ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥ ಪವಾಡ! ಮುಂಬೈಯಲ್ಲಿ ಮಗುವನ್ನು ಬದುಕಿಸಿತು ಮರ!

|
Google Oneindia Kannada News

ಮುಂಬೈ, ಜನವರಿ 04: ಕೆಲವೊಮ್ಮೆ ಪವಾಡಗಳ ಬಗ್ಗೆ ನಂಬಿಕೆ ಹುಟ್ಟಿಸುವಂಥ ಘಟನೆಗಳು ಘಟಿಸಿಬಿಡುತ್ತವೆ.

ಮುಂಬೈಯಲ್ಲಿ ಅಂಥದೇ ಒಂದು ಘಟನೆ ಗುರುವಾರ ಬೆಳಗ್ಗೆ ನಡೆಯಿತು. ಇಲ್ಲಿನ ಬಿ ಎಸ್ ದೇವಾಶಿ ರಸ್ತೆಯಲ್ಲಿ ಗೋಪಿ ಕೃಷ್ಣನ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದ ಹದಿನಾಲ್ಕು ತಿಂಗಳ ಮಗುವೊಂದು ಯಾವುದೇ ಪ್ರಾಣಾಪಾಯವಿಲ್ಲದೆ ಬದುಕುಳಿದ ಘಟನೆ ನಡೆದಿದೆ.

ಅಚ್ಚರಿ ಆದರೂ ನಿಜ.. ಇಲ್ಲಿ ನಾಲ್ಕು ತಿಂಗಳ ಮಗು ಮಾತನಾಡುತ್ತಿದೆ!ಅಚ್ಚರಿ ಆದರೂ ನಿಜ.. ಇಲ್ಲಿ ನಾಲ್ಕು ತಿಂಗಳ ಮಗು ಮಾತನಾಡುತ್ತಿದೆ!

ನಾಲ್ಕನೇ ಮಹಡಿಯಿಂದ ಬಿದ್ದರೆ ದೊಡ್ಡವರೇ ಬದುಕುವುದು ಕಷ್ಟ. ಅಂಥಾದ್ದರಲ್ಲಿ ಹದಿನಾಲ್ಕು ತಿಂಗಳ ಮಗು ಬದುಕಿದ್ದು ಹೇಗೆ? ಆ ಮಗುವನ್ನು ರಕ್ಷಿಸಿದ್ದು ಯಾರು? ಅಷ್ಟು ಎತ್ತರದಿಂದ ಬಿದ್ದರೂ ಮಗು ಯಾವ ಪ್ರಾಣಾಪಾಯವಿಲ್ಲದೆ ಬದುಕಿದ್ದು ಹೇಗೆ? ಇಲ್ಲಿದೆ ವಿವರ ಕೇಳಿ...

ನಾಲ್ಕನೇ ಮಹಡಿಯಿಂದ ಬಿದ್ದ ಮಗು

ನಾಲ್ಕನೇ ಮಹಡಿಯಿಂದ ಬಿದ್ದ ಮಗು

ನಾಲ್ಕನೇ ಮಹಡಿಯಲ್ಲಿದ್ದ ಮನೆಯ ಹಾಲ್ ನಲ್ಲಿ ಆಟವಾಡುತ್ತಿದ್ದ ಅಥರ್ವ ಎಂಬ ಮಗು ಕಿಟಕಿಯ ಸ್ಲೈಡಿಂಗ್ ಬಾಗಿಲು ತೆರೆದಿದ್ದಿದ್ದನ್ನು ಕಂಡು ಅಲ್ಲಿಗೆ ಆಟವಾಡಲು ತೆರಳಿದ್ದಾನೆ. ಈ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕಿಟಕಿಯ ಬಾಗಿಲು ತೆರೆದಿದೆ ಎಂಬುದು ತಿಳಿಯದ ಕುಟುಂಬದ ಇತರರು ಆ ಮಗುವಿನ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. ಆದರೆ ಮಗ ಜೋರಾಗಿ ಕೋಗುತ್ತಿದ್ದಂತೆಯೇ ಗಾಬರಿಗೊಂಡ ತಂದೆ ಅಜಿತ್ ಬಾರ್ಕಡೆ, ತಾಯಿ ಜ್ಯೋತಿ ಮತ್ತು ಇತರರು ಓಡಿ ಬಂದು ನೋಡಿದರೆ ಮಗು ರಸ್ತೆಯಲ್ಲಿ ಬಿದ್ದಿದೆ!

ಪವಾಡದ ಮರ!

ಪವಾಡದ ಮರ!

ಹತ್ತಿರ ಬಂದು ನೋಡಿದರೆ ಮಗುವಿಗೆ ಚಿಕ್ಕಪುಟ್ಟ ಗಾಯವಲ್ಲದೆ ಏನೂ ಆಗಿಲ್ಲ! ಮಗುವಿನ ಪಕ್ಕದಲ್ಲೇ ಮರದ ಟೊಂಗೆಯೊಂದು ಮುರಿದು ಬಿದ್ದಿತ್ತು. ಕಿಟಕಿಯಿಂದ ಆಯತಪ್ಪಿ ಕೆಳಗೆ ಬಿದ್ದ ಮಗು ಮರದ ಟೊಂಗೆಯ ಮೇಲೆ ಬಿದ್ದಿದೆ. ನಂತರ ಮರದ ಟೊಂಗೆ ಮುರಿದು ಮಗುವಿನ ಸಮೇತ ಕೆಳಗೆ ಬಿದ್ದಿದೆ. ಮಗು ಯಾವ ಪ್ರಾಣಾಪಾಯವಿಲ್ಲದೆ ಪಾರಾಗಿದ್ದು ಅಚ್ಚರಿ ಮೂಡಿಸಿದೆ.

ವಿಡಿಯೋ:ಚಲಿಸುತ್ತಿರುವ ರೈಲಿಂದ ಬಿದ್ದರೂ ಪವಾಡಸದೃಶವಾಗಿ ಪಾರಾದ ಯುವತಿವಿಡಿಯೋ:ಚಲಿಸುತ್ತಿರುವ ರೈಲಿಂದ ಬಿದ್ದರೂ ಪವಾಡಸದೃಶವಾಗಿ ಪಾರಾದ ಯುವತಿ

ಅಚಾತುರ್ಯ ನಡೆದಿದ್ದು ಹೇಗೆ?

ಅಚಾತುರ್ಯ ನಡೆದಿದ್ದು ಹೇಗೆ?

ಬಟ್ಟೆ ಒಣಗಿಸುವುದಕ್ಕೆಂದು ಕಿಟಕಿಯ ಬಳಿ ತೆರಳಿದ್ದ ಅಥರ್ವನ ಅಜ್ಜಿ ಕಿಟಕಿ ಮುಚ್ಚುವುದನ್ನು ಮರೆತಿದ್ದರು. ಕುಟಕಿಯ ಬಾಗಿಲನ್ನು ಸರಿಯಾಗಿ ಮುಚ್ಚಿಲ್ಲ ಎಂಬುದು ತಿಳಿಯದ ಮಗು ಕಿಟಕಿಯಿಂದ ಆಚೆ ಇಣುಕುವುದಕ್ಕೆ ಹೋಗಿ ಆಯತಪ್ಪಿ ಬಿದ್ದುಬಿಟ್ಟಿದೆ. ಆದ್ದರಿಂದಲೇ ಈ ಅಚಾತುರ್ಯ ನಡೆದಿದೆ ಎಂದು ಕುಟುಂಬ ತಿಳಿಸಿದೆ.

ಮಕ್ಕಳಿರುವ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆಯೇ!

ಮಕ್ಕಳಿರುವ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆಯೇ!

ಚಿಕ್ಕ ಮಕ್ಕಳಿರುವ ಮನೆಯಲ್ಲಿ ಎಷ್ಟೇ ಎಚ್ಚರಿಕೆಯಿಂದಿದ್ದರೂ ಕಡಿಮೆಯೇ. ಕಿಟಕಿ ಬಾಗಿಲು ತೆರೆದಿಡುವುದು, ಗ್ಯಾಸ್ ಸ್ಟೋವ್ ಗಳು ಅವರ ಕೈಗೆ ಸಿಕ್ಕುವಂತೆ ಇಡುವುದು, ಚಾಕು ಇನ್ನಿತರ ಅಪಾಯಕಾರಿ ವಸ್ತುಗಳು ಅವರಿಗೆ ಎಟಕುವಂತೆ ಎಲ್ಲೆಂದರಲ್ಲಿ ಬಿಸಾಡುವುದು... ಇತ್ಯಾದಿಗಳಿಂದ ಎಷ್ಟೋ ಅನಾಹುತಗಳು ಸಂಭವಿಸುತ್ತವೆ. ಆದ್ದರಿಂದ ಮನೆಯಲ್ಲಿ ಚಿಕ್ಕ ಮಕ್ಕಳಿರುವಾಗ ಮೈತುಂಬ ಕಣ್ಣಾಗಿರುವುದು ಒಳ್ಳೆಯದು.

ರಾಯರ ಮಂತ್ರಾಕ್ಷತೆಯಾಯ್ತು ರತ್ನಖಚಿತ ಸಾಲಿಗ್ರಾಮ! ಬಾಗಲಕೋಟೆಯಲ್ಲಿ ಈ ಪವಾಡ ನಡೆದದ್ದು ಹೇಗೆ?ರಾಯರ ಮಂತ್ರಾಕ್ಷತೆಯಾಯ್ತು ರತ್ನಖಚಿತ ಸಾಲಿಗ್ರಾಮ! ಬಾಗಲಕೋಟೆಯಲ್ಲಿ ಈ ಪವಾಡ ನಡೆದದ್ದು ಹೇಗೆ?

English summary
A 14-month-old child fell from his fourth-floor home in Mumbai on Thursday but survived and is being treated in hospital for serious injuries. His fall was interrupted by a tree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X