• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸಂಕಷ್ಟದಲ್ಲೂ, ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ 3 ದುಬಾರಿ ಆಡಿ ಕಾರು!

|

ಇಡೀ ದೇಶ ಕೊರೊನಾವೈರಸ್ ಸೋಂಕಿನ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಲಾಕ್‌ಡೌನ್‌ದಿಂದಾಗಿ ಎಲ್ಲಾ ಉದ್ಯಮವೂ ಆರ್ಥಿಕ ನಷ್ಟ ಅನುಭವಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತನ್ನ ಉನ್ನತ ಅಧಿಕಾರಿಗಳಿಗೆ ಮೂರು ಆಡಿ ಕಾರುಗಳನ್ನು ನೀಡುವ ಮೂಲಕ ಚರ್ಚೆಗೆ ಕಾರಣವಾಗಿದೆ.

   ಕೊರೊನಾದಿಂದ ಪ್ರಾಣಕಳೆದುಕೊಂಡ ಶಾಸಕ | DMK MLA | J Anbazhagan | Oneindia Kannada

   ನೀರವ್ ಮೋದಿ ವಂಚನೆ ಪ್ರಕರಣದ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ದೇಶದ ಸಂಕಷ್ಟದ ಸಮಯದಲ್ಲಿ ತನ್ನ ಅಧಿಕಾರಿಗಳಿಗೆ ದುಬಾರಿ ಕಾರು ನೀಡಿ ಸುದ್ದಿಯಾಗಿದೆ.

   ಮನೆ, ಕಾರು ಖರೀದಿ ಇನ್ನು ಅಗ್ಗ: ಬಡ್ಡಿ ದರ ಕಡಿತಗೊಳಿಸಿದ ದೇಶದ 2ನೇ ದೊಡ್ಡ ಬ್ಯಾಂಕ್

   ಪಿಎನ್‌ಬಿ ಖರೀದಿಸಿರು ಮೂರು ಆಡಿ ಕಾರುಗಳ ಅಂದಾಜು ಮೌಲ್ಯ ಸುಮಾರು 1.34 ಕೋಟಿ ರುಪಾಯಿ ಎನ್ನಲಾಗಿದೆ. ಬ್ಯಾಂಕ್ ಮೂಲಗಳ ಪ್ರಕಾರ ಬ್ಯಾಂಕ್ ಎಂಡಿ ಮತ್ತು ಇಬ್ಬರು ಹಿರಿಯ ನಿರ್ದೇಶಕರಿಗೆ ಈ ಕಾರುಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

   ಈ ದುಬಾರಿ ಕಾರುಗಳ ಖರೀದಿಗೆ ಬ್ಯಾಂಕ್ ನ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು, ಬ್ಯಾಂಕ್ ನ ಅನುಪಯೋಗ ಬಜೆಟ್ ನಲ್ಲಿ ಮಿಕ್ಕ ಹಣದಿಂದ ಈ ಕಾರುಗಳನ್ನು ಖರೀದಿ ಮಾಡಲಾಗಿದೆ ಎನ್ನಲಾಗಿದೆ.

   ಕಳೆದ ವಾರವಷ್ಟೇ ಕೇಂದ್ರ ವಿತ್ತ ಸಚಿವಾಲಯ ಸಭೆ ನಡೆಸಿ ಕೊರೊನಾವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಅನಾವಶ್ಯಕ ವೆಚ್ಚಗಳಿಗೆ ಬ್ರೇಕ್ ಹಾಕುವಂತೆ ಸೂಚಿಸಿತ್ತು. ಇಂತಹ ಸಂದರ್ಭದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತ ಮಂಡಳಿ ಬಳಕೆಯಾಗದ ನಿಧಿಯನ್ನು ದುಬಾರಿ ಕಾರು ಖರೀದಿಗೆ ಬಳಸಿ ಟೀಕೆಗೆ ಗುರಿಯಾಗಿದೆ.

   English summary
   Punjab National Bank (PNB), India's second largest lender, has bought three Audi cars for its top management at a time when Amid Coronavirus Crisis
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X