ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮತ್ತೆ ಹಕ್ಕಿ ಜ್ವರ: 25000 ಕೋಳಿಗಳನ್ನು ಕೊಲ್ಲಲು ನಿರ್ಧಾರ

|
Google Oneindia Kannada News

ಥಾಣೆ, ಫೆಬ್ರವರಿ 22: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಈಗ ಹಕ್ಕಿಜ್ವರದ ಭೀತಿ ಹೆಚ್ಚಾಗುತ್ತಿದೆ. ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಕೆಲವು ಪಕ್ಷಿಗಳಲ್ಲಿ ಹಕ್ಕಿ ಜ್ವರ ಸೋಂಕು ಪತ್ತೆಯಾಗಿದ್ದು ಆತಂಕ ಹುಟ್ಟುಹಾಕಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರವು ಎರಡೂ ಜಿಲ್ಲೆಗಳಲ್ಲಿ ಸೋಂಕಿನ ಹಾಟ್‌ಸ್ಪಾಟ್‌ಗಳ ಕಿಲೋಮೀಟರ್ ವ್ಯಾಪ್ತಿಯೊಳಗೆ 25,000 ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಿದೆ. ಜೊತೆಗೆ ಸೋಂಕಿತ ಜಮೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪ್ರತ್ಯೇಕಿಸಲಾಗಿದೆ ಎಂದು ಮಹಾರಾಷ್ಟ್ರದ ಪಶುಸಂಗೋಪನೆ ಸಚಿವ ಸುನಿಲ್ ಕೇದಾರ್ ಮಂಗಳವಾರ (ಫೆಬ್ರವರಿ 22) ಹೇಳಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ-ವಿರಾರ್ ಪ್ರದೇಶದ ಕೋಳಿ ಫಾರಂನಲ್ಲಿ ಪಕ್ಷಿಗಳ ನಡುವೆ ಸಾಮಾನ್ಯವಾಗಿ ಹಕ್ಕಿ ಜ್ವರ ಎಂದು ಕರೆಯಲ್ಪಡುವ ಏವಿಯನ್ ಇನ್ಫ್ಲುಯೆನ್ಸ ಪತ್ತೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಥಾಣೆಗೆ ಸೋಂಕು ಹರಡಿದ ನಂತರ ಪಾಲ್ಘರ್‌ನಲ್ಲಿ ಈ ಹಕ್ಕಿ ಜ್ವರ ವರದಿಯಾಗಿದೆ.

ಹಕ್ಕಿ ಜ್ವರ ಸೋಂಕನ್ನು ಖಚಿತಪಡಿಸಲು ಶುಕ್ರವಾರ ತಡರಾತ್ರಿ ಭೋಪಾಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ನ ನ್ಯಾಷನಲ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಪ್ರಯೋಗಾಲಯಕ್ಕೆ ಕಳುಹಿಸಲಾದ ಮಾದರಿಗಳ ಫಲಿತಾಂಶದಿಂದ ಈ ಮಾಹಿತಿ ಲಭ್ಯವಾಗಿದೆ. ವಸಾಯಿ ತಾಲೂಕಿನ ಅಗಶಿ ಮತ್ತು ವಟಾರ್‌ನಲ್ಲಿ ಕೋಳಿ ಮತ್ತು ಕ್ವಿಲ್ ಸೇರಿದಂತೆ ಕೋಳಿಗಳ ಮಾದರಿಗಳಲ್ಲಿ ಎಚ್5ಎನ್1 ಪಾಸಿಟಿವ್ ಕಂಡುಬಂದಿದೆ.

ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ: ಚಾಮರಾಜನಗರದ ಗಡಿಯಲ್ಲಿ ಕಟ್ಟೆಚ್ಚರ
ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಹಕ್ಕಿ ಜ್ವರ

ಕಳೆದ ವಾರ ಥಾಣೆ ಜಿಲ್ಲೆಯ ಶಾಹಪುರದ ವೆಲ್ಹೋಳಿ ಪ್ರದೇಶದಲ್ಲಿ 300 ಕ್ಕೂ ಹೆಚ್ಚು ಕೋಳಿಗಳು ಸತ್ತವು. ತಕ್ಷಣ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಮಾದರಿಗಳನ್ನು ಪುಣೆಯ ಲ್ಯಾಬ್‌ಗೆ ಕಳುಹಿಸಿದ್ದಾರೆ. ಹಕ್ಕಿಜ್ವರದ ಪಾಸಿಟಿವ್ ವರದಿ ಬಂದಿದೆ.ಅದರ ನಂತರವೇ ಕಲೆಕ್ಟರ್ 25,000 ಕ್ಕೂ ಹೆಚ್ಚು ಕೋಳಿಗಳನ್ನು ಕೊಂದು ಎಲ್ಲಾ ಮೊಟ್ಟೆಗಳನ್ನು ನಾಶಮಾಡಲು ಆದೇಶಿಸಿದ್ದಾರೆ. ಶೀಘ್ರದಲ್ಲೇ ಅದರ ನೆರೆಯ ಪಾಲ್ಘರ್ ಜಿಲ್ಲೆಯ ವಸೈ-ವಿರಾರ್ ಪ್ರದೇಶದ ಕೋಳಿ ಫಾರಂನಲ್ಲಿ ಪಕ್ಷಿಗಳಲ್ಲಿ ಸೋಂಕು ಪತ್ತೆಯಾಗಿದೆ.

Over 25,000 Birds Killed After Bird Flu Cases Found in Thane, Palghar: Sunil Kedar
ಪಾಲ್ಘರ್‌ನ ಜಿಲ್ಲಾ ಪಶುವೈದ್ಯಾಧಿಕಾರಿ ಡಾ.ಪ್ರಶಾಂತ್ ಕಾಂಬ್ಳೆ ಅವರು ಕೋಳಿ ಫಾರಂನಲ್ಲಿ ಕೆಲವು ಪಕ್ಷಿಗಳು ಸಾವನ್ನಪ್ಪಿದ್ದು, ನಂತರ ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಪಕ್ಷಿಗಳಿಗೆ ಎಚ್5ಎನ್1 ಸೋಂಕು ತಗುಲಿರುವುದು ಪರೀಕ್ಷಾ ಫಲಿತಾಂಶದಿಂದ ದೃಢಪಟ್ಟಿದೆ ಎಂದಿದ್ದಾರೆ.

ಏವಿಯನ್ ಇನ್ಫ್ಲುಯೆನ್ಸ (H5N1) ಒಂದು ಸೋಂಕು. ಇದು ಮುಖ್ಯವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪಕ್ಷಿಗಳಿಂದ ಮನುಷ್ಯರಿಗೆ ಹರಡಬಹುದು. ಹಕ್ಕಿಜ್ವರದ ಅತ್ಯಂತ ಸಾಮಾನ್ಯ ವಿಧವೆಂದರೆ H5N1, ಮನಷ್ಯರು ಆ ವೈರಸ್ ಸಂಪರ್ಕಕ್ಕೆ ಬಂದರೆ ಇದು ಮನುಷ್ಯರು ಮತ್ತು ಇತರ ಪ್ರಾಣಿಗಳಿಗೆ ಸುಲಭವಾಗಿ ಹರಡುತ್ತದೆ. ಆದಾಗ್ಯೂ, ಈ ವೈರಸ್‌ಗಳು ಮನುಷ್ಯರಿಂದ ಮನುಷ್ಯನಿಗೆ ಹರಡುವ ಸಾಮರ್ಥ್ಯವನ್ನು ಹೊಂದಿಲ್ಲ.

Over 25,000 Birds Killed After Bird Flu Cases Found in Thane, Palghar: Sunil Kedar
ಒಂದು ವರ್ಷದ ಹಿಂದೆ, ಹಕ್ಕಿಜ್ವರವು ಮಹಾರಾಷ್ಟ್ರದ ಆರು ಜಿಲ್ಲೆಗಳಲ್ಲಿ ಮತ್ತು ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನವಪುರ ಪ್ರದೇಶವನ್ನು ಬಾಧಿಸಿತು. ವಲಸೆ ಹಕ್ಕಿಗಳು ಜ್ವರಕ್ಕೆ ಕಾರಣವೆಂದು ವರದಿಯಾಗಿತ್ತು. ಜೊತೆಗೆ ರಾಜ್ಯದಾದ್ಯಂತ ಒಂದು ಮಿಲಿಯನ್ ಪಕ್ಷಿಗಳು ಸಾವನ್ನಪ್ಪಿದವು. ಈ ಹಿಂದೆ 2006ರಲ್ಲಿ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರದ ದೊಡ್ಡ ಅಲೆ ಇತ್ತು.

ಎಲ್ಲೆಲ್ಲಿ ಹಕ್ಕಿ ಜ್ವರ ಪತ್ತೆ?

ಕಳೆದ ವಾರ ಬಿಹಾರದ ಜಮೀನೊಂದರಲ್ಲಿರುವ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಅದರಲ್ಲಿದ್ದ 3,859 ಕೋಳಿಗಳ ಪೈಕಿ 787 ಕೋಳಿಗಳು ಮೃತಪಟ್ಟಿವೆ. ಮತ್ತೊಂದೆಡೆ, ಮಹಾರಾಷ್ಟ್ರದ ಠಾಣೆ ಹಾಗೂ ಪಾಲ್ಘರ್‌ ಜಿಲ್ಲೆಗಳಲ್ಲಿರುವ ಕೋಳಿ ಫಾರಂಗಳಲ್ಲಿ ಎಚ್‌5ಎನ್‌1 ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಅಲ್ಲದೆ, ಠಾಣೆಯಲ್ಲಿಈಗಾಗಲೇ 25 ಸಾವಿರ ಕೋಳಿಗಳ ಹತ್ಯೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

English summary
Days after cases of bird flu (avian influenza) were found in some birds in Thane and Palghar districts of Maharashtra, the state government made a decision to kill over 25,000 birds in one km radius of infection hotspots in both districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X