ಮುಂಬೈನ ಸಿದ್ದಿವಿನಾಯಕನಿಗೆ 'ಷೇರುದಾನ' ಮಾಡಿ

Posted By:
Subscribe to Oneindia Kannada

ಮುಂಬೈ, ಜುಲೈ 19: ನಿಮ್ಮ ಇಷ್ಟ ದೇವರಿಗೆ ನಿಮ್ಮ ಶಕ್ತ್ಯಾನುಸಾರ ಧನ, ಕನಕ, ವಸ್ತ್ರಾದಿಗಳನ್ನು ಅರ್ಪಿಸಿ ಎಂದು ಅರ್ಚಕರು ಪೂಜೆ ಸಂದರ್ಭದಲ್ಲಿ ಹೇಳುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಭಕ್ತರು ಏನು ಕೊಟ್ಟರೂ ಪಡೆಯುವ ದೇವರಿಗೆ ಈಗ ಷೇರುಗಳನ್ನು ಅರ್ಪಿಸಬಹುದು.

ಹೌದು, ಇಂಥದ್ದೊಂದು ವ್ಯವಸ್ಥೆಯನ್ನು ಮುಂಬೈನ ಅತ್ಯಂತ ಜನಪ್ರಿಯ ದೇಗುಲ ನೀಡುತ್ತಿದೆ. ಸಿದ್ಧಿವಿನಾಯಕ ದೇಗುಲ ಟ್ರಸ್ಟ್ ತನ್ನ ಭಕ್ತಾದಿಗಳ ಮುಂದೆ ಈ ಆಫರ್ ಇಟ್ಟಿದೆ. ಶ್ರೀಸಿದ್ಧಿವಿನಾಯಕ ದೇಗುಲಕ್ಕೆ ಪ್ರತಿ ತಿಂಗಳು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇವರಲ್ಲಿ ಅನೇಕ ಉದ್ಯಮಿಗಳು ತಮ್ಮ ಇಷ್ಟದ ದೇವರಿಗೆ ದಾನದತ್ತಿಗಳನ್ನು ಷೇರುಗಳ ಮೂಲಕ ನೀಡುವುದಾಗಿ ಕೋರಿದ್ದರು. [ಅತ್ತೆ ಹೆಸರಿನಲ್ಲಿ ಶಿರಡಿ ಸಾಯಿಬಾಬಾ ಹುಂಡಿಗೆ 40 ಲಕ್ಷ!]

Mumbai : Now offer stocks as donation to Lord Siddhivinayak

ಅದರಂತೆ, ಆನ್ ಲೈನ್ ಮೂಲಕ ದೇವರಿಗೆ ಇಂತಿಷ್ಟು ಷೇರುಗಳನ್ನು ದೇವರಿಗೆ ಅರ್ಪಿಸಬಹುದು. ಈ ಷೇರುಗಳೆಲ್ಲ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಷೇರುಗಳಾಗಿರಬೇಕು ಎಂಬ ನಿಬಂಧನೆಯೂ ಇದೆ. ಮುಂದೊಂದು ದಿನ ಮ್ಯೂಚುವಲ್ ಫಂಡ್, ಚಿನ್ನದ ಮೇಲಿನ ಹೂಡಿಕೆಯನ್ನು ದೇವರ ಪಾದಕ್ಕೆ ಹಾಕಬಹುದು.[ಡಿಮಾಟ್ ಖಾತೆ ತೆರೆದ ತಿರುಪತಿ ತಿಮ್ಮಪ್ಪ]

ದೇಗುಲದ ಟ್ರಸ್ಟಿಗಳು ಎಸ್ ಬಿಐನಲ್ಲಿ ಡಿಮ್ಯಾಂಡ್ ಖಾತೆ ಆರಂಭಿಸಿದ್ದು, ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಅಡಿಯಲ್ಲಿ ಬರುವ SBICAP ಸೆಕ್ಯುರಿಟೀಸ್ ಲಿಮಿಟೆಡ್ ನ ಖಾತೆಗೆ ನೇರವಾಗಿ ಷೇರುಗಳನ್ನು ಹಾಕಬಹುದು.

ನೇರವಾಗಿ ಷೇರು ಸರ್ಟಿಫಿಕೆಟ್ ಗಳನ್ನು ದೇವರಿಗೆ ಅರ್ಪಿಸುವ ವ್ಯವಸ್ಥೆ ಇನ್ನೂ ಜಾರಿಯಲ್ಲಿಲ್ಲ. ಆದರೆ, ಆನ್ ಲೈನ್ ಮೂಲಕ ಸುರಕ್ಷಿತವಾಗಿ ದೇವರಿಗೆ ಷೇರುಗಳನ್ನು ಅರ್ಪಿಸಬಹುದು.

ಕೇಂದ್ರ ಸರ್ಕಾರ ಚಿನ್ನದ ಮೇಲಿನ ಯೋಜನೆಗಳಲ್ಲಿ 44 ಕೆಜಿ ಚಿನ್ನವನ್ನು ಈ ದೇಗುಲದ ಟ್ರಸ್ಟ್ ಹೂಡಿಕೆ ಮಾಡಿದೆ. ಪ್ರತಿ ವರ್ಷ 75 ಕೋಟಿ ರು ಅಧಿಕ ಮೊತ್ತದ ನಗದು, 160 ಕೆಜಿಯಷ್ಟು ಚಿನ್ನವನ್ನು ಈ ದೇಗುಲಕ್ಕೆ ಭಕ್ತರು ಅರ್ಪಿಸುತ್ತಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Devotees visiting the famous Siddhivinayak temple in Mumbai city can offer donations to Lord Ganesha in the form of shares or stocks of listed entities in addition to traditional offerings in cash and gold.
Please Wait while comments are loading...