ಅದ್ನಾನ್ ಸಮಿಗೆ ಸಿಕ್ತು ತಾತ್ಕಾಲಿಕ ರಿಲೀಫ್

ಮುಂಬೈ, ಅ.17: ಪಾಕಿಸ್ತಾನದ ಪಾಪ್ ಗಾಯಕ ಅದ್ನಾನ್ ಸಮಿ ಅವರಿಗೆ ದೇಶ ಬಿಟ್ಟು ತೆರಳುವಂತೆ ಮುಂಬೈ ಪೊಲೀಸರು, ರಾಜಕೀಯ ಪಕ್ಷಗಳು ಆಗ್ರಹಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ, ಅಭಿಮಾನಿಗಳ ಹಾರೈಕೆ ಫಲವೋ ಬಾಲಿವುಡ್ ನಿರ್ಮಾಪಕರ ಅವಶ್ಯಕತೆಗೋ ಏನೋ ಸಮಿ ಅವರ ವೀಸಾ ಅವಧಿ ವಿಸ್ತರಣೆಗೊಂಡಿದೆ.

ಕಳೆದ ಮಂಗಳವಾರ ಅದ್ನಾನ್ ಸಮಿಗೆ ನೋಟಿಸ್ ಜಾರಿ ಮಾಡಿ ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿತ್ತು. ಅದ್ನಾನ್ ಸಮಿ ಪಡೆದಿದ್ದ ವೀಸಾ ಅವಧಿ ಅಕ್ಟೋಬರ್ 6, 2013ಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಈ ನೋಟಿಸ್ ಜಾರಿ ಮಾಡಿದ್ದರು.

ವೀಸಾ ವಿಸ್ತರಣೆ ಗೊಂದಲದ ಬಗ್ಗೆ ಮೊದಲ ಬಾರಿಗೆ ಮಾತನಾಡಿರುವ ಅದ್ನಾನ್ ಸಮಿ, ವೀಸಾ ಅವಧಿ ಅಕ್ಟೋಬರ್ 6, 2013ಕ್ಕೆ ಕೊನೆಗೊಂಡಿದೆ ನಿಜ. ದೆಹಲಿಯಲ್ಲಿರುವ ಗೃಹ ಇಲಾಖೆ ವ್ಯವಹಾರ ಸಚಿವಾಲಯ(MHA)ಗೆ ಸೆ.14,2013ರಂದೇ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಸೂಕ್ತ ದಾಖಲಾತಿ ಒದಗಿಸುವಲ್ಲಿ ವಿಳಂಬವಾಗಿತ್ತು. ಹೀಗಾಗಿ ನನ್ನ ವೀಸಾ ಅವಧಿ ವಿಸ್ತರಣೆ ಪ್ರಕ್ರಿಯೆ ಮುಗಿಯುವ ತನಕ ನಾನು ಕಾನೂನು ಬದ್ಧವಾಗಿ ಭಾರತದಲ್ಲೇ ಉಳಿಯಬೇಕಾಗುತ್ತದೆ' ಎಂದಿದ್ದಾರೆ.

Visa Row: Pakistani singer Adnan Sami wins battle; Bollywood relieved

ವಾರದ ಹಿಂದೆ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ಚಿತ್ರಪಥ್ ಕರ್ಮಚಾರಿ ಸೇನಾ ಸಹ ಅದ್ನಾನ್ ಸಮಿ ವಿಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವ ಬಗ್ಗೆ ಆಕ್ಷೇಪ ಎತ್ತಿತ್ತು. ಅಲ್ಲದೇ, ದೇಶ ಬಿಟ್ಟು ತೆರಳುವಂತೆ ಸೇನೆ ಆಗ್ರಹಿಸಿತ್ತು. ಸಂಗೀತ ಸಂಯೋಜಕ ಅದ್ನಾನ್ ಸಮಿ ಅವರು ತಮ್ಮ ವೀಸಾ ಅವಧಿಯನ್ನು ನವೀಕರಣಗೊಳಿಸಲು 30 ದಿನಗಳ ಕಾಲ ಕಾಲಾವಕಾಶ ಕೂಡಾ ನೀಡಲಾಗಿತ್ತು.

ಆದರೆ, ಯಾವುದೇ ಕಾರಣಕ್ಕೂ ಪಾಕಿಸ್ತಾನಿ ಗಾಯಕನಿಗೆ ವೀಸಾ ವಿಸ್ತರಣೆ ಅವಕಾಶ ನೀಡಬಾರದು ಎಂದು ಸೇನಾ ಆಗ್ರಹಿಸಿತ್ತು. ನಮ್ಮ ದೇಶದಲ್ಲೇ ಅನೇಕ ಪ್ರತಿಭಾವಂತ ಕಲಾವಿದರಿದ್ದರೆ ಅವರಿಗೆ ಸೂಕ್ತ ಅವಕಾಶಗಳಿಲ್ಲ. ಪಾಕಿಸ್ತಾನಿಗಳು ಬಂದು ಇಲ್ಲಿ ನಮ್ಮನ್ನು ರಂಜಿಸುವುದು ಬೇಡ. ಇಲ್ಲಿ ದುಡ್ಡು ಸಂಪಾದನೆ ಮಾಡಿ ಪಾಕಿಸ್ತಾನಕ್ಕೆ ಕಳಿಸುತ್ತಾರೆ. ಅದೇ ಹಣವನ್ನು ನಮ್ಮ ದೇಶದ ವಿರುದ್ಧ ಪಾಕಿಸ್ತಾನ ಬಳಸುತ್ತದೆ. ಅದ್ನಾನ್ ಸಮಿ ಕೂಡಲೇ ದೇಶ ತೊರೆಯಲಿ ಎಂದು ಸೇನಾ ಆಗ್ರಹಿಸಿತ್ತು.

ತನ್ನದೇ ಆದಂತಹ ವಿಶಿಷ್ಟ ಶೈಲಿಗೆ ಹೆಸರಾಗಿದ್ದ ಗಾಯಕ ಅದ್ನಾನ್ ಸಾಮಿ ಅವರು ಭಾರಿ ತೂಕದ ದೇಹವನ್ನು ಕರಗಿಸಿ ಬಾಲಿವುಡ್ ಹೀರೋಗಳ ರೀತಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ನಂತರ ದಾಂಪತ್ಯ ಕಲಹ,ವಿವಾಹ ವಿಚ್ಛೇದನ ಪ್ರಕರಣಗಳಿಂದ ತೀವ್ರವಾಗಿ ತೊಂದರೆಗೆ ಒಳಗಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+