• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನುಮಾನವೇ ಬೇಡ ಪೆಟ್ರೋಲ್ ದರ 100ರು ಗಡಿ ದಾಟುತ್ತೆ!

|
   ದೇಶದಲ್ಲಿ ಏರುತ್ತಲೇ ಇದೆ ಇಂಧನ ಬೆಲೆ | Oneindia Kannada

   ಮುಂಬೈ, ಸೆಪ್ಟೆಂಬರ್ 25: ದೇಶದ ಮೆಟ್ರೋ ಸಿಟಿಗಳ ಪೈಕಿ ಮುಂಬೈಯಲ್ಲಿ ಪೆಟ್ರೋಲ್ ದರ ಅತ್ಯಧಿಕವಾಗಿದೆ. ದೀಪಾವಳಿ ವೇಳೆಗೆ ಪೆಟ್ರೋಲ್ ಬೆಲೆ 100 ರು ಪ್ರತಿ ಲೀಟರ್ ಬೆಲೆ ಏರಿಕೆಯಾದರೂ ಅಚ್ಚರಿಪಡಬೇಕಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಮುಂಬೈಯಲ್ಲಿ ಸೋಮವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 90.08 ರು ನಷ್ಟಿತ್ತು. ಮೆಟ್ರೋ ನಗರಗಳ ಪೈಕಿ ಹೈದರಾಬಾದ್ ನಲ್ಲಿ 87.7 ರು ನಷ್ಟಿದ್ದರೆ, ದೆಹಲಿಯಲ್ಲಿ ಅತಿ ಕಡಿಮೆ 82.72 ರು ನಷ್ಟಿತ್ತು.

   ಮುಂಬೈಯಲ್ಲಿ 90 ರು ಗಡಿ ದಾಟಿದ ಪೆಟ್ರೋಲ್ ಬೆಲೆ

   ಮಹಾರಾಷ್ಟ್ರದ 32 ನಗರ, ಪಟ್ಟಣಗಳಲ್ಲಿ ಈಗ ಪೆಟ್ರೋಲ್ ಬೆಲೆ 90 ರು ಪ್ಲಸ್ ನಷ್ಟಿದೆ. ನಾಂದೇಡ್ ನಲ್ಲಿ ಅತಿ ಹೆಚ್ಚು 91.66 ರು ನಷ್ಟಿದೆ. ಥಾಣೆ, ನವಿ ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 89.71 ರು ನಷ್ಟಿದ್ದು, ಮುಂಬೈಗಿಂತ ಕಡಿಮೆಯಿದೆ.

   ಮುಂಬೈಯಲ್ಲಿ ಡೀಸೆಲ್ ದರ ಕೂಡಾ ಅತ್ಯಧಿಕವಾಗಿದ್ದು ಪ್ರತಿ ಲೀಟರ್ ಮೇಲೆ 78.58ರು ನಷ್ಟಿದೆ. ಶೇ65 ರಷ್ಟು ಸರಕು ಸಾಗಣೆ ವಾಹನಗಳಿಗೆ ಡೀಸೆಲ್ ಬಳಕೆಯಾಗುವುದರಿಂದ ಅಗತ್ಯ ವಸ್ತುಗಳ ಮೇಲಿನ ಬೆಲೆ ಕೂಡಾ ಹೆಚ್ಚಳವಾಗುತ್ತಿದೆ.

   ಇಲ್ಲಿ ತನಕ ಮೇ 29ರಂದು 86.24ರು ಇದ್ದದ್ದೆ ಅತ್ಯಧಿಕವಾಗಿತ್ತು. ಸೆಪ್ಟೆಂಬರ್ 02ರಂದು ಈ ದಾಖಲೆ ಮುರಿಯಲಾಯಿತು. ಆನಂತರ ಬೆಲೆ ಮೇಲ್ಮುಖವಾಗಿ ಚಲಿಸಿದೆ. ಕಳೆದ ಏಳು ತಿಂಗಳುಗಳಲ್ಲಿ ಪೆಟ್ರೋಲ್ ಶೇ 13ರಷ್ಟು ಹಾಗೂ ಡೀಸೆಲ್ ಶೇ 19ರಷ್ಟು ಏರಿಕೆಯಾಗಿದೆ.

   ಬೆಂಗಳೂರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರ

   ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಅಧಿಕ

   ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಅಧಿಕ

   ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ತೆರಿಗೆಯನ್ನೂ ಇಳಿಸಿವೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದು, ಡಾಲರ್ ಎದುರು ರುಪಾಯಿ ಅಪಮೌಲ್ಯ ಎಲ್ಲವೂ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.

   ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಪ್ರತಿದಿನದಂದು ಇಂಧನ ಬೆಲೆ ಪರಿಷ್ಕರಣೆ ಮಾಡಿದ ಬಳಿಕ ಆಯಾ ರಾಜ್ಯಗಳು ತಮ್ಮ ಆರ್ಥಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ವ್ಯಾಟ್, ಸೆಸ್ ಸೇರಿಸಬಹುದು. ಬೇರೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಾಗಿದೆ.

   ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ

   ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ

   ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರುವ ಬಗ್ಗೆ ಹಲವಾರು ಬಾರಿ ಚರ್ಚೆಗಳು ನಡೆದಿವೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೂ ಸಹ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತರಬೇಕಿದೆ ಎಂದು ಹೇಳಿದ್ದರು. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ

   ತೆರಿಗೆ ಹಾಕುವುದು ಅನಿವಾರ್ಯ

   ತೆರಿಗೆ ಹಾಕುವುದು ಅನಿವಾರ್ಯ

   ಕರ್ನಾಟಕದಲ್ಲಿ ಪೆಟ್ರೋಲ್ ಮೇಲೇ ಶೇ 30 ಹಾಗೂ ಡೀಸೆಲ್ ಮೇಲೆ ಶೇ 19ರಷ್ಟು ವ್ಯಾಟ್ ಹಾಕಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12 ಗಳಷ್ಟಿದೆ. ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇ.26ರ ವ್ಯಾಟ್ ಹೇರಲಾಗುತ್ತಿದೆ. ವ್ಯಾಟ್ ಶೇ 4ರಷ್ಟು ಅಥವಾ 2 ರು ತಗ್ಗಿಸಿದರೂ ರಾಜ್ಯಕ್ಕೆ ವಾರ್ಷಿಕ ಸಾವಿರದಿಂದ 2 ಸಾವಿರ ಕೋಟಿ ರು ಹೊರೆ ಬೀಳಲಿದೆ. ಈಗಾಗಲೇ ಜಿಎಸ್ಟಿ ಬಂದ ಮೇಲೆ ಪ್ರವೇಶ ದರ ರದ್ದಾಗಿ ವಾರ್ಷಿಕ 2 ಸಾವಿರ ಕೋಟಿ ರು ನಷ್ಟವಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದನ್ನು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸಮರ್ಥಿಸಿಕೊಂಡಿದ್ದು, ಇದರಿಂದ ಬರುವ ಆದಾಯದಿಂದ ಹಿಂದಿನ ಯುಪಿಎ ಸರ್ಕಾರ ಪಾವತಿಸದೇ ಬಾಕಿ ಉಳಿಸಿದ್ದ ತೈಲ ಸಬ್ಸಿಡಿ ನಿಭಾಯಿಸಲಾಗುತ್ತಿದೆ. ಅಲ್ಲದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಕೆಯಾಗುತ್ತಿದೆ ಎಂದಿದೆ.

   ಜಿಎಸ್ಟಿ ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

   ಜಿಎಸ್ಟಿ ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

   ಈ ಎಲ್ಲಾ ಲೆಕ್ಕಾಚಾರ ಗರಿಷ್ಠ ಶೇ 18ರಷ್ಟು ತೆರಿಗೆ ವಿಧಿಸಿದರೆ ಬರುವ ಮೊತ್ತವಾಗಿದೆ. ಆದರೆ, ಜಿಎಸ್ಟಿ ವ್ಯಾಪಿಗೆ ಬಂದರೆ ಶೇ 5 ರಿಂದ ಶೇ 28ರಷ್ಟು ವಿಧಿಸಬಹುದಾಗಿದೆ. ಹೀಗಾಗಿ, ಶೇ 28ರಷ್ಟು ಜಿಎಸ್ಟಿ ಹೇರಿಕೆಯಾದರೆ ಜತೆಗೆ ಆಯಾ ರಾಜ್ಯಗಳ ಮಾರಾಟ ತೆರಿಗೆ, ಸೆಸ್ ಸೇರಿಸಿದರೆ ತೈಲ ಬೆಲೆ ಈಗಿನಷ್ಟೇ ಆಗಲಿದೆ. ಉದಾಹರಣೆಗೆ ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಶೇ 27ರಷ್ಟಿದ್ದರೆ, ಡೀಸೆಲ್ ಮೇಲೆ 17.2ರು ಪ್ರತಿ ಲೀಟರ್ ಗೆ ಪಡೆಯಲಾಗುತ್ತಿದೆ. ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 39.12ರಷ್ಟಿದೆ, ತೆಲಂಗಾಣದಲ್ಲಿ ಶೇ26ರಷ್ಟಿದೆ. ಕರ್ನಾಟಕದಲ್ಲಿ ಶೇ30ರಷ್ಟಿದೆ.

   ಅಬಕಾರಿ ಸುಂಕದ ಲೆಕ್ಕಾಚಾರ

   ಅಬಕಾರಿ ಸುಂಕದ ಲೆಕ್ಕಾಚಾರ

   ಅಬಕಾರಿ ಸುಂಕದ ಲೆಕ್ಕಾಚಾರ: ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48ರು ನಷ್ಟಿದ್ದರೆ, ಡೀಸೆಲ್ ಮೇಲೆ 15.33ರು ಪ್ರತಿ ಲೀಟರ್ ಸುಂಕ ತೆರಬೇಕಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಶೇ6ರಷ್ಟು ಮಾರಾಟ ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ಇಂಧನ ಮೇಲಿನ ಅಬಕಾರಿ ಸುಂಕ ಇಳಿಸುವ ಗೋಜಿಗೆ ಕೇಂದ್ರ ಸರ್ಕಾರ ಹೋಗುತ್ತಿಲ್ಲ. ಅಬಕಾರಿ, ಇಂಧನ ಮುಂತಾದ ಉತ್ಪನ್ನಗಳ ಮೇಲೆ ಸದ್ಯ ಜಿಎಸ್ಟಿ ಜಾರಿಯಾಗಿಲ್ಲ. ಜಿಎಸ್ಟಿ ಜಾರಿಗೆ ಬಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಾನವಾಗಿ ತೆರಿಗೆ ವಿಧಿಸಲಿದೆ. ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್, ಸೆಸ್ ಕೂಡಾ ಸೇರಿವೆ. ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

   English summary
   The price of petrol in Mumbai crossed the Rs 90 mark on Monday(Rs 90.08 per litre) the highest in Indian metro cities. The price of petrol in 32 cities and towns of Maharashtra is now over Rs 90 per litre.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X