ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿದ್ದೆಯಿಂದ ಎಬ್ಬಿಸಿದ ಕೋಪಕ್ಕೆ ವ್ಯಕ್ತಿಯ ಕೊಲೆ: 20 ವರ್ಷಗಳ ಬಳಿಕ ಜೀವಾವಧಿ

|
Google Oneindia Kannada News

ಮುಂಬೈ, ಜೂನ್ 29: ನಿದ್ದೆಯಿಂದ ಎಬ್ಬಿಸಿದ ಎನ್ನುವ ಕೋಪಕ್ಕೆ ಕೊಲೆ ಮಾಡಿದ್ದವನಿಗೆ 20 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿದೆ.

ಆತನನ್ನು ಕೊಲೆ ಮಾಡಿ ಕೊನೆಗೆ ತಾನು ಹುಚ್ಚನೆಂದು ನಟಿಸಿ ವಿಚಾರಣೆಯನ್ನು ಪದೇ ಪದೇ ಮುಂದೂಡುವಂತೆ ಮಾಡುತ್ತಿದ್ದ.

ಮುಂಬೈನ ಉಪನಗರಿ ಸಂತಾಕ್ರೂಜ್​ನಲ್ಲಿ ಖುಷಿ ಗಫಾರ್​ (50) ಮತ್ತು ಅಶೋಕ್​ ಯಾದವ್​ ರಸ್ತೆ ಬದಿಯಲ್ಲಿ ಅಕ್ಕಪಕ್ಕ ಮಲಗುತ್ತಿದ್ದರು. ಇಬ್ಬರ ನಡುವೆ ಸ್ನೇಹವೂ ಇತ್ತು. 1999ರಲ್ಲಿ ಅದೊಂದು ದಿನ ಅಶೋಕ್​ ಯಾದವ್​ ಗಾಢ ನಿದ್ದೆಯಲ್ಲಿದ್ದ ಗಫಾರ್​ನನ್ನು ಎಬ್ಬಿಸಿದ. ತನ್ನ ನಿದ್ದೆಗೆ ಅಡ್ಡಿಪಡಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಗಫಾರ್​ ತನ್ನ ಬಳಿಯಿದ್ದ ಚೂರಿಯಿಂದ ಇರಿದು ಅಶೋಕ್​ ಯಾದವ್​ನನ್ನು ಕೊಲೆ ಮಾಡಿದ್ದ.

Murder accused sentenced to life after 20 years

ಪೊಲೀಸರು ಗಫರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವಂತೆ 2001ರಲ್ಲಿ ಭ್ರಮಾಧೀನ (ಸ್ಕೀಜೋಫ್ರೇನಿಯಾ) ಮಾನಸಿಕ ಕಾಯಿಲೆಯಿಂದ ಬಳಲು ಆರಂಭಿಸಿದ್ದ.

ಸ್ನೇಹಿತನನ್ನು ಕೊಂದು ಆತ್ಮಹತ್ಯೆಯ ಕತೆ ಕಟ್ಟಿದ್ದ ವ್ಯಕ್ತಿಯ ಬಂಧನ ಸ್ನೇಹಿತನನ್ನು ಕೊಂದು ಆತ್ಮಹತ್ಯೆಯ ಕತೆ ಕಟ್ಟಿದ್ದ ವ್ಯಕ್ತಿಯ ಬಂಧನ

ನ್ಯಾಯಾಧೀಶರು ಕೇಳುತ್ತಿದ್ದ ಪ್ರಶ್ನೆಗಳಿಗೆ ಅಸಂಬದ್ಧ ಉತ್ತರಗಳನ್ನು ಕೊಡುತ್ತಿದ್ದ. ಹೀಗಾಗಿ ನ್ಯಾಯಾಧೀಶರು ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ಕೊಡಿಸಲು ಪೊಲೀಸರಿಗೆ ಸೂಚಿಸಿದ್ದರು. ಅದರಂತೆ ಚಿಕಿತ್ಸೆ ಕೊಡಿಸಿದ ಪೊಲೀಸರು ಆತ ಮಾನಸಿಕವಾಗಿ ಆರೋಗ್ಯವಾಗಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ಮತ್ತೆ ಕೋರ್ಟ್​ ವಿಚಾರಣೆಗೆ ಹಾಜರುಪಡಿಸಿದ್ದರು.

2012ರಲ್ಲಿ ಗಫಾರ್​ ಮತ್ತೊಮ್ಮೆ ಭ್ರಮಾಧೀನ ಮಾನಸಿಕ ಕಾಯಿಲಿಗೆ ತುತ್ತಾದವನಂತೆ ವರ್ತಿಸಲಾರಂಭಿಸಿದ. ಈ ಬಾರಿ ಕೂಡ ನ್ಯಾಯಾಲಯ ಚಿಕಿತ್ಸೆ ಕೊಡಿಸಲು ಪೊಲೀಸರಿಗೆ ಸೂಚಿಸಿತು. ಅದರಂತೆ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಸಮಗ್ರವಾಗಿ ತಪಾಸಣೆಗೆ ಒಳಪಡಿಸಲಾಯಿತು.

ನ್ಯಾಯಾಲಯ ಕೊನೆಗೂ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಆದರೆ ಘಟನೆ ನಡೆದಾಗಿನಿಂದ ವಿಚಾರಣೆ ಮುಗಿಯುವವರೆಗೂ ಅಂದಾಜು 20 ವರ್ಷ ಆತ ಜೈಲಿನಲ್ಲಿ ಇದ್ದುದರಿಂದ, ಆತನನ್ನು ಬಿಡುಗಡೆ ಮಾಡಬಹುದು ಎಂದು ಕೋರ್ಟ್​ ಹೇಳಿದೆ.

2019ರ ಫೆಬ್ರವರಿವರೆಗೆ ಥಾನೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಆತ ಮಾನಸಿಕವಾಗಿ ಆರೋಗ್ಯವಾಗಿದ್ದಾನೆ ಆತ ನಾಟಕವಾಡುತ್ತಿದ್ದ ಎಂದು ತಿಳಿದುಬಂದಿತ್ತು.

English summary
Murder accused sentenced to life after 20 years, life imprisonment to a man 20 years after he stabbed a person to death for waking him up from sleep in suburban Santacruz.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X