ಶಿವಸೇನೆ50-50 ಕೇಳುವುದರಲ್ಲಿ ತಪ್ಪೇನಿಲ್ಲ: ಶರದ್ ಪವಾರ್
ಮುಂಬೈ, ಅಕ್ಟೋಬರ್ 26: ಮಹಾರಾಷ್ಟ್ರದಲ್ಲಿ 50:50 ಸೂತ್ರಕ್ಕೆ ಒಪ್ಪಿದರೆ ಮಾತ್ರ ಸರ್ಕಾರ ರಚನೆಗೆ ಸಹಕಾರ ನೀಡುವುದಾಗಿ ಶಿವಸೇನೆ ಹೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, 'ಈ ಹಿಂದೆಯೂ ಬಿಜೆಪಿ-ಶಿವಸೇನೆ 50:50 ಸೂತ್ರದಡಿ ಸರ್ಕಾರ ರಚನೆ ಮಾಡಿತ್ತು, ಹಾಗಾಗಿ ಶೀವಸೇನೆ ಬೇಡಿಕೆ ಸರಿಯಿದೆ' ಎಂದರು.
'ಬಿಜೆಪಿ-ಶಿವಸೇನೆ 220 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿತ್ತು, ಆದರೆ ಎನ್‌ಸಿಪಿ-ಕಾಂಗ್ರೆಸ್‌ನ ಪ್ರಬಲ ವಿರೋಧದಿಂದ ಅದು ಸಾಧ್ಯವಾಗಿಲ್ಲ' ಎಂದು ಹೇಳಿದರು.

ಸುಲಭವಾಗಿ ಸರ್ಕಾರ ರಚಿಸುವ ಕನಸಲ್ಲಿದ್ದ ಬಿಜೆಪಿಗೆ ಭ್ರಮ ನೀರಸನವಾಗಿದ್ದು, ಶಿವಸೇನೆಯ ಮರ್ಜಿಗೆ ಬಿದ್ದು ಸರ್ಕಾರ ರಚಿಸುವಂತಾಗಿದೆ. ಶಿವಸೇನೆಯು 50:50 ಸೂತ್ರವನ್ನು ಬಿಜೆಪಿಯ ಮುಂದಿಟ್ಟಿದ್ದು, ಸಿಎಂ ಸ್ಥಾನವನ್ನು ಸಹ ಶಿವಸೇನೆ ಕೇಳುತ್ತಿದೆ ಎನ್ನಲಾಗುತ್ತಿದೆ.
ಶಿವಸೇನೆಯಿಂದ ಆದಿತ್ಯ ಠಾಕ್ರೆ ಸಿಎಂ ಸ್ಥಾನಕ್ಕೆ ಯತ್ನಿಸುತ್ತಿದ್ದರೆ, ಅತ್ತ ಬಿಜೆಪಿಯಿಂದಹಾಲಿ ಸಿಎಂ ದೇವೇಂದ್ರ ಫಡ್ನವಿಸ್ ಮತ್ತೆ ತಮ್ಮ ಸ್ಥಾನದಲ್ಲೇ ಮುಂದುವರೆಯಲು ಸಜ್ಜಾಗಿದ್ದಾರೆ. ಆದರೀಗ ಶಿವಸೇನೆ ಆಗ್ರಹದಿಂದ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟವಾಗಿದೆ.












Click it and Unblock the Notifications