ ಅಶೋಕ್ ಸಿಂಗ್ ನೀಡಿದ ಹೇಳಿಕೆ:

English summary
A new twist might bring good news for Salman Khan. While recording statement in a court in Mumbai, driver of the Bollywood actor, claimed that he was driving the car on Sept 28, 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X