ಖಾನ್ ಗಳ ಚಿತ್ರಗಳನ್ನು ನಿಷೇಧಿಸಿ: ಸಾಧ್ವಿ ಪ್ರಾಚಿ ಕರೆ
ಡೆಹ್ರಾಡೂನ್, ಮಾ.2: ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸಾಧ್ವಿ ಪ್ರಾಚಿ ಅವರು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಬಾಲಿವುಡ್ ನ ಖಾನ್ ತ್ರಯರು 'ಲವ್ ಜಿಹಾದ್' ಹಬ್ಬಿಸುತ್ತಿದ್ದಾರೆ ಅವರ ಚಿತ್ರಗಳನ್ನು ನಿಷೇಧಿಸಿ ಎಂದು ಸಾಧ್ವಿ ಕರೆ ನೀಡಿದ್ದರು.
ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಅವರು ತಮ್ಮ ಚಿತ್ರಗಳ ಮೂಲಕ 'ಲವ್ ಜಿಹಾದ್' ಹರಡುತ್ತಿದ್ದಾರೆ. ಭಾರತದ ಯುವ ಜನತೆ ಹಾಳಾಗಲು ಇವರ ಚಿತ್ರಗಳೇ ಕಾರಣವಾಗಿದೆ. ['ಲವ್ ಜಿಹಾದ್' ವಿವಾದದಲ್ಲಿ ಯೋಗಿ ಆದಿತ್ಯಾನಾಥ್]
ಭಾನುವಾರ ಇಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಮ್ಮೇಳನದಲ್ಲಿ ಮಾತನಾಡುತ್ತಾ, ಈ ಖಾನ್ ಗಳ ಚಿತ್ರಗಳ ಪೋಸ್ಟರ್ ಗಳನ್ನು ಗೋಡೆ ಮೇಲೆ ಬಿಡಬೇಡಿ ಎಂದು ಕರೆ ನೀಡಿದ್ದರು.

ಈ ಹಿಂದೆ ಯೋಗಿ ಆದಿತ್ಯಾನಾಥ್ ಅವರು ಕೂಡಾ ಲವ್ ಜಿಹಾದ್ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಯೋಗಿ ಆದಿತ್ಯಾನಾಥ್ ವಿಡಿಯೋವೊಂದರಲ್ಲಿ ಮಾತನಾಡುತ್ತಾ 'ಅವರು ಒಬ್ಬ ಹಿಂದು ಹುಡುಗಿಯನ್ನು ತೆಗೆದುಕೊಂಡರೆ, ನಾವು 100 ಹುಡುಗಿಯನ್ನು ತೆಗೆದುಕೊಳ್ಳುತ್ತೇವೆ" ಎಂದಿದ್ದರು.[ವಿವಾದಾತ್ಮಕ 'ಲವ್ ಜಿಹಾದ್'? ಎಂದರೇನು]
ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಧ್ಯಮಗಳು ದನಿ ಎತ್ತುತ್ತಿಲ್ಲ ಏಕೆ, ರಾಷ್ಟ್ರೀಯ ಕ್ರೀಡಾಪಟುವೊಬ್ಬರ ಲವ್ ಜಿಹಾದ್ ಪ್ರಕರಣ ನಮ್ಮ ಕಣ್ಮುಂದೆ ಇದೆ. ಸರಿಯಾದ ನ್ಯಾಯ ಸಿಗಬೇಕಿದೆ ಎಂದು ಹೇಳಿದ್ದು ವಿವಾದ ಎಬ್ಬಿಸಿತ್ತು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹಿಂದೂ ಯುವತಿಯನ್ನು ಮದುವೆಯಾಗುವುದು ಒಳ್ಳೆಯದು. ಕುಟುಂಬ ಯೋಜನೆ ಬಗ್ಗೆ ಸಾಕ್ಷಿ ಮಹಾರಾಜ್ ಹೇಳಿಕೆಗೆ ನನ್ನ ಬೆಂಬಲವಿದೆ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ.
ಇದಕ್ಕೂ ಮುನ್ನ ಜ.11 ರಂದು ಸಾಧ್ವಿ ಪ್ರಾಚಿ ಅವರು, ಸಿಂಹ ಕೇವಲ ಒಂದು ಮಗುವನ್ನು ಹೊಂದಿರುವುದಿಲ್ಲ. ನಾಲ್ಕಾರು ಮಕ್ಕಳಿದ್ದರೆ ಚೆನ್ನ. ಗಡಿಯಲ್ಲಿ ಯುದ್ಧ ಮಾಡಲು, ಸಂತರಾಗಲು, ವಿಶ್ವ ಹಿಂದೂ ಪರಿಷತ್ ಸೇರಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಲು ತಲಾ ಒಬ್ಬ ಮಗುವನ್ನು ಹಿಂದೂಗಳು ಹೆರಬೇಕಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಲವ್ ಜಿಹಾದ್ ಗೊತ್ತಿಲ್ಲದವರು ಅವರೆಂಥ ಗೃಹ ಸಚಿವರು?]
2012ರಲ್ಲಿ ಉತ್ತರಪ್ರದೇಶದ ಪುರ್ಕಾಜಿ ಅಸೆಂಬ್ಲಿಗೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಪ್ರಾಚಿ ಅವರ ಮೇಲೆ ಮುಜಾಫರ್ ನಗರ ಗಲಭೆ ಪ್ರಕರಣದ ಆರೋಪ ಕೇಳಿ ಬಂದಿತ್ತು. ಆದರೆ, ನಂತರ ಜಾಮೀನು ಪಡೆದುಕೊಂಡಿದ್ದರು. ಬಲವಂತದ ಮತಾಂತರ ನಿಷೇಧಿಸುವಂತೆ ಆಗ್ರಹಿಸುತ್ತಿರುವ ಸಾಧ್ವಿ ಅವರು ಘರ್ ವಾಪಸಿ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications