ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್ ಬಿ ವಂಚನೆ ಕೇಸ್: ನೀರವ್ ಮೋದಿ ಕಚೇರಿ ಮೇಲೆ 'ಇಡಿ' ದಾಳಿ

By Mahesh
|
Google Oneindia Kannada News

ಮುಂಬೈ, ಫೆಬ್ರವರಿ 15: ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಗುರುವಾರದಂದು ತನಿಖೆ ಆರಂಭವಾಗಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ) ತನಿಖೆ ತೀವ್ರಗೊಳಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 280 ಕೋಟಿ ರೂ.ಗಳ ಅವ್ಯವಹಾರ ಮಾಡಿರುವ ಆರೋಪದ ಹೊತ್ತಿರುವ ನೀರವ್ ಮೋದಿ ಅವರ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

PNB fraud case: ED raids Nirav Modi's properties in Mumbai

ಮೋದಿ ಹಾಗೂ ಮತ್ತಿತರ ಆರೋಪಿಗಳಿಗೆ ಸೇರಿದ ಸ್ಥಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಸೂರತ್ ನಲ್ಲಿ ಮೂರು ಕಡೆ, ಮುಂಬೈನಲ್ಲಿ ನಾಲ್ಕು ಹಾಗೂ ದೆಹಲಿಯಲ್ಲಿ ಎರಡು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಟ್ಯಧಿಪತಿ ಆಭರಣ ವಿನ್ಯಾಸಕ ನೀರವ್ ಮೋದಿ ಹಾಗೂ ಅವರ ಪ್ರತಿಷ್ಠಿತ ಆಭರಣ ಸಂಸ್ಥೆಗಳ ವಿರುದ್ಧ ವಂಚನೆ ಮತ್ತು ಅವ್ಯವಹಾರಗಳ ಸಂಬಂಧ ಕೇಂದ್ರೀಯ ತನಿಖಾ ದಳ-ಸಿಬಿಐಗೆ ಪಿಎನ್ ಬಿ ಎರಡು ದೂರುಗಳನ್ನು ನೀಡಿತ್ತು.
ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಎಫ್ ಐಆರ್ ಹಾಕಿದೆ.

English summary
Enforcement Directorate (ED) has conducted raids on diamond merchant Nirav Modi properties on Thursday. ED sleuths raided three locations in Surat, four in Mumbai and two in Delhi in connection with Punjab National Bank fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X