ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಾ ಚಾಲ್ ಹಗರಣ: ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್‌ಗೆ ಇಡಿ ಗ್ರಿಲ್

|
Google Oneindia Kannada News

ಮುಂಬೈ ಆಗಸ್ಟ್ 6: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ಅವರನ್ನು ಇಡಿ ಗ್ರಿಲ್ ಮಾಡಿದೆ. ಪ್ರಸ್ತುತ ಬಂಧನದಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಅವರು ಶನಿವಾರ (ಆಗಸ್ಟ್ 6) ಪತ್ರಾ ಚಾಲ್ ಮರು ಅಭಿವೃದ್ಧಿ ವಿಷಯದಿಂದ ಉದ್ಭವಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗಾಗಿ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಯನ್ನು ತಲುಪಿದ್ದಾರೆ.

ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಈ ಪ್ರಕರಣದಲ್ಲಿ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಅವರನ್ನು ಆಗಸ್ಟ್ 8 (ಸೋಮವಾರ) ವರೆಗೆ ಇಡಿ ಕಸ್ಟಡಿಗೆ ಕಳುಹಿಸಿದೆ.

ಶನಿವಾರ (ಆಗಸ್ಟ್ 6) ತನ್ನ ವಿಚಾರಣೆಯ ಸಮಯದಲ್ಲಿ, ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಅವರನ್ನು ಇಡಿ ಗ್ರಿಲ್ ಮಾಡಿದೆ. ಇಡಿ ಕೆಲವು ಬ್ಯಾಂಕ್ ವಹಿವಾಟುಗಳು ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಲು ಬಯಸುತ್ತದೆ ಎಂದು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಒಬ್ಬ ಮಹಿಳೆ ಸೇರಿದಂತೆ ಸುಮಾರು 4 ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಹಾಜರಿದ್ದರು. 2018 ರಲ್ಲಿ ಭುಗಿಲೆದ್ದ ಪತ್ರಾ ಚಾಲ್ ಪ್ರಕರಣದಲ್ಲಿ ಇಡಿ ಸ್ಕ್ಯಾನರ್ ಅಡಿಯಲ್ಲಿ ವಿಚಾರಣೆ ಎದುರಿಸಿದ ಮೊದಲ ಮಹಿಳೆ ವರ್ಷಾ ರಾವುತ್ ಆಗಿದ್ದಾರೆ.

ಚುರುಕುಗೊಂಡ ಐದು ವರ್ಷಗಳ ಹಿಂದಿನ ಪ್ರಕರಣ

ಚುರುಕುಗೊಂಡ ಐದು ವರ್ಷಗಳ ಹಿಂದಿನ ಪ್ರಕರಣ

ಪ್ರಾಸಂಗಿಕವಾಗಿ, ಜೂನ್ 29 ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನದ ನಂತರ ಐದು ವರ್ಷಗಳ ಹಿಂದಿನ ಪ್ರಕರಣದ ತನಿಖೆಯು ಇತ್ತೀಚೆಗೆ ವೇಗವನ್ನು ಪಡೆದುಕೊಂಡಿದೆ. ಈ ವಾರದ ಆರಂಭದಲ್ಲಿ, ಜುಲೈ 31 ರಂದು ರಾವತ್ ಮೇಲೆ ದಾಳಿ ನಡೆದ ನಂತರ ಆಗಸ್ಟ್ 1ರಂದು ಅವರನ್ನು ಬಂಧಿಸಲಾಯಿತು.

'ರಾಜಕೀಯ ಸೇಡು' ಎಂದ ಸಂಜಯ್ ರಾವುತ್

'ರಾಜಕೀಯ ಸೇಡು' ಎಂದ ಸಂಜಯ್ ರಾವುತ್

ಬಳಿಕ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ಜೊತೆಗೆ ಆಪ್ತ ಸಹಚರ ಪ್ರವೀಣ್ ರಾವುತ್ ಮತ್ತು ಹಲವಾರು ಇತರ ಆರೋಪಿಗಳ ಜೊತೆಗೆ ಸಂಜಯ್ ರಾವುತ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಅವರ ಹಲವಾರು ಸ್ಥಿರ ಆಸ್ತಿಗಳನ್ನು ಸಹ ಜಪ್ತಿ ಮಾಡಿತ್ತು. ಸಂಜಯ್ ರಾವುತ್ ಅವರು ಯಾವುದೇ ತಪ್ಪುಗಳನ್ನು ಕಟುವಾಗಿ ನಿರಾಕರಿಸಿದ್ದಾರೆ ಮತ್ತು ತನಿಖೆಯನ್ನು 'ರಾಜಕೀಯ ಸೇಡು' ಎಂದು ಹೇಳಿದ್ದಾರೆ.

ಸಂಜಯ್ ರಾವತ್ ಹೆಸರು ತಳುಕು ಹಾಕಿಕೊಂಡಿದ್ದು ಹೇಗೆ?

ಸಂಜಯ್ ರಾವತ್ ಹೆಸರು ತಳುಕು ಹಾಕಿಕೊಂಡಿದ್ದು ಹೇಗೆ?

ಪಾತ್ರ ಚಾಲ್ ಎಂಬುದು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಗರಣ. ಮುಂಬೈನ ಉತ್ತರ ಭಾಗದಲ್ಲಿರುವ ಗೋರೆಗಾಂವ್‌ನ ಸಿದ್ಧಾರ್ಥ ನಗರದಲ್ಲಿ ಅಸ್ತಿತ್ವದಲ್ಲಿದ್ದುದು ಪಾತ್ರ ಚಾಲ್ ಸೊಸೈಟಿ. ಸುಮಾರು 47 ಎಕರೆ ಪ್ರದೇಶ ವಿಸ್ತೀರ್ಣದಲ್ಲಿದ್ದ ಈ ಸೊಸೈಟಿಯಲ್ಲಿ 672 ಮನೆಗಳು ಇದ್ದವು. ಈ ಪ್ರದೇಶದ ಪುನರಾಭಿವೃದ್ಧಿ ಹೆಸರಿನಲ್ಲಿ ನಡೆದ ಸರಣಿ ವಂಚನೆಗಳೇ ಈಗ ಪಾತ್ರ ಚಾಲ್ ಹಗರಣವಾಗಿ ಮಾರ್ಪಟ್ಟಿದೆ. ಇದು 14 ವರ್ಷಗಳ ಹಿಂದಿನ ಕರ್ಮಕಾಂಡ. ವಂಚನೆಯ ಸೂತ್ರಧಾರ ಎನಿಸಿದ ಗುರು ಆಶಿಶ್ ಕನ್ಸ್‌ಟ್ರಕ್ಷನ್ಸ್ ಸಂಸ್ಥೆಯ ನಿರ್ದೇಶಕರಲ್ಲಿ ಪ್ರವೀಣ್ ರಾವತ್ ಒಬ್ಬರು. ಇವರು ಶಿವಸೇನಾ ಸಂಸದ ಸಂಜಯ್ ರಾವತ್ ಆಪ್ತ. ಇನ್ನು ಜಿಎಸಿ ಕೂಡ ಹೆಚ್‌ಡಿಐಎಲ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಅಂಗ ಸಂಸ್ಥೆ. ಈ ಹೆಚ್‌ಡಿಐಎಲ್ ಸಂಸ್ಥೆಯೇ ಹಲವು ಅಕ್ರಮಗಳನ್ನು ನಡೆಸಿ ಸಿಬಿಐ ತನಿಖೆಗೆ ಬಿದ್ದಿದೆ.

ಪ್ರವೀಣ್ ರಾವತ್ ಪ್ರಕರಣದಲ್ಲಿ ಭಾಗಿ

ಪ್ರವೀಣ್ ರಾವತ್ ಪ್ರಕರಣದಲ್ಲಿ ಭಾಗಿ

ಜಿಎಸಿಯ ನಿರ್ದೇಶಕ ಪ್ರವೀಣ್ ರಾವತ್ ಹೆಚ್‌ಡಿಐಎಲ್‌ನಿಂದ 100 ಕೋಟಿ ರೂ ಪಡೆದಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಆರೋಪ. ಪ್ರವೀಣ್ ರಾವತ್ ಈ ಹಣವನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಹಂಚಿಕೆ ಮಾಡಿದ್ದಾರೆ. ಶಿವಸೇನಾ ಸಂಸದ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್‌ಗೂ ಹಣದ ಒಂದು ಪಾಲು ಹೋಗಿದೆ ಎಂದು ಇಡಿ ಹೇಳುತ್ತದೆ. ಪ್ರವೀಣ್ ರಾವುತ್ ಪತ್ನಿ ಮಾಧುರಿ ರಾವುತ್ ಅವರು 83 ಲಕ್ಷ ರೂ ಹಣವನ್ನು ವರ್ಷಾ ರಾವುತ್‌ಗೆ ಸಾಲದ ರೂಪದಲ್ಲಿ ಕೊಟ್ಟಿರುತ್ತಾರೆ. ವರ್ಷಾ ಈ ಹಣವನ್ನು ಬಳಸಿ ದಾದರ್‌ನಲ್ಲಿ ಒಂದು ಫ್ಲಾಟ್ ಖರೀದಿಸಿರುತ್ತಾರೆ. ಇದು ಆಗಿದ್ದು 2010ರಲ್ಲಿ. ವರ್ಷಾ ರಾವುತ್ ಜೊತೆಗೆ ಸ್ವಪ್ನಾ ಪಾಟ್ಕರ್ ಎಂಬುವರ ಹೆಸರಿನಲ್ಲೂ 8 ಕಡೆ ಜಮೀನು ಖರೀದಿ ಆಗಿರುತ್ತದೆ. ಸಂಜಯ್ ರಾವುತ್ ಆಪ್ತ ಸುಜೀತ್ ಅವರ ಪತ್ನಿ ಈ ಸ್ವಪ್ನಾ ಪಾಟ್ಕರ್. ದಾದರ್‌ನಲ್ಲಿರುವ ವರ್ಷಾ ರಾವತ್‌ರ ಫ್ಲ್ಯಾಟ್ ಹಾಗು ಖಿಮ್ ಬೀಚ್‌ನಲ್ಲಿರುವ 8 ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇವುಗಳ ಒಟ್ಟು ಮೌಲ್ಯ 10 ಕೋಟಿಗೂ ಹೆಚ್ಚು.

English summary
ED grills Shiv Sena MP Sanjay Raut's wife Varsha Raut in money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X