60 ವರ್ಷದೊಳಗಿನ ಓಮಿಕ್ರಾನ್ ಸೋಂಕಿತರಿಗೆ ಪ್ಯಾರಾಸಿಟಮಾಲ್ ನೀಡಬಹುದು

ಮುಂಬೈ, ಜನವರಿ 20: ಯಾವುದೇ ಗಂಭೀರ ಸ್ವರೂಪದ ಕಾಯಿಲೆಗಳಿಲ್ಲದ 60ವರ್ಷದೊಳಗಿನ ಓಮಿಕ್ರಾನ್ ಸೋಂಕಿತರಿಗೆ ಪ್ಯಾರಾಸಿಟಮಾಲ್ ಮಾತ್ರೆ ನೀಡಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಮಹಾರಾಷ್ಟ್ರದ ಕೋವಿಡ್ ಕಾರ್ಯಪಡೆ ಸದಸ್ಯ ಡಾ. ಶಶಾಂಕ್ ಜೋಶಿ ಮಾಹಿತಿ ನೀಡಿದ್ದಾರೆ. ಆದರೆ ಒಂದು ವಿಚಾರವನ್ನು ನೆನಪಿಡಲೇಬೇಕಾಗಿದ್ದು, 18 ವರ್ಷಕ್ಕಿಂತ ಕಡಿಮೆ, ಗರ್ಭಿಣಿಯರು ಅಥವಾ ಆಸ್ಪತ್ರೆ ದಾಖಲಾತಿ ಅಗತ್ಯವಿರುವ ರೋಗಿಗಳಿಗೆ ಪ್ಯಾರಾಸಿಟಮಾಲ್‌ ಅನ್ನು ಶಿಫಾರಸು ಮಾಡಬಾರದು ಎಂದು ಕೂಡ ಹೇಳಿದ್ದಾರೆ.

ಮುಂಬೈನ ಲೀಲಾವತಿ ಆಸ್ಪತ್ರೆಯ ಎಂಡೊಕ್ರಿನಾಲಜಿಸ್ಟ್‌ ಜೋಶಿ, ಎರಡು ದಿನಗಳಿಂದ ನಿರಂತರ ಜ್ವರದಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟ ಒಂದಕ್ಕಿಂತ ಹೆಚ್ಚು ರೋಗಗಳಿಂದ ಬಳಲುತ್ತಿರುವವರಿಗೆ ಮಾಲ್‌ನುಫಿರಾವಿರ್‌ನಂತಹ ಆಂಟಿವೈರಲ್‌ಗಳನ್ನು ಸೂಚಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

Omicron Patients Below 60 Years Can Take Paracetamol, Says Expert

ಕೋವ್ಯಾಕ್ಸಿನ್ ಲಸಿಕೆ ಪಡೆದಿರುವ ಹದಿಹರೆಯದವರಿಗೆ ಪ್ಯಾರಾಸಿಟಮಾಲ್ ಅಥವಾ ನೋವು ನಿವಾರಕಗಳನ್ನು ಶಿಫಾರಸು ಮಾಡಿಲ್ಲ ಎಂದು ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ.

ಸೋಂಕಿನ ಲಕ್ಷಣಗಳು ಶುರುವಾದ 72 ಗಂಟೆಗಳ ಒಳಗೆ ಅಧಿಕ ರಕ್ತದೊತ್ತಡ, ಮಧುಮೇಹಿಗಳು, ರೋಗನಿರೋಧಕ ಔಷಧವನ್ನು ಸೇವಿಸುವ ಜನರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಕೋವಿಡ್‌ನಿಂದ ಹೆಚ್ಚಿನ ಅಪಾಯದ ಗುಣಪಿನಲ್ಲಿರುವ ರೋಗಿಗಳಿಗೆ ಪ್ಯಾರಾಸಿಟಮಾಲ್ ನೀಡಬಹುದು ಎಂದೂ ತಿಳಿಸಿದ್ದಾರೆ.

ಯಾವುದೇ ಕಮಾರ್ಬಿಡಿಟಿಗಳಿಲ್ಲದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓಮಿಕ್ರಾನ್ ರೋಗಿಗಳು ಪ್ಯಾರಾಸಿಟಮಾಲ್‌ನೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದಾರೆ.

ಕೆಮ್ಮು ಸಾಮಾನ್ಯವಾಗಿ ದೇಹದಲ್ಲಿ ಕಫ ಶೇಖರೆಗೊಂಡು ಕೆಮ್ಮು ಕಾಣಿಸಿಕೊಳ್ಳುತ್ತದೆ. ಅವರನ್ನು ಪರೀಕ್ಷಿಸಿದಾಗ ಓಮಿಕ್ರಾನ್​ ಇರುವುದು ದೃಢಪಟ್ಟಿದೆ. ಹೀಗಾಗಿ, ಕೆಮ್ಮು ಕೂಡ ಓಮಿಕ್ರಾನಿನ ಮೊದಲ ಲಕ್ಷಣವಾಗಿದೆ. ಆದ್ದರಿಂದ ಈ ನಿಮಗೆ 2 ದಿನಕ್ಕಿಂತ ಹೆಚ್ಚು ಕೆಮ್ಮು ಮುಂದುವರೆದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ತಜ್ಞರು.

ಮೂಗಿನಲ್ಲಿ ಸೋರುವಿಕೆ ಉಸಿರು ಕಟ್ಟುವುದು ಅಥವಾ ನಿರಂತರವಾಗಿ ಮೂಗಿನಲ್ಲಿ ಸೋರಿಕೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಯುಕೆಯ ಒಂದು ಅಧ್ಯಯನದ ಪ್ರಕಾರ ಶೀತ, ತಲೆನೋವು, ದಣಿವು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಓಮಿಕ್ರಾನ್​ ಸೋಂಕು ದೃಢಪಡುತ್ತಿದೆ. ಈಗಂತೂ ಚಳಿಗಾಲ ಶೀತದಿಂದ ಬಳಲುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ನಿಮ್ಮನ್ನು ನೀವು ಬೆಚ್ಚಗಿರಿಸಿಕೊಳ್ಳಿ.

ಆಯಾಸ ಸಾಮಾನ್ಯವಾಗಿ ಶೀತ, ನೆಗಡಿಯಾದರೆ ಆಯಾಸ ಸಾಮಾನ್ಯ. ಆದರೆ ಓಮಿಕ್ರಾನ್​ ಲಕ್ಷಣವಾಗಿದ್ದರೆ ನಿಮಗೆ ಅತಿಯಾದ ಸುಸ್ತು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಒಳಿತು. ಮತ್ತು ಸರಿಯಾದ ಸಮಯ ಕೂಡ ಹೌದು.

ಅತಿಯಾದ ಗಂಟಲು ನೋವು ಕೆಲವರಿಗೆ ಹವಾಮಾನದ ಬದಲಾವಣೆ, ಅಹಾರದಲ್ಲಿ ವ್ಯತ್ಯಾಸವಾದರೂ ಗಂಟಲು ನೋವು ಕಾಣಿಸಕೊಳ್ಳುತ್ತದೆ. ಆದರೆ ನೆನಪಿಡಿ ಅತಿಯಾದ ಗಂಟಲು ನೋವು ಕೂಡ ಓಮಿಕ್ರಾನ್​ ಸೋಂಕಿನ ಒಂದು ಲಕ್ಷಣವಾಗಿದೆ. ಹೀಗಾಗಿ ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಬಿಸಿ ನೀರಿನಿಂದ ಗಂಟಲು ಸ್ವಚ್ಛಗೊಳಿಸಿ.

ತಲೆನೋವು ತಲೆನೋವು ಹಲವು ಕಾರಣಗಳಿಗೆ ಬರುತ್ತದೆ. ಅದೇ ರೀತಿ ಓಮಿಕ್ರಾನ್​ ಸೋಂಕಿನ ಲಕ್ಷಣವೂ ಹೌದು . ಆದ್ದರಿಂದ ತೆಲೆನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರವಹಿಸಿರಿ.

ಸ್ನಾಯುಗಳಲ್ಲಿ ನೋವು ನಿಮಗೆ ಸ್ನಾಯುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದರೆಡೆಗೆ ಹೆಚ್ಚು ಗಮನ ನೀಡಿ. ಚಳಿಗಾಲದಲ್ಲಿ ಸ್ನಾಯು, ಕೀಲು ನೋವು ಸಹಜ. ಆದರೆ ಓಮಿಕ್ರಾನ್​ ಕೂಡ ಅದೇ ಲಕ್ಷಣವನ್ನು ಹೊಂದಿದೆ. ಅಲ್ಲದೆ ಕೊರೊನಾ ಸೋಂಕಿನ ಲಕ್ಷಣವೂ ಆಗಿದೆ. ಕೊರೋನಾ ಸೋಂಕಿತರಲ್ಲಿ ಚೇತರಿಕೆಯ ಬಳಿಕವೂ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ.

ಜ್ವರ ಕೊರೊನಾ ಸೋಂಕು ಕಾಣಿಸಿಕೊಂಡಾಗಲೂ ದೇಹದ ತಾಪಮಾನ ಹೆಚ್ಚು. ಹೀಗಾಗಿ ಕೊರೊನಾ ಸೋಂಕಿತರಲ್ಲೂ ಜ್ವರ ಕಾಣಿಸಿಕೊಳ್ಳುತ್ತದೆ. ಇದು ಓಮಿಕ್ರಾನ್​ ಲಕ್ಷಣ ಕೂಡ ಹೌದು. ಲಸಿಕೆ ಪಡೆದವರಲ್ಲೂ ಈ ಮೇಲೆನ ಲಕ್ಷಣಗಳು ಕಂಡುಬಂದರೆ ಸೋಂಕು ತಗುಲಿದೆ ಎಂದರ್ಥ ಎಂದು ವೈದ್ಯರ ಮುನ್ಸೂಚನೆ ಉಲ್ಲೇಖಿಸಿ ವರದಿ ತಿಳಿಸಿದೆ.

Recommended Video

      Congress ನಲ್ಲಿ ಮತ್ತೆ ಬಿರುಕು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+