ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನೊಂದು ಮೀನುಗಾರನನ್ನು ಕೋಟ್ಯಧಿಪತಿಯನ್ನಾಗಿಸಿದ್ದು ಹೇಗೆ?

|
Google Oneindia Kannada News

ಮುಂಬೈ, ಸೆಪ್ಟೆಂಬರ್ 01: ಮೀನೊಂದು ಮೀನುಗಾರನನ್ನು ಕೋಟ್ಯಧಿಪತಿಯನ್ನಾಗಿಸಿದೆ.

ಹೌದು, ಮುಂಬೈ ಸಮೀಪದ ಪಾಲ್ಘರ್ ಜಿಲ್ಲೆಯ ಮುರ್ಬೆ ಎಂಬ ಗ್ರಾಮದ ಮೀನುಗಾರ ಚಂದ್ರಕಾಂತ್ ಎಂಬುವರು ತಮ್ಮ ವೃತ್ತಿಯಿಂದಾಗಿ ತಾವು ರಾತ್ರಿ ಬೆಳಗಾಗುವುದರೊಳಗಾಗಿ ಕೋಟ್ಯಧಿಪತಿಯಾಗಬಹುದೆಂಬ ಕಲ್ಪನೆಯೂ ಇರಲಿಲ್ಲ.

ಮಳೆಗಾಲದ ಸಂದರ್ಭದಲ್ಲಿ ಮೀನುಗಾರಿಕೆ ನಿಷೇಧ ಅವಧಿ ಮುಗಿದ ನಂತರ ಆಗಸ್ಟ್ 28ರಂದು ಮೀನುಗಾರಿಕೆಗೆ ತೆರಳಿದ ಸಂದರ್ಭ ಅವರ ಬಲೆಗೆ ಒಂದೇ ಬಾರಿಗೆ 150 ಘೊಲ್ ಮೀನುಗಳು ಬಿದ್ದಿದ್ದವು. ಘೊಲ್ ಮೀನು ತಿನ್ನಲು ರುಚಿಕರವಾಗಿದೆಯಲ್ಲದೇ ಅದು ಔಷಧೀಯ ಗುಣಗಳಿಗೂ ಹೆಸರುವಾಸಿಯಾಗಿದೆ.

 Palghar Fishermens Fortune Change After Selling 157 Ghol Fish For Rs 1.33 Crores

ವಿದೇಶಗಳಲ್ಲೂ ಅದಕ್ಕೆ ಬೇಡಿಕೆ ಇದೆ. ಈ ಮೀನಿನ ಹಲವು ಭಾಗಗಳನ್ನು ಬಳಸಿ ಔಷಧಿಗಳನ್ನು ಹಾಗೂ ಇತರೆ ದುಬಾರಿ ಬೆಲೆಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಈ ಮೀನನ್ನು ಚಿನ್ನದ ಹೃದಯ ಮೀನು ಎಂದು ಹೇಳಲಾಗುತ್ತದೆ.

ಚಂದ್ರಕಂತ್ ಮತ್ತವರ ತಂಡ ಮೀನುಗಳನ್ನು ನಂತರ ಸುಮಾರು 1.33 ಕೋಟಿ ರೂ.ಗೆ ಹರಾಜು ಹಾಕಿದೆ. ಆದರೆ ಬಿಡ್ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ತಿಳಿದುಬಂದಿದೆ.

ಈ ಮೀನಿನ ವೈಜ್ಞಾನಿಕ ಹೆಸರು Protonibea diacanthus ಆಗಿದ್ದು, ಇದು ಅತ್ಯಂತ ದುಬಾರಿ ಮೀನುಗಳಲ್ಲಿ ಒಂದಾಗಿದೆ. ಈ ಮೀನಿನ ಹೊಟ್ಟೆಯಲ್ಲಿರುವ ಚೀಲದಂತಹ ವಸ್ತುವಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ ಎಂದು ಚಂದ್ರಕಾಂತ್ ತಾರೆ ಅವರ ಪುತ್ರ ಸೋಮನಾಥ್ ಹೇಳುತ್ತಾರೆ.

English summary
After months-long ban on fishing due to the monsoon in Maharashtra, little did some fishermen from Palghar knew that the first day of fishing would fetch them Rs 1.33 crore worth of catch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X