ನೀರವ್ ಮೋದಿಗೆ ಸೇರಿದ ತೈಲ ಚಿತ್ರ ಕೋಟ್ಯಂತರ ಮೊತ್ತಕ್ಕೆ ಸೇಲ್
ಮುಂಬೈ, ಮಾರ್ಚ್ 27: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಲು ತನಿಖಾ ಸಂಸ್ಥೆ ಮುಂದಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನೀರವ್ಮೋದಿ ಅವರು ಹೊಂದಿರುವ ಎರಡು ತೈಲಚಿತ್ರಗಳನ್ನು ಮಂಗಳವಾರದಂದು ಹರಾಜು ಹಾಕಲಾಗಿದ್ದು, 54.88 ಕೋಟಿ ರು ಗೆ ಮಾರಾಟವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಮೋದಿ ಬಳಿ ಇರುವ ಭಾರತೀಯ ಖ್ಯಾತ ವರ್ಣಚಿತ್ರಕಾರ ರಾಜಾ ರವಿವರ್ಮಾ ಅವರ ಎರಡು ಪೇಟಿಂಗ್ಗಳನ್ನು ಜಾರೀ ನಿರ್ದೇಶನಾಲಯ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ವಿಎಸ್ ಗಾಯ್ತೊಂಡೆ ಚಿತ್ರಿಸಿರುವ ತೈಲ ವರ್ಣ ಚಿತ್ರವು 22 ಕೋಟಿ ರು ಗೆ ಮಾರಾಟವಾಗಿದ್ದರೆ, ತಿರುವಾಂಕೂರು ಮಹಾರಾಜರು ರಿಚರ್ಡ್ ಟೆಂಪಲ್ ಸ್ವಾಗತ ಚಿತ್ರ, ಬಂಕಿಂಗ್ ಹ್ಯಾಮ್ ಡ್ಯೂಕ್ ಚಿತ್ರವು 14 ಕೋಟಿರುಗೆ ಮಾರಾಟವಾಗಿದೆ.

ನೀರವ್ ಮೋದಿ ಒಡೆತನದ ಸುಮಾರು 173 ಪೇಂಟಿಂಗ್ಗಳು ಹಾಗೂ 11 ವಾಹನಗಳನ್ನು ಇಡಿ ಮಾರಾಟ ಮಾಡಲು ಮುಂದಾಗಿತ್ತು. ಸದ್ಯಕ್ಕೆ 68 ಪೇಟಿಂಗ್ ಗಳು ಆದಾಯ ತೆರಿಗೆ ಇಲಾಖೆ ವಶದಲ್ಲಿದೆ. ಈ ದುಬಾರಿ ಪೇಂಟಿಂಗ್ಗಳ ಒಟ್ಟು ಮೌಲ್ಯ 57.72 ಕೋಟಿ ರೂ ಎಂದು ಅಂದಾಜಿಸಲಾಗಿದೆ. ವೃತ್ತಿನಿರತ ಹರಾಜು ಸಂಸ್ಥೆ ಸ್ಯಾಫ್ರನ್ ಆರ್ಟ್
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪವನ್ನು ಹೊತ್ತುಕೊಂಡಿರುವ ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.












Click it and Unblock the Notifications