ಆರೆಸ್ಸೆಸ್ ಅನ್ನು 'ವಿಷ' ಎಂದು ನಿಂದಿಸಿದ ಮಲ್ಲಿಕಾರ್ಜುನ ಖರ್ಗೆ

ಮುಂಬೈ, ಆಗಸ್ಟ್ 29: 'ಆರೆಸ್ಸೆಸ್ ಸಿದ್ಧಾಂತ ದೇಶಕ್ಕೆ ವಿಷವಿದ್ದಂತೆ' ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮುಂಬೈಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, 'ಬಿಜೆಪಿಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತವನ್ನು ಅಳವಡಿಸಿಕೊಳ್ಳುತ್ತಿದೆ. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಚಾಚೂ ತಪ್ಪದೆ ಜಾರಿಗೆ ತರುತ್ತಿದ್ದಾರೆ. ನಾವು ಆ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ. ಏಕೆಂದರೆ ನಮಗೆ ಗೊತ್ತು ಆರೆಸ್ಸೆಸ್ ಸಿದ್ಧಾಂತ ಯಾವತ್ತಿದ್ದರೂ ದೇಶಕ್ಕೆ ವಿಷವೇ' ಎಂದು ಖರ್ಗೆ ಹೇಳಿದ್ದಾರೆ.

'ವಿಷ ಯಾವತ್ತಿದ್ದರೂ ವಿಷವೇ. ಅದು ಹೌದೋ ಅಲ್ಲವೋ ಎಂದು ಪರೀಕ್ಷಿಸುತ್ತೇನೆ ಎಂದರೆ ಫಲಿತಾಂಶ ಏನಾಗುತ್ತದೆ? ನಾವು ಯಾವುದೇ ವ್ಯಕ್ತಿ ಅಥವಾ ಮೋದಿಯವರ ವಿರೋಧಿಯಲ್ಲ. ನಾವು ಆರೆಸ್ಸೆಸ್ ಸಿದಧಾಂತದ ವಿರೋಧಿಗಳು. ನಮ್ಮ ಹೋರಾಟವೇನಿದ್ದರೂ ಅದರ ವಿರುದ್ಧ, ಮತ್ತಉ ಈ ಹೋರಾಟ ಹೀಗೆಯೇ ಮುಂದುವರಿಯುತ್ತದೆ' ಎಂದು ಖರ್ಗೆ ಹೇಳಿದ್ದಾರೆ.

RSS ideology is poison for the country

ಇತ್ತೀಚೆಗಷ್ಟೇ ಲಂಡನ್ನಿನಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರುಲ್ ಗಾಂಧಿ, ಆರೆಸ್ಸೆಸ್ ಅನ್ನು ಉಗ್ರ ಸಂಘಟನೆಗೆ ಹೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+