ಮೋದಿ, ಯೋಗಿ ನಾಯಕತ್ವದಲ್ಲಿ ರಾಮ ಮಂದಿರ ನಿರ್ಮಾಣ: ಶಿವಸೇನಾ

ಮುಂಬೈ, ಜೂನ್ 15: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತದೆ ಎಂದು ಶಿವಸೇನಾ ಹೇಳಿದೆ.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಜೂನ್ 16ರಂದು ಅಯೋಧ್ಯಾಕ್ಕೆ ಭೇಟಿ ನೀಡಲಿದ್ದಾರೆ. ಶನಿವಾರ ಸುದ್ದಿಗೋಷ್ಠಿ ನಡೆಸಿದ ಶಿವಸೇನಾ ಮುಖಂಡ ಸಂಜಯ್ ರಾವತ್ ಮೋದಿ ಮತ್ತು ಯೋಗಿ ಅವರ ನಾಯಕತ್ವದಲ್ಲಿ ರಾಮಮಂದಿರ ನಿರ್ಮಾಣ ನಡೆಯಲಿದೆ ಎಂದಿದ್ದಾರೆ.

ಹೊಸದಾಗಿ ಆಯ್ಕೆಯಾದ ಸಂಸದರಿಗೆ ನವೆಂಬರ್‌ನಲ್ಲಿ ಭರವಸೆ ನೀಡಿದಂತೆ ಚುನಾವಣೆ ಬಳಿಕ ಮತ್ತೆ ಅಯೋಧ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಚುನಾವಣೆಯಲ್ಲಿ ರಾಮ ಮಂದಿರದ ಹೆಸರಿನಲ್ಲಿ ಮತ ಕೇಳಲಿಲ್ಲ, ಭವಿಷ್ಯದಲ್ಲಿಯೂ ಕೇಳುವುದಿಲ್ಲ ಎಂದು ಅವರು ಹೇಳಿದರು.

Ram temple will be constructed in Modi and Yogi leadership shiv sena

ರಾಮ ರಾಜಕೀಯದ ವಿಷಯವಲ್ಲ. ಅದು ನಮ್ಮ ನಂಬಿಕೆಯ ವಿಷಯ. ನಾವು ರಾಮನ ಹೆಸರಿನಲ್ಲಿ ಮತ ಕೇಳಿರಲಿಲ್ಲ ಮುಂದೆಯೀ ಕೇಳುವುದಿಲ್ಲ. ನವೆಂಬರ್‌ನಲ್ಲಿ ಅಯೋಧ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಚುನಾವಣೆ ಬಳಿಕ ಮತ್ತೆ ಬರುವುದಾಗಿ ಭರವಸೆ ನೀಡಿದ್ದರು. ಈಗ ಭರವಸೆಯನ್ನು ಈಡೇರಿಸುತ್ತಿದ್ದಾರೆ ಎಂದು ಉದ್ದವ್ ಠಾಕ್ರೆ ಅವರ ಭೇಟಿಯ ಹಿಂದೆ ರಾಜಕೀಯ ಕಾರಣಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ವರ್ಷದ ಕೊನೆಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಉದ್ದೇಶದಿಂದ ತನ್ನ ಮಿತ್ರಪಕ್ಷ ಬಿಜೆಪಿ ಮೇಲೆ ಒತ್ತಡ ಹೇರುವ ಸಲುವಾಗಿ ಠಾಕ್ರೆ ಅಯೋಧ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+