ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ವಿದ್ಯಾರ್ಥಿ ಸಂಶೋಧನೆ; ಹೊಸ ಮಾದರಿ ಪಿಪಿಇ ಕಿಟ್

|
Google Oneindia Kannada News

ಮುಂಬೈ, ಮೇ 24; ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರು, ಸೋಂಕಿತರ ಯೋಗಕ್ಷೇಮ ನೋಡಿಕೊಳ್ಳುವ ನರ್ಸ್‌ಗಳು ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಾರೆ. ಕಿಟ್ ಧರಿಸಿ ಕೆಲಸ ಮಾಡುವುದು ಎಷ್ಟು ಸವಾಲಿನ ಕೆಲಸ ಎಂಬುದು ಈಗಾಗಲೇ ಜನರಿಗೆ ತಿಳಿದಿದೆ.

ಪಿಪಿಇ ಕಿಟ್ ಧರಿಸುವವರಿಗೆ ಸಹಾಯಕವಾಗಲಿ ಎಂದು ಹೊಸ ಮಾದರಿ ಕಿಟ್ ತಯಾರು ಮಾಡಲಾಗಿದೆ. ಈ ಕಿಟ್ ಸಂಪೂರ್ಣ ವಿಭಿನ್ನವಾದ ಮತ್ತು ತಂಪಾದ ಅನುಭವವನ್ನು ನೀಡುತ್ತದೆ. ಮುಂಬೈನ ವಿದ್ಯಾರ್ಥಿ ನಿಶಾಲ್ ಸಿಂಗ್ ಇಂತಹ ಕಿಟ್ ಅಭಿವೃದ್ಧಿಪಡಿಸಿದ್ದಾರೆ.

ವಧುವಿಗೆ ಕೊರೊನಾ; ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ಜೋಡಿವಧುವಿಗೆ ಕೊರೊನಾ; ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ಜೋಡಿ

'ಕೋವ್-ಟೆಕ್' ಎಂದು ಹೆಸರಿನ ಸಾಂಧ್ರ ಮತ್ತು ಮಿತವ್ಯಯದ ಹೊಸ ಪಿಪಿಇ ಕಿಟ್‌ ಒಳಗೆ ಸುಲಭವಾಗಿ ಗಾಳಿ ಆಡಳು ಸಹಾಯ ಮಾಡುತ್ತದೆ. ಇದರಿಂದಾಗಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಸಹಾಯಕವಾಗಲಿದೆ.

ತಮಿಳುನಾಡಿನಲ್ಲಿ ಮತದಾನಕ್ಕಾಗಿ ಪಿಪಿಇ ಕಿಟ್ ಧರಿಸಿದ ಸಂಸದೆ ಕನಿಮೋಳಿ!ತಮಿಳುನಾಡಿನಲ್ಲಿ ಮತದಾನಕ್ಕಾಗಿ ಪಿಪಿಇ ಕಿಟ್ ಧರಿಸಿದ ಸಂಸದೆ ಕನಿಮೋಳಿ!

ಕೆ.ಜೆ. ಸೋಮಯ್ಯ ಇಂಜಿನಿಯರಿಂಗ್ ಕಾಲೇಜಿನ 2 ವರ್ಷದ ವಿದ್ಯಾರ್ಥಿ ನಿಹಾಲ್ ಈ ಕುರಿತು ಮಾತನಾಡಿದ್ದಾರೆ. "ಕೋವ್-ಟೆಕ್ ವೆಂಟಿಲೇಷನ್ ಸಿಸ್ಟಮ್ ಪಿಪಿಇನಲ್ಲಿ ಇರುವುದರಿಂದ ಫ್ಯಾನ್‌ ಕೆಳಗೆ ಕುಳಿತ ಅನುಭವ ನೀಡುತ್ತದೆ. ಇದು ಸುತ್ತಮುತ್ತಲಿನ ಗಾಳಿಯನ್ನು ಎಳೆದುಕೊಂಡು ಅದನ್ನು ಶೋಧಿಸಿ ಪಿಪಿಇ ಕಿಟ್‌ನೊಳಗೆ ಕಳಹಿಸುತ್ತದೆ" ಎಂದು ಹೇಳಿದ್ದಾರೆ.

ಪಿಪಿಇ ಕಿಟ್ ಧರಿಸಿ 25 ಕೆ.ಜಿ. ಚಿನ್ನ ಕಳ್ಳತನ; ಸಿಸಿ ಟಿ.ವಿಯಲ್ಲಿ ಸೆರೆಸಿಕ್ಕ ದೃಶ್ಯಪಿಪಿಇ ಕಿಟ್ ಧರಿಸಿ 25 ಕೆ.ಜಿ. ಚಿನ್ನ ಕಳ್ಳತನ; ಸಿಸಿ ಟಿ.ವಿಯಲ್ಲಿ ಸೆರೆಸಿಕ್ಕ ದೃಶ್ಯ

ಪಿಪಿಇ ಕಿಟ್‌ನೊಳಗೆ ಗಾಳಿ

ಪಿಪಿಇ ಕಿಟ್‌ನೊಳಗೆ ಗಾಳಿ

ಪಿಪಿಇ ಕಿಟ್ ಧರಿಸಿದಾಗ ಸಾಮಾನ್ಯವಾಗಿ ಗಾಳಿ ಆಡದ ಕಾರಣ ಅದನ್ನು ಧರಿಸುದವರು ಬೆವರುತ್ತಾರೆ. 'ಕೋವ್-ಟೆಕ್' ಕಿಟ್‌ ಗಾಳಿ ಪೂರೈಸಿ, ಹಿತಕರವಾದ ಅನುಭವ ನೀಡುತ್ತದೆ. ಈ ವ್ಯವಸ್ಥೆ ಕಿಟ್ ಧರಿಸಿದ ಕೇವಲ 100 ಸೆಕೆಂಡುಗಳ ಕಾರ್ಯಾಚರಣೆ ಆರಂಭಿಸುತ್ತೆ. ಇದರಿಂದಾಗಿ ಕಿಟ್ ಧರಿಸಿ ಕೆಲಸ ಮಾಡುವವರಿಗೆ ಸಹಾಯಕವಾಗಲಿದೆ.

ಕೋವ್ ಟೆಕ್ ಪರಿಕಲ್ಪನೆ ಹುಟ್ಟಿದ್ದು ಹೇಗೆ?

ಕೋವ್ ಟೆಕ್ ಪರಿಕಲ್ಪನೆ ಹುಟ್ಟಿದ್ದು ಹೇಗೆ?

ನಿಶಾಲ್ ತಾಯಿ ಡಾ. ಪೂನಮ್ ಕೌರ್ ಆದರ್ಶ್ ಪುಣೆಯಲ್ಲಿ ತಾವು ನಡೆಸುತ್ತಿರುವ ಆದರ್ಶ್ ಚಿಕಿತ್ಸಾಲಯದಲ್ಲಿ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿ ದಿನ ಮನೆಗೆ ಮರಳಿದಾಗ, ಪಿಪಿಇ ಕಿಟ್ ಧರಿಸಿ ಕಾರ್ಯ ನಿರ್ವಹಿಸಬೇಕಾದ ತಾವು ಮತ್ತು ತಮ್ಮಂತಹ ಇತರರು ಹೇಗೆ ಕಷ್ಟ ಅನುಭವಿಸುತ್ತಿದ್ದೇವೆ ಎಂಬುದನ್ನು ವಿವರಿಸುತ್ತಿದ್ದರು. 19 ವರ್ಷದ ನಿಶಾಲ್ ತಾವು ಹೇಗೆ ತಮ್ಮ ತಾಯಿ ಮತ್ತು ಇತರರಿಗೆ ಸಹಾಯ ಮಾಡಬಹುದು ಎಂದು ಯೋಚಿಸಿದಾಗ ರೂಪಗೊಂಡಿದ್ದು ಈ ಕೋವ್ ಟೆಕ್ ಕಿಟ್.

20 ದಿನದಲ್ಲಿ ಮಾದರಿ ಅಭಿವೃದ್ಧಿ

20 ದಿನದಲ್ಲಿ ಮಾದರಿ ಅಭಿವೃದ್ಧಿ

ನಿಹಾಲ್ ಪುಣೆಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ಡಾ. ಉಲ್ಲಾಸ್ ಖರುಲ್ ಮಾರ್ಗದರ್ಶನದೊಂದಿಗೆ 20 ದಿನಗಳಲ್ಲಿ ಮೊದಲ ಮಾದರಿಯನ್ನು ಅಭಿವೃದ್ಧಿಪಡಿಸಿದರು. ಡಾ. ಉಲ್ಲಾಸ್ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಗಾಳಿಯನ್ನು ಶೋಧಿಸುವ ಹೊರ ಕವಚದ ಮೇಲೆ ಸಂಶೋಧನೆ ನಡೆಸುವ ನವೋದ್ಯಮ ನಡೆಸುತ್ತಿದ್ದರು. ಇಲ್ಲಿಂದ, ನಿಹಾಲ್ ಅವರು ಶೋಧನೆ ದಕ್ಷತೆ ಮತ್ತು ಗಾಳಿಯ ಹರಿವಿನ ಗುಣಮಟ್ಟದ ನಡುವೆ ಗರಿಷ್ಠ ಸಮತೋಲನವನ್ನು ಸಾಧಿಸಲು ಯಾವ ರೀತಿಯ ಫಿಲ್ಟರ್ ಬಳಸಬೇಕು ಎಂಬ ಕಲ್ಪನೆಯನ್ನು ಪಡೆದರು.

ಸ್ಟಾರ್ಟ್‌ ಅಪ್ ಸ್ಥಾಪನೆ

ಸ್ಟಾರ್ಟ್‌ ಅಪ್ ಸ್ಥಾಪನೆ

ನಿಹಾಲ್ ವ್ಯಾಟ್ ಟೆಕ್ನೋವೇಶನ್ಸ್ ಎಂಬ ಸ್ಟಾರ್ಟ್‌ ಅಪ್ ಸ್ಥಾಪನೆ ಮಾಡಿದ್ದಾರೆ. ಹೊಸ ಕಿಟ್ ತಯಾರು ಮಾಡಲಾಗುತ್ತಿದೆ. ಪಿ.ಆರ್.ಎ.ವೈ.ಎ.ಎಸ್. ಅನುದಾನದ ಹೊರತಾಗಿ, ನವೋದ್ಯಮ ಸಹ ಆರ್.ಐ.ಐ.ಡಿ.ಎಲ್. ಮತ್ತು ಕೆ ಜೆ ಸೋಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಜಂಟಿಯಾಗಿ ಆಯೋಜಿಸಿರುವ ನ್ಯೂ ವೆಂಚರ್ ಇನ್ವೆಸ್ಟ್ಮೆಂಟ್ ಪ್ರೋಗ್ರಾಂನಿಂದ 5,00,000 ರೂ. ಬೆಂಬಲ ಪಡೆದಿದ್ದಾರೆ.

ಎಲ್ಲಿ ಬಳಕೆಯಾಗುತ್ತಿದೆ ಕಿಟ್?

ಎಲ್ಲಿ ಬಳಕೆಯಾಗುತ್ತಿದೆ ಕಿಟ್?

ಪ್ರಸ್ತುತ ಪುಣೆಯ ಸಾಯಿ ಸ್ನೇಹ್ ಆಸ್ಪತ್ರೆ ಮತ್ತು ಲೋಟಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಮಾದರಿ ಕಿಟ್ ಬಳಸಲಾಗುತ್ತಿದೆ. ಕಂಪನಿಯು ತನ್ನ ಉತ್ಪಾದನೆಯನ್ನು ಮೇ, ಜೂನ್ 2021ರಲ್ಲಿ ಹೆಚ್ಚಿಸಲು ಯೋಜಿಸಿದೆ. ಉತ್ಪನ್ನದ ಬೆಲೆ ಪ್ರತಿಯೊಂದಕ್ಕೆ 5,499 ರೂ. ಆಗುತ್ತದೆ ಮತ್ತು ಇದೇ ರೀತಿಯ ಸ್ಪರ್ಧೆಯಲ್ಲಿನ ಉತ್ಪನ್ನಗಳಿಗಿಂತ ಅಗ್ಗವಾಗಿದೆ. ತಂಡವು ಮತ್ತಷ್ಟು ಬೆಲೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.

English summary
Nihal Singh Adarsh a student from Mumbai come with the research and creativity called Cove Tech. The system will allow air flowing inside the PPE suit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X