ದಾವೂದ್ ಕರೆ ಸ್ವೀಕರಿಸಿದ ಮಹಾರಾಷ್ಟ್ರದ ರಾಜಕಾರಣಿಗೆ ಯಾರು?

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 27: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರು ಕರಾಚಿಯಲ್ಲಿ ನೆಲೆಸಿ ಅಲ್ಲಿಂದ ಮಹಾರಾಷ್ಟ್ರದ ಕೆಲ ರಾಜಕಾರಣಿಗಳು, ಸೆಲೆಬ್ರಿಟಿಗಳಿಗೆ ಕರೆ ಮಾಡುತ್ತಿರುವ ಬಗ್ಗೆ ಮಾಹಿತಿ ಹೊರಬಂದಿದೆ.

ದಾವೂದ್ ನೆಲೆಸಿರುವ ಮನೆ ಹಾಗೂ ಮುಂಬೈನಲ್ಲಿರುವ ಆತನ ಕುಟುಂಬಸ್ಥರ ನಡುವಿನ ಫೋನ್ ಕರೆ ವಿವರಗಳನ್ನು ಕಲೆ ಹಾಕುತ್ತಿರುವ ತನಿಖಾ ಸಂಸ್ಥೆಗೆ ಈ ವಿವರ ತಿಳಿದು ಬಂದಿದೆ.ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ನಿರಂತರವಾಗಿ ದಾವೂದ್ ಸಂಪರ್ಕದಲ್ಲಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Indian politicians among list of frequent callers to Dawood Ibrahim

ದಾವೂದ್ ಕುಟುಂಬಸ್ಥರು ಸಹ ಭಾರತದಲ್ಲಿರುವ ಹಲವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಗುಜರಾತಿನ ವಡೋದರಾ ಮೂಲದ ಹ್ಯಾಕರ್ ಮನೀಷ್ ಭಾಂಗ್ಲೆ ಮತ್ತು ಅವರ ಸ್ನೇಹಿತ ಜಯೇಶ್ ಶಾ ಮೊದಲಿಗೆ ವಿಷಯ ಹೊರ ಹಾಕಿದ್ದರು. ಪಾಕಿಸ್ತಾನ ಟೆಲಿಕಾಂ ಕಂಪನಿಯ ವೆಬ್​ಸೈಟ್ ಹ್ಯಾಕ್ ಮಾಡಿದಾಗ ಈ ಮಾಹಿತಿ ಸಿಕ್ಕಿತ್ತು.

ಕರಾಚಿಯಲ್ಲಿರುವ ದಾವೂದ್ ಮನೆಗೆ 4 ಸ್ಥಿರ ದೂರವಾಣಿ ಸಂಪರ್ಕ ಪಡೆಯಲಾಗಿದೆ. ಸೆಪ್ಟೆಂಬರ್ 5, 2015 ರಿಂದ ಏಪ್ರಿಲ್ 5, 2016ರ ತನಕದ ಕರೆ ವಿವರಗಳನ್ನು ಪಡೆಯಲಾಗಿದೆ. ಕರಾಚಿ ಫೋನ್ ಸಂಪರ್ಕ ದಾವೂದ್ ಮಡದಿ ಮೆಹಜಬೀನ್ ಶೇಖ್ ಹೆಸರಿನಲ್ಲಿ ಪಡೆಯಲಾಗಿದೆ. -021-3587**19, -021-3587**39, -021-3587**99, -021-3587**99 ಎಂದು ತಿಳಿದು ಬಂದಿದ್ದು ಇದನ್ನೂ ಭಾರತದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಸಹ ದೃಢಪಡಿಸಿದ್ದಾರೆ.

ಪಾಕಿಸ್ತಾನದ ಸಂಖ್ಯೆಗಳಿಂದ ಭಾರತದಲ್ಲಿರುವ ದೂರವಾಣಿ ಸಂಖ್ಯೆಗಳಿಗೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿರುವ 4 ನಂಬರ್​ಗಳಿಗೆ ಸತತವಾಗಿ ಕರೆ ಮಾಡಲಾಗಿದೆ. ಆದರೆ, ಮಹಾರಾಷ್ಟ್ರದ ಯಾವ ರಾಜಕಾರಣಿಗಳಿಗೆ ಕರೆ ಮಾಡಲಾಗಿತ್ತು ಎಂಬ ವಿಷಯವನ್ನು ಮಾಧ್ಯಮ ಸಂಸ್ಥೆ ಇನ್ನೂ ಬಹಿರಂಗ ಪಡಿಸಿಲ್ಲ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yes you read it right, some Indian politicians have reportedly been appeared on the list of frequent callers to India's most wanted don Dawood Ibrahim in Pakistan.
Please Wait while comments are loading...