ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ವಿದರ್ಭದಲ್ಲಿ 57 ಕೋಟಿ ರೂ. ಸಂಗ್ರಹ
ನಾಗ್ಪುರ, ಮಾರ್ಚ್ 25: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಮಹಾರಾಷ್ಟ್ರದ ವಿದರ್ಭದಲ್ಲಿ 57 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ದೇಣಿಗೆ ಅಭಿಯಾನದಲ್ಲಿ, 7,512 ಮಹಿಳೆಯರು ಸೇರಿದಂತೆ 70,796 ಆರ್‌ಎಸ್‌ಎಸ್ ಸ್ವಯಂಸೇವಕರು ವಿದರ್ಭದಲ್ಲಿ 12,310 ಗ್ರಾಮಗಳು ಮತ್ತು 27,67,991 ಕುಟುಂಬಗಳನ್ನು ಭೇಟಿ ನೀಡಿ 57 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ.
ಈ ಕುರಿತು ಆರ್‌ಎಸ್‌ಎಸ್‌ನ ವಿದರ್ಭ 'ಪ್ರಾಂತ್ ಕಾರ್ಯವಾಹ' ದೀಪಕ್ ತಮ್‌ಶೆಟ್ಟಿವಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಮ ಮಂದಿರ ದೇಣಿ ಸಂಗ್ರಹಕ್ಕಾಗಿ 80,424 ಮಹಿಳೆಯರು ಸೇರಿದಂತೆ ಒಟ್ಟು 20,64,622 ಸ್ವಯಂಸೇವಕರು ದೇಶದ 5,45,737 ಗ್ರಾಮಗಳು ಮತ್ತು 12,42,21,214 ಕುಟುಂಬಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.

ವಿದರ್ಭ ಪ್ರದೇಶದ 11 ಜಿಲ್ಲೆಗಳಾದ ಯವತ್ಮಾಲ್, ಅಕೋಲಾ, ಅಮರಾವತಿ, ವಾರ್ಧಾ, ಬುಲ್ಖಾನಾ, ವಾಶಿಮ್, ನಾಗ್ಪುರ, ಚಂದ್ರಪುರ, ಭಂಡಾರ, ಗಡ್ಚಿರೋಲಿ ಮತ್ತು ಗೊಂಡಿಯಾದಲ್ಲಿ ದೇಣಿಗೆ ಸಂಗ್ರಹಿಸಲಾಗಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ, ಸೀತಾಮಾತೆ ತಂಗಿದ್ದ ಐತಿಹ್ಯವಿರುವ ಶ್ರೀಲಂಕಾದ ಸೀತಾ ಇಲಿಯಾದಲ್ಲಿನ ಅಶೋಕ ವಟಿಕದ ಕಲ್ಲೊಂದನ್ನು ಬಳಸಲು ತೀರ್ಮಾನಿಸಲಾಗಿದ್ದು, ಆ ಕಲ್ಲನ್ನು ಅಲ್ಲಿಂದ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ.












Click it and Unblock the Notifications